ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಿದೆ. ಮೊದಲು ಸೆಮಿಸ್ಟರ್‌ನ ವಿದ್ಯಾರ್ಥಿಗಳು ರಾಯಚೂರಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಮೇ ತಿಂಗಳಿಂದ ವಿದ್ಯಾರ್ಥಿಗಳು ನಮ್ಮ ಬಳಿ ಬರುತ್ತಾರೆ. ತಲಾ ನಾಲ್ಕು ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶ ಕಲ್ಪಿಸಿದೆಶ್ಯಾಮರಾವ್ ಜಹಗಿರದಾರ ಕಾಲೇಜಿನ ಡೀನ್ ಕೃಷಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತಿ ಸಾಧಿಸಲಿ ಎಂಬ ಸದುದ್ದೇಶದಿಂದ ಅಲ್ಲದೆ ರೈತರಿಗೆ ಹೆಚ್ಚಿನ ಕೃಷಿ ತಾಂತ್ರಿಕತೆಯ ಲಾಭ ದೊರಕಲಿ ಎಂಬ ಕಾಳಜಿಯಿಂದ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಿದೆ
ಮಲ್ಲಿಕಾರ್ಜುನ ವನದುರ್ಗ ಆಡಳಿತ ಮಂಡಳಿ ಸದಸ್ಯ ಕೃಷಿ ವಿಶ್ವವಿದ್ಯಾಲಯ ರಾಯಚೂರು