ಮಂಗಳವಾರ, ಸೆಪ್ಟೆಂಬರ್ 17, 2019
21 °C

ನಾಯ್ಕಲ್‍: ಸಂಭ್ರಮದ ಮೊಹರಂ ಆಚರಣೆ

Published:
Updated:
Prajavani

ಯಾದಗಿರಿ: ಇಲ್ಲಿಗೆ ಸಮೀಪದ ನಾಯ್ಕಲ್‌ ಗ್ರಾಮದಲ್ಲಿ ಸಾಮರಸ್ಯದ ಮೊಹರಂ ಹಬ್ಬ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 

ಹಬ್ಬ ಹಿನ್ನೆಲೆಯಲ್ಲಿ ಶನಿವಾರದಂದು ಅಗ್ಗಿ ತುಳಿಯುವ ಕಾರ್ಯಕ್ರಮ ನಡೆಯಿತು. ಸೋಮವಾರ ಖತಲ್ ರಾತ್ರಿ ದಿನದಂದು ಪೀರ್‌‍ಗಳ ಮೆರವಣಿಗೆ ನಡೆದವು.

ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ದೇವರುಗಳಿಗೆ ನೈವೆದ್ಯ, ಕಾಯಿ, ಸಕ್ಕರೆ, ಹೂಗಳನ್ನು ಅರ್ಪಿಸಿದರು. ಹರಕೆ ಹೊತ್ತ ಭಕ್ತರು ದೀಡ್ ನಮಸ್ಕಾರ ಹಾಕಿದರು. ಹಬ್ಬದ ಪ್ರಯುಕ್ತ ಪ್ರತಿದಿನ ಮೊಹರಂ ಹಾಡುಗಳು, ಅಲಾಯಿ ಕುಣಿತ ಮನಸೂರೆಗೊಂಡವು.

ಮೊಹರಂ ಕೊನೆಯ ದಿನವಾದ ಮಂಗಳವಾರ ಸಂಜೆ ದಫನ್ ಕಾರ್ಯಕ್ರಮ ಜರುಗಿತು. ಗ್ರಾಮದ ಪ್ರಮುಖರು ಹಾಗೂ ನೂರಾರು ಜನ ಭಾಗವಹಿಸಿದ್ದರು.

Post Comments (+)