ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಉದ್ಯೋಗ ಮೇಳ, 50 ಜನ ಆಯ್ಕೆ

Last Updated 26 ಜನವರಿ 2023, 5:33 IST
ಅಕ್ಷರ ಗಾತ್ರ

ಸುರಪುರ: ‘ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜು ಪ್ರತಿಷ್ಠಿತ ಕಂಪನಿಗಳನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ನಿಯಮಿತವಾಗಿ ಆಯೋಜಿಸುತ್ತಿದೆ. ದೊಡ್ಡ ದೊಡ್ಡ ಕಂಪನಿಗಳಲ್ಲಿ ನಮ್ಮ ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದಾರೆ’ ಎಂದು ಕಾಲೇಜಿನ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ನಿಷ್ಠಿ ಹೇಳಿದರು.

ಶ್ರೀಗಿರಿ ಮಠದ ಮರಡಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಕಾಲೇಜಿನಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

‘ಸುರಪುರ ಸಂಸ್ಥಾನದ ಪ್ರಧಾನ ಮಂತ್ರಿಗಳಾಗಿದ್ದ ವೀರಪ್ಪ ನಿಷ್ಠಿ ಅವರು ನಿರ್ಮಿಸಿದ್ದ 101 ಮಠಗಳಲ್ಲಿ ಶ್ರೀಗಿರಿ ಮಠವೂ ಒಂದು. ಅವರು ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಕಲ್ಪಿಸಿದ್ದರು. ಅವರ ಹೆಸರನ್ನು ಎಂಜಿನಿಯರಿಂಗ್ ಕಾಲೇಜಿಗೆ ಇಟ್ಟಿದ್ದು ಇಲ್ಲಿ ಓದಿದ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ’ ಎಂದರು.

ಮೇಳದಲ್ಲಿ ಹಲವು ಖಾಸಗಿ ಕಂಪನಿಗಳು ಭಾಗವಹಿಸಿದ್ದವು. ಹಲವಾರು ಅಭ್ಯರ್ಥಿಗಳಿಗೆ ಸಂದರ್ಶಿಸಿ 50ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡರು.

ಅಕ್ವಟೆಕ್ ಕಂಪನಿಯ ಡಿಸೈನರ್ ಈಶ್ವರ ಕೋರಳ್ಳಿ, ಏಕ್ಸಿಸ್ ಬ್ಯಾಂಕಿನ ಹಿರಿಯ ಮಾರಾಟ ನಿರ್ವಾಹಕಿ ಸುರೇಖಾ ಪಾಟೀಲ, ಮುತ್ತೋಟ್ ಪೈನಾನ್ಸ್‌ನ ವೆಂಕಾರೆಡ್ಡಿ, ಟಿವಿಎಸ್ ಕಂಪನಿಯ ರಿತೇಶ, ಪ್ರಶಾಂತ ಕಲ್ಲಮಠ ಸಂದರ್ಶನ ನಡೆಸಿದರು.

ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜನ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಪ್ರಾಂಶುಪಾಲ ಡಾ. ಶರಣಬಸಪ್ಪ ಸಾಲಿ, ಮೋಹನರಡ್ಡಿ ದೇಸಾಯಿ, ಬಸವರಾಜ ಹೈತಾಪುರ, ಗಂಗಾಧರ ಹೂಗಾರ, ಆದಿನಾಥ ಮಹಾರಾಜ ಇದ್ದರು.
ರೇವಪ್ಪ ಪಾಟೀಲ ನಿರೂಪಿಸಿ ವಂದಿಸಿದರು. ವಿವಿಧ ಕಂಪನಿಗಳಿಗೆ ಆಯ್ಕೆಯಾದ ರಾಜಮ್ಮ, ಸಂತೋಷ ತಮ್ಮ ಅನಿಸಿಕೆ
ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT