ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಜಿಲ್ಲೆಯಾದ್ಯಂತ ಶಿವಕುಮಾರ ಸ್ವಾಮೀಜಿ ಸ್ಮರಣೆ

ಸಂಘ–ಸಂಸ್ಥೆಗಳಿಂದ ವಿವಿಧೆಡೆ ಅನ್ನದಾಸೋಹ
Last Updated 1 ಏಪ್ರಿಲ್ 2023, 14:46 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಜನ್ಮದಿನವನ್ನು ಶನಿವಾರ ಆಚರಿಸಲಾಯಿತು.

ವೀರಶೈವ ಲಿಂಗಾಯತ ಮಹಾಸಭಾ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ವೀರಶೈವ ಸಮಾಜ ವಿವಿಧ ಘಟಕಗಳ ವತಿಯಿಂದ ತ್ರಿವಿಧ ದಾಸೋಹಿ, ಪದ್ಮಭೂಷಣ, ಕರ್ನಾಟಕ ರತ್ನ ಶಿವಕುಮಾರ ಜನ್ಮದಿನ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ವೆಂಕಟರೆಡ್ಡಿ ಮುದ್ನಾಳ, ನಡೆದಾಡುವ ದೇವರಾದ ಶಿವಕುಮಾರ ಸ್ವಾಮೀಜಿ ಲಕ್ಷಾಂತರ ಮಕ್ಕಳಿಗೆ ತ್ರಿವಿಧದಲ್ಲಿ ದಾಸೋಹಿಯಾಗಿದ್ದಾರೆ. ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಈ ವೇಳೆ ಮಹಾಸಭಾ ಅಧ್ಯಕ್ಷ ಸೋಮಶೇಖರ ಮಣ್ಣೂರ, ಸಮಾಜದ ಪ್ರಮುಖರಾದ ಅಯ್ಯಣ್ಣ ಹುಂಡೇಕರ್, ಆರ್.ಮಹಾದೇವಪ್ಪ ಅಬ್ಬೆತುಮಕೂರು, ಸಿದ್ದಪ್ಪ ಹೊಟ್ಟಿ, ಶರಣಗೌಡ ಬಾಡಿಯಾಳ, ಮಹೇಶ ಆನೆಗುಂದಿ, ಅನ್ನಪೂರ್ಣಮ್ಮ ಜವಳಿ, ರಾಮಯ್ಯ ಶಾಬಾದಿ, ಬಂಡಪ್ಪ ಆಕಳ, ಸೋಮಶೇಖರ್ ಬಾನ, ಮಹೇಶ ವಾಲಿ, ಬಸವಾಂತ್ರಯಗೌಡ ಮಾಲಿಪಾಟೀಲ, ಸೋಮನಾಥ್ ಜೈನ, ರಮೇಶ್ ದೊಡ್ಡಮನಿ, ನೂರಂದಪ್ಪ ಲೇವಡಿ, ನಾಗೇಂದ್ರಪ್ಪ ಜಾಜಿ, ಚೆನ್ನಪ್ಪ ಠಾಣಾಗುಂದಿ, ಶಂಕ್ರಪ್ಪಗೌಡ ಗೋನಾಲ, ಸೂಗಪ್ಪ ಪಾಟೀಲ ಗಣಪುರ, ಶರಣು ಇಡಲೂರ, ದೇವರಾಜ ಬೆಳಗೇರಿ, ಚೆನ್ನ ಮಲ್ಲಿಕಾರ್ಜುನ ಅಕ್ಕಿ, ರಾಜು ಶಾಸ್ತ್ರಿ, ಚಂದ್ರಶೇಖರ ಅರಳಿ ಇದ್ದರು.

ಬಸವ ಉತ್ಸವ ಸಮಿತಿ: ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ತ್ರಿವಿಧ ದಾಸೋಹಿ ಹಾಗೂ ಪದ್ಮಭೂಷಣ, ಕರ್ನಾಟಕ ರತ್ನ ಶಿವಕುಮಾರ ಸ್ವಾಮೀಜಿ 116ನೇ ಜಯಂತಿಯನ್ನು ಬಸವ ಉತ್ಸವ ಸಮಿತಿ ವತಿಯಿಂದ ಆಚರಿಸಲಾಯಿತು. ಇದೇ ವೇಳೆ ಸಾರ್ವಜನಿಕರಿಗೆ ಅನ್ನ ದಾಸೋಹ ಹಮ್ಮಿಕೊಳ್ಳಲಾಗಿತ್ತು.

ಪಿಂಟು ಜಾಕಾ, ಸುನೀಲ‌ ಕಡೇಚೂರು, ಮಂಜು ಹೊಟ್ಟಿ, ಸುರೇಶ ರಾಯಚೂರು, ವಿಶ್ವ ಕಾಚಗಾರ, ನರೇಶ ಸ್ವಾಮಿ, ವಿಶ್ವ ಪಾಟೀಲ, ಲಿಂಗರಾಜ ಸಾತನೂರ, ಅನಂತ ಸ್ವಾಮಿ, ಸಂದೀಪ್ ಕಡೇಚೂರ, ರಾಘು, ಸುಭಾಷ, ವಿನಯ ರ್‍ಯಾಖಾ, ಪಿಂಟು‌ ಜಾಕಾ, ಮಂಜು, ವಿಶ್ವ ಪಾಟೀಲ ಇದ್ದರು.

ಜ್ಞಾನ ವಿಕಾಸ ಕೇಂದ್ರ: ನಗರದ ಗಂಜ್ ವೃತ್ತದಲ್ಲಿನ ಸಿದ್ಧಗಂಗಾ ಶಿಕ್ಷಣ ಮತ್ತು ಗ್ರಾಮೀಣಾಭೀವೃದ್ಧಿ ಸಂಸ್ಥೆಯ ಜ್ಞಾನ ವಿಕಾಸ ಕೇಂದ್ರ ಗಂಥಾಲಯದಲ್ಲಿ ಸಿದ್ಧಗಂಗಾ ಶಿವಕುಮಾರಸ್ವಾಮೀಜಿ 116 ನೇ ಜಯಂತ್ಯುತ್ಸವ ಆಚರಿಸಲಾಯಿತು.

ಸಂಸ್ಥೆಯ ಮುಖ್ಯಸ್ಥ ವೀರೇಶ್ ನೆಲ್ಲೋಗಿ, ಪತ್ರಕರ್ತ ಶಂಕ್ರಪ್ಪ ಅರುಣಿ ಮಾತನಾಡಿದರು.

ಇದಕ್ಕೂ ಮೊದಲು ಶಿವಕುಮಾರಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ, ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೋಟ್ ಬುಕ್ ಪೆನ್‌ಗಳನ್ನು ವಿತರಿಸಲಾಯಿತು. ಈ ವೇಳೆ ಬನ್ನಿ ಬಸವ ಸೇವಾ ಸಂಸ್ಥೆಯ ಅಧ್ಯಕ್ಷ ಜಗದೀಶ ಜಾಕಾ, ರಾಘವೇಂದ್ರ ಪತ್ತಾರ, ಶಿಕ್ಷಕ ಬ್ರಹ್ಮಾನಂದ, ಸುನೀಲ್, ಕರಣ್, ಭೀಮಶಪ್ಪ, ಹಣಮಂತ, ನಂದೀಶ್ ನೆಲ್ಲೋಗಿ, ಗಂಗೋತ್ರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT