ಪ್ರತಿಗ್ರಾಮದಲ್ಲೂ 101 ಸಸಿ ನೆಡುವ ಕಾರ್ಯಕ್ರಮ

7
ಸಿದ್ದರಾಮಾನಂದಪುರಿ ಸ್ವಾಮಿಜಿ ಜನ್ಮದಿನ ಆಚರಣೆ

ಪ್ರತಿಗ್ರಾಮದಲ್ಲೂ 101 ಸಸಿ ನೆಡುವ ಕಾರ್ಯಕ್ರಮ

Published:
Updated:
Deccan Herald

ಸುರಪುರ: ‘ತಿಂಥಣಿ ಬ್ರಿಜ್ ಕನಕ ಗುರುಪೀಠದ ಪೀಠಾಧಿಪತಿ ಸಿದ್ಧರಾಮಾನಂದ ಸ್ವಾಮೀಜಿ ಅವರ 42ನೇ ಜನ್ಮದಿನ ಅಂಗವಾಗಿ ಆಗಸ್ಟ್‌ 5ರಂದು ಜಿಲ್ಲೆಯಾದ್ಯಂತ ಹಾಲುಮತ ಸಮಾಜದ ವತಿಯಿಂದ ಪ್ರತಿ ಹಳ್ಳಿಯಲ್ಲಿ 101 ಸಸಿಗಳನ್ನು ನೆಡಲು ಕನಕಗುರು ಪೀಠ ನಿರ್ಧರಿಸಲಾಗಿದೆ’ ಎಂದು ಕನಕಗುರು ಪೀಠದ ಅಧ್ಯಕ್ಷ ಡಾ.ಸಂಗಣ್ಣ ರಾಂಪುರೆ ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲಾ ತಾಲ್ಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಉಚಿತವಾಗಿ ಸಸಿ ನೀಡುವಂತೆ ಈಗಾಗಲೇ ಗುರುಪೀಠದಿಂದ ಮನವಿ ಮಾಡಲಾಗಿದೆ. ಇದಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ನೀಡಿದ್ದು ಸಮಾಜ ಬಾಂಧವರು ಆಯಾ ತಾಲ್ಲೂಕು ಅರಣ್ಯ ಇಲಾಖೆ ಕಚೇರಿಗೆ ಭೇಟಿ ನೀಡಿ ಉಚಿತವಾಗಿ ಸಸಿಗಳನ್ನು ಪಡೆಯಬೇಕು’ ಎಂದು ಮನವಿ ಮಾಡಿದ್ದಾರೆ.

‘ಗುರುಗಳ ಜನ್ಮ ದಿನವಾದ ಆಗಸ್ಟ 5ರಂದು ತಮ್ಮ ತಮ್ಮ ಗ್ರಾಮಗಳ ದೇವಸ್ಥಾನ, ಶಾಲಾ ಆವರಣ ಅಥವಾ ಸಾರ್ವಜನಿಕ ಉದ್ಯಾನಗಳಲ್ಲಿ ಸಸಿಗಳನ್ನು ನಾಟಿ ಮಾಡಬೇಕು. ಸಮಾಜದ ವಿವಿಧ ಸಂಘಟನೆಗಳ ಕಾರ್ಯಕರ್ತರು ಮುಖಂಡರು ಇದಕ್ಕೆ ಸಹಕಾರ ನೀಡಿ ಗುರುಪೀಠದ ಸಂಕಲ್ಪಕ್ಕೆ ಕೈ ಜೋಡಿಸಬೇಕು’ ಎಂದು ಕೋರಿದ್ದಾರೆ.  ಮಾಹಿತಿಗೆ 94806 06666 ಸಂಪರ್ಕಿಸಲು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !