ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮೈಲಾರಲಿಂಗೇಶ್ವರ ಜಾತ್ರೆ: ಮೈಲಾಪುರದ ಗುಹಾಂತರ ದೇವಾಲಯ ವೈಭವ

Published : 14 ಜನವರಿ 2024, 6:29 IST
Last Updated : 14 ಜನವರಿ 2024, 6:29 IST
ಫಾಲೋ ಮಾಡಿ
Comments
ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನ ಮುಂಭಾಗ
ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನ ಮುಂಭಾಗ
ಯಾದಗಿರಿ ತಾಲ್ಲೂಕಿನ ಮೈಲಾರಲಿಂಗೇಶ್ವರ ಗುಹಾಂತರ ದೇವಾಲಯ
ಯಾದಗಿರಿ ತಾಲ್ಲೂಕಿನ ಮೈಲಾರಲಿಂಗೇಶ್ವರ ಗುಹಾಂತರ ದೇವಾಲಯ
ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು
ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು
ಮಲ್ಲಯ್ಯನ ಭಕ್ತರು ಮೈಲಾರಲಿಂಗೇಶ್ವರ ಜಾನಪದ ಗೀತೆ ಹಾಡಿದರು
ಮಲ್ಲಯ್ಯನ ಭಕ್ತರು ಮೈಲಾರಲಿಂಗೇಶ್ವರ ಜಾನಪದ ಗೀತೆ ಹಾಡಿದರು
ಕಲ್ಯಾಣ ಕರ್ನಾಟಕದ ಪ್ರಸಿದ್ಧ ಮೈಲಾರಲಿಂಗೇಶ್ವರ ಜಾತ್ರೆಗೆ ರಾಜ್ಯವಲ್ಲದೇ ಆಂಧ್ರ ತೆಲಂಗಾಣ ಮಹಾರಾಷ್ಟ್ರದಿಂದ ಭಕ್ತರು ಆಗಮಿಸುತ್ತಿದ್ದು ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ
ಸುರೇಶ ಅಂಕಲಗಿ ಯಾದಗಿರಿ ತಹಶೀಲ್ದಾರ್‌
ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಮಂಚ ಇರುವುದರಿಂದ ಗ್ರಾಮದ ಯಾರ ಮನೆಯಲ್ಲೂ ಇಲ್ಲ. ಅಲ್ಲದೇ ಕೋಳಿಯೂ ಇಲ್ಲ. ಇದೊಂದು ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. 
ಸುಭಾಷ ಹೆಡಗಿಮನಿ ದೇವಸ್ಥಾನ ಆರ್ಚಕ
ಮಲ್ಲಯ್ಯನ ಪಲ್ಲಕ್ಕಿ ಉತ್ಸವ ಇಂದು
ಜ.14ರಂದು ಮಕರ ಸಂಕ್ರಮಣ ದಿನ ಮಲ್ಲಯ್ಯನ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಕಲ್ಯಾಣ ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳಾದ ತೆಲಂಗಾಣ ಆಂಧ್ರಪ್ರದೇಶ ಮಹಾರಾಷ್ಟ್ರದಿಂದಲೂ ಲಕ್ಷಾಂತರ ಭಕ್ತರು ಮಲ್ಲಯ್ಯನ ಜಾತ್ರೆಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಶನಿವಾರ ರಾತ್ರಿ 11ರಿಂದ ಬೆಳಿಗ್ಗೆ 5ರ ವರೆಗೆ ಮೈಲಾರಲಿಂಗೇಶ್ವರ ಮಹಾಪೂಜೆ ರುದ್ರಾಭಿಷೇಕ ದೂಳಗಾಲಿನಲ್ಲಿ ನಡೆಯಿತು. ಭಾನುವಾರ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ1.57 ರವರೆಗೆ ಪುಣ್ಯ ಕಾಲ ಇರುವುದರಿಂದ ಮಧ್ಯಾಹ್ನ 12:30 ಕ್ಕೆ ಗಂಗಾಸ್ನಾನ 2 ಗಂಟೆ 5 ನಿಮಿಷದಿಂದ 3 ಗಂಟೆ ಒಳಗೆ ಸರಪಳಿ ಹರಿಯುವಿಕೆ ನಂತರ ಗುಡಿಯ ಸುತ್ತಲೂ ಪಲ್ಲಕ್ಕಿ ಸೇವೆ ನಡೆಯಲಿದೆ. ಸಂಜೆ 6.30ಕ್ಕೆ ಭಕ್ತರಿಂದ ತುಪ್ಪದಗುಡ್ಡಕ್ಕೆ ತುಪ್ಪ ಮತ್ತು ಎಣ್ಣೆ ದೀಪ ಹಚ್ಚುವುದು. ರಾತ್ರಿ 10.45 ರಿಂದ 11:45 ರವರೆಗೆ ಮೈಲಾರಲಿಂಗೇಶ್ವರ ಗಂಗಿ ಮಾಳಮ್ಮರ ವಿವಾಹ ನಡೆಯಲಿದೆ. ಜನವರಿ 21ರ ರಾತ್ರಿ 10.30 ಕ್ಕೆ ನಾಗೋಲಿ ಚಾಗೋಲಿ ಕಾರ್ಯಕ್ರಮ ನಡೆಯಲಿದೆ. ವಿಶೇಷ ದರ್ಶನಕ್ಕಾಗಿ ರೂ.300 ಶುಲ್ಕವನ್ನು ನಿಗದಿಪಡಿಸಲಾಗಿದೆ. ಅಲ್ಲದೆ ಜಾತ್ರೆ ಮುಗಿದ ನಂತರ 5 ಸೋಮವಾರಗಳಂದು ರಾತ್ರಿ 9 ಗಂಟೆಗೆ ಮೈಲಾರಲಿಂಗೇಶ್ವರ ಹಾಗೂ ಗಂಗಿಮಾಳಮ್ಮರ ಮೆರವಣಿಗೆ ಜರುಗಲಿದೆ.
ಕೋಳಿ ಕೂಗದ ಮಂಚ ಇಲ್ಲದ ಮೈಲಾಪುರ
ಮೈಲಾರಲಿಂಗೇಶ್ವರ ದೇವಸ್ಥಾನ ಇರುವ ಯಾದಗಿರಿ ತಾಲ್ಲೂಕಿನ ಮೈಲಾಪುರದಲ್ಲಿ  ಕೋಳಿ ಕೂಗುವ ಶಬ್ದ ಕೇಳಿಸುವುದಿಲ್ಲ. ಅಲ್ಲದೇ ಗ್ರಾಮದ ಯಾವುದೇ ಮನೆಯಲ್ಲಿ ಮಂಚವೂ ಇಲ್ಲ. ಇದು ಈ ಊರಿನ ವಿಶೇಷವಾಗಿದೆ. ಅರಕೇರಾ (ಕೆ) ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಮೈಲಾಪುರ ಗ್ರಾಮವಾಗಿದೆ. ‘ಮೈಲಾರಲಿಂಗೇಶ್ವರ ದೇವರಿಗೆ ಕೋಳಿ ಕೂಗುವ ಶಬ್ದ ಕೇಳಬಾರದು. ದೇವಸ್ಥಾನದಲ್ಲಿ ಮರದ ಮಂಚ ಗಾದಿ ಇರುವುದರಿಂದ ಗ್ರಾಮದಲ್ಲಿ ಯಾರೊಬ್ಬರೂ ಮಂಚ ಬಳಸುವುದಿಲ್ಲ. ಕೋಳಿ ಸಾಕಾಣಿಯೂ ಇಲ್ಲ. ಶತಮಾನಗಳಿಂದಲೂ ಈ ಪದ್ಧತಿಯನ್ನು ಶ್ರದ್ಧಾ ಭಕ್ತಿಯಿಂದ ಪಾಲಿಸಿಕೊಂಡು ಬಂದಿದ್ದೇವೆ’ ಎನ್ನುತ್ತಾರೆ ಗ್ರಾಮಸ್ಥರು. ವಿವಾಹ ಮಾಡಿ ಮಗಳನ್ನು ಗಂಡನ ಮನೆಗೆ ಕಳಿಸುವಾಗ ತವರಿನವರು ಮಂಚ ಸೇರಿ ಅಗತ್ಯ ಮನೆಬಳಕೆ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ರೂಢಿ. ಆದರೆ ಈ ಊರಿಗೆ ಮದುವೆಯಾಗಿ ಬರುವವರಿಗೆ ಮತ್ತು ಬೇರೆಡೆ ಹೋಗುವವರಿಗೆ ಮಂಚವನ್ನು ಉಡುಗೊರೆಯಾಗಿ ಕೊಡುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT