ಆರೋಪಿಗಳ ಪತ್ತೆಗಾಗಿ ಪ್ರತಿಭಟನೆ

7
ಮೃತ ಯುವಕರ ಭಾವಚಿತ್ರ ಹಿಡಿದು ಮೆರವಣಿಗೆ

ಆರೋಪಿಗಳ ಪತ್ತೆಗಾಗಿ ಪ್ರತಿಭಟನೆ

Published:
Updated:
ಹುಣಸಗಿ ತಾಲ್ಲೂಕಿನ ಬರದೇವನಾಳ ಗ್ರಾಮದ ಯುವಕರ ಕೊಲೆ ಮಾಡಲಾಗಿದ್ದು ಆರೋಪಿಗಳನ್ನು ಪತ್ತೆ ಮಾಡುವಂತೆ ಒತ್ತಾಯಿಸಿ ಕೊಡೇಕಲ್ಲದಲ್ಲಿ ಪ್ರತಿಭಟನೆ ನಡೆಸಲಾಯಿತು

ಹುಣಸಗಿ: ತಾಲ್ಲೂಕಿನ ಬರದೇವನಾಳ ಗ್ರಾಮದ ಇಬ್ಬರು ಯುವಕರು ದಿ. 6 ರಂದು ಕಾಣೆಯಾಗಿ ಬಳಿಕ ಶವವಾಗಿ ಡೋಣಿ ನದಿಯಲ್ಲಿ ಪತ್ತೆಯಾಗಿದ್ದರೂ ಕೂಡಾ ಪೊಲೀಸರು ಯಾವುದೇ ತನಿಖೆ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಬರದೇವನಾಳ ಗ್ರಾಮದ ಶಾಂತಗೌಡ ಪಾಟೀಲ ಆರೋಪಿಸಿದರು.

ಈ ಕುರಿತು ಬುಧವಾರ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಬ್ರಹತ್ ಪ್ರತಿಭಟನೆ ನಡೆಸಿ ಮಾತನಾಡಿದರು. ಮೃತ ಯುವಕರ ಕಳೆ ಬರ ಪತ್ತೆಯಾದ ಬಳಿಕವೂ ಕೂಡಾ ಪೊಲೀಸರು ಪ್ರಕರಣದ ಕುರಿತಂತೆ ಯಾವುದೇ ತನಿಖೆ ಕೈಗೊಂಡಿಲ್ಲ ಅಮಾಯಕ ಯುವಕರ ಕೊಲೆಯಾಗಿದ್ದರೂ ಪೊಲೀಸ್ ಅಧಿಕಾರಿಗಳು ಸುಮ್ಮನಿದ್ದಾರೆ ಎಂದು ಆರೋಪಿಸಿದರು.

ಮೃತ ಓರ್ವ ಯುವಕನ ತಂದೆ ಗದ್ದೇಪ್ಪ ಹುಡೇದ ಮಾತನಾಡಿ, ನನ್ನ ಮಗನದ್ದು ಅಸಹಜ ಸಾವಲ್ಲ ಇದು ಉದ್ದೇಶ ಪೂರ್ವಕವಾಗಿ ನಡೆಸಿ ಕೊಲೆಯಾಗಿದೆ ಎಂದು ಆರೋಪಿಸಿದರು. ಯುವ ಮುಖಂಡ ಬಬಲುಗೌಡ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಪ್ರಕರಣಗಳು ನಡೆದಿದ್ದರೂ ಕೂಡಾ ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ. ಇದರಿಂದಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕೂಡಲೇ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಶಾಸಕ ರಾಜುಗೌಡ ಆಗಮಿಸಿ, ಡಿವೈಎಸ್ಪಿ ಪಾಂಡುರಂಗ ಅವರೊಂದಿಗೆ ಮಾತುಕತೆ ನಡೆಸಿದರು. ತಪ್ಪು ಯಾರೇ ಮಾಡಿದ್ದರೂ ಮೃತ ಯುವಕರ ಕುಟುಂಬಕ್ಕೆ ನ್ಯಾಯ ಒದಸಿಕೊಡುವದಾಗಿ ತಿಳಿಸಿದರು. ಕೊಡೇಕಲ್ಲ ಗ್ರಾಮದ ಗದ್ದೆಮ್ಮದೇವಿ ಕಟ್ಟೆಯಿಂದ ಪ್ರತಿಭಟನಾ ಮೆರವಣಿಗೆಯೊಂದಿಗೆ ಕೊಡೇಕಲ್ಲ ಪೊಲೀಸ್ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯಕ್, ತಾಲ್ಲೂಕು ಪಂಚಾಯಿತಿ ಸದಸ್ಯ ಮೋಹನ ಪಾಟೀಲ, ಕಟ್ಟೆಪ್ಪಗೌಡ ಪಾಟೀಲ, ಡಾ.ಬಿ.ಬಿ.ಬಿರಾದಾರ, ಶಾಮಸುಂದರ ಜೋಶಿ, ಅಮರಣ್ಣ ಹುಡೇದ, ಯಲ್ಲಪ್ಪ ಕುರಕುಂದಿ, ಎಚ್.ಸಿ.ಪಾಟೀಲ, ಶಾಂತಿಲಾಲ್ ರಾಠೋಡ, ಶಾಂತಗೌಡ , ಹುಲಗಪ್ಪ ಹುಡೇದ, ನಿಂಗಪ್ಪ ಹುಡೇದ, ಹನುಮಂತ್ರಾಯ ಮೇಟಿ, ದೇವು ಗೋಪಾಳೆ, ಕನಕು ಜೀರಾಳ, ಮಲ್ಲು ನವಲಗುಡ್ಡ ಸೇರಿದಂತೆ ಇತರರು ಇದ್ದರು.

ಹುಣಸಗಿ ಸಿಪಿಐ ಪಂಡೀತ್ ಸಗರ್ ನೇತೃತ್ವದಲ್ಲಿ, ಪಿಎಸ್ಐಗಳಾದ ಸುನೀಲ ಕುಮಾರ ಮೂಲಿಮನಿ, ಕೃಷ್ಣಕುಮಾರ ಪಾಟೀಲ, ಜಗದೇವಪ್ಪ, ಕೆ.ಎಚ್.ಶಿರೋಮಣಿ ಮತ್ತು ಸಿಬ್ಬಂದಿ ಸೂಕ್ತ ಬಂದೊಬಸ್ತ ಒದಗಿಸಿದ್ದರು.

ಮೃತ ಯುವಕರ ಪಾಲಕರಿಂದ ದೂರು ಸ್ವೀಕರಿಸಲಾಗಿದ್ದು, ತನಿಖೆ ಕೈಗೊಂಡು ಸೂಕ್ತ ನ್ಯಾಯ ಒದಗಿಸಿಕೊಡಲಾಗುವದು
ಪಾಂಡುರಂಗ ಡಿವೈಎಸ್ಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !