ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ರಾಜಾ ವೇಣುಗೋಪಾಲ್ ನಾಯಕ ಮನವಿ

Published 29 ಮಾರ್ಚ್ 2024, 15:50 IST
Last Updated 29 ಮಾರ್ಚ್ 2024, 15:50 IST
ಅಕ್ಷರ ಗಾತ್ರ

ನಾರಾಯಣಪುರ: ‘ಹುಣಸಗಿ, ಸುರಪುರ ತಾಲ್ಲೂಕುಗಳ ಅಭಿವೃದ್ಧಿಗಾಗಿ ನಮ್ಮ ತಂದೆಯವರಾದ ಶಾಸಕ ದಿ. ರಾಜಾ ವೆಂಕಟಪ್ಪ ನಾಯಕರು ಶ್ರಮಿಸಿದ್ದಾರೆ. ಸುರಪುರ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೇಸ್ ಪಕ್ಷಕ್ಕೆ ಮತವನ್ನು ಹಾಕಿ ನನನ್ನು ಗೆಲ್ಲಿಸಿ ಆಶೀರ್ವದಿಸಬೇಕು’ ಎಂದು ಸುರಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ್ ನಾಯಕ ಮನವಿ ಮಾಡಿದರು.

ಸಮೀಪದ ದೇವರಗಡ್ಡಿ ಗ್ರಾಮದಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಕೃಷ್ಣಾ ಜಾದವ ಮಾತನಾಡಿ, ‘ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದೆ. ಸುರಪುರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ, ರಾಯಚೂರ ಲೋಕಸಭಾ ಕ್ಷೇತ್ರದ ಜಿ.ಕುಮಾರ ನಾಯಕರಿಗೆ ಮತ ಹಾಕಿ’ ಎಂದು ಮನವಿ ಮಾಡಿದರು.

ಮುಖಂಡರಾದ ರಾಜಾ ಕುಮಾರ ನಾಯಕ, ರಾಜಾ ಹರ್ಷವರ್ಧನ ನಾಯಕ, ರಾಜಾ ಸಂತೋಷ ನಾಯಕ, ವಿಠ್ಠಲ್ ಯಾದವ, ಅನೀಫ್ ಮಾಸ್ಟರ್, ಶಾಂತಗೌಡ ಚನ್ನಪಟ್ಟಣ, ಪ್ರಕಾಶ ಗುತ್ತೇದಾರ, ಅಂಬ್ರಣ್ಣ ಕುಂಬಾರ, ಗುಂಡಪ್ಪ ಸೊಲ್ಲಾಪುರ, ರುದ್ರಣ್ಣ ಸಾಹುಕಾರ, ರಮೇಶ ದೊರಿ, ವೆಂಕಟೇಶ ಬೇಟೆಗಾರ, ಜೆ.ಡಿ ನಾಯಕ, ಮಲ್ಲಣ್ಣ ಸಾಹುಕಾರ, ಶಂಕರ ಚವ್ಹಾಣ, ಗದ್ದೆಪ್ಪ ಹಾಲಬಾವಿ, ಭೀಮರಾಯ ಮೂಲಿಮನಿ, ರಂಗನಗೌಡ, ಶಿವಪ್ಪ ತಾತರೆಡ್ಡಿ, ಮಲ್ಲಿಕಾರ್ಜುನ, ಶಾಂತಪ್ಪ ಮೇಸ್ತಕ್, ತಿಮ್ಮಣ್ಣ, ಇಮಾಮುದ್ದೀನ, ನಾಗರಾಜ, ಅಂಬ್ರೇಶ, ಶರಣಗೌಡ ಪಾಟೀಲ್, ಹಣಮೇಶ ಕುಲಕರ್ಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT