ಹುಣಸಗಿ: ‘ಕ್ರಿಯಾತ್ಮಕ ವಿನೂತನ ಚಟುವಟಿಕೆಗಳ ಮುಖ್ಯ ಉದ್ದೇಶ ಹೊಂದಿರುವ ಕಲಿಕಾ ಹಬ್ಬದಲ್ಲಿ ಮಕ್ಕಳ ಕಲಿಕೆಯ ಪ್ರದರ್ಶನದ ಕಾರ್ಯಕ್ರಮವಾಗಿದೆ’ ಎಂದು ಸಿ.ಆರ್.ಪಿ ಷಣ್ಮುಖಪ್ಪ ನುಚ್ಚಿ ಹೇಳಿದರು.

ಹುಣಸಗಿ ತಾಲ್ಲೂಕಿನ ಬೈಲಾಪುರ ತಾಂಡಾದಲ್ಲಿ ಹಮ್ಮಿಕೊಂಡಿದ್ದ ವಜ್ಜಲ್ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಎಫ್ಎಲ್ಎನ್ ಕಲಿಕಾ ಭಾಗವಾಗಿ ಒಂದರಿಂದ ಐದನೇ ತರಗತಿವರೆಗಿನ ಮಕ್ಕಳ ಕಲಿಕೆಯ ವಿವಿಧ ಚಟುವಟಿಕೆಯ ಅನಾವರಣಗೊಳಿಸುವ ಕಾರ್ಯಕ್ರಮ ಇದಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿವೆ’ ಎಂದರು.

ಉಪನ್ಯಾಸಕ ತಾರಾನಾಥ್ ಚವ್ವಾಣ ಮಾತನಾಡಿ, ‘ಕಲಿಕಾ ಹಬ್ಬ, ಮೇಳ ಮುಂತಾದ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ಪ್ರೋತ್ಸಾಹ ನೀಡುವ ಜೊತೆಯಲ್ಲಿ ಉತ್ತಮ ಕಲಿಕೆ ಪೂರಕವಾಗಲಿದೆ, ಪರಸ್ಪರ ಸ್ಪರ್ದಾತ್ಮಕತೆಯ ಜೊತೆಯಲ್ಲಿ ಕಲಿಕಾ ವಾತಾವರಣ ಹೆಚ್ಚಾಗಲಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಂದಗಿಸಾ ಜಮಾಲಿ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಲಚಮಾ ನಾಯಕ, ಫೊಮಾ ನಾಯ್ಕ್, ಸುರೇಶ್ ಮಿಲ್ಟ್ರಿ, ಕೃಷ್ಣ ನಾಯಕ, ಲಾಲಸ, ಶ್ರೀಹರಿ ಕುಲಕರ್ಣಿ ಹಾಗೂ ವಜ್ಜಲ್ ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಾಲೆಯ ಮುಖ್ಯಶಿಕ್ಷಕರು ಭಾಗವಹಿಸಿದ್ದರು. ಸಣ್ಣ ಸಂಗಮ್ಮ ಶಿಕ್ಷಕಿ ಪ್ರಾರ್ಥಿಸಿದರು. ಮೌನೇಶ್ ನಿರೂಪಿಸಿದರು. ಸಂತೋಷ ಕುಮಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.