ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‍ಎಸ್‍ಎಲ್‍ಸಿ ಫಲಿತಾಂಶ: ಜಿಲ್ಲೆಯಲ್ಲಿ ಸುರಪುರಕ್ಕೆ ಕೊನೆಯ ಸ್ಥಾನ

ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ
Published 11 ಮೇ 2024, 5:42 IST
Last Updated 11 ಮೇ 2024, 5:42 IST
ಅಕ್ಷರ ಗಾತ್ರ

ಸುರಪುರ: ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಪರೀಕ್ಷೆಗೆ ಕುಳಿತ ಒಟ್ಟು 5,587 ವಿದ್ಯಾರ್ಥಿಗಳಲ್ಲಿ 2844 ಬಾಲಕರು, 2743 ಬಾಲಕಿಯರು ಸೇರಿದ್ದರು. ಅದರಲ್ಲಿ 1091 ಬಾಲಕರು ಪಾಸಾಗಿದ್ದರೆ, 1560 ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ಉನ್ನತ ಶ್ರೇಣಿ (ಶೇ 85 ಕ್ಕಿಂತ ಹೆಚ್ಚು) 307, ಪ್ರಥಮ ಶ್ರೇಣಿಯಲ್ಲಿ (ಶೇ 60 ಕ್ಕಿಂತ ಹೆಚ್ಚು) 905 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ತಾಲ್ಲೂಕಿನಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿ ಒಟ್ಟು 83 ಶಾಲೆಗಳಿವೆ. ಶೇ 80 ಕ್ಕಿಂತ ಹೆಚ್ಚು ಫಲಿತಾಂಶ ಪಡೆದ ಶಾಲೆಗಳಲ್ಲಿ 6 ಸರ್ಕಾರಿ, 11 ಅನುದಾನ ರಹಿತ ಶಾಲೆಗಳು ಸೇರಿವೆ.

ಯಾದಗಿರಿ ಜಿಲ್ಲೆ ಫಲಿತಾಂಶದಲ್ಲಿ ಕೊನೆ ಸ್ಥಾನದಲ್ಲಿದೆ. ಸುರಪುರ ಶೇ 47.45 ಫಲಿತಾಂಶ ಪಡೆದಿದ್ದು ಜಿಲ್ಲೆಗೆ ಕೊನೆ ಸ್ಥಾನದಲ್ಲಿದೆ. ಶಹಾಪುರಕ್ಕೆ ಶೇ  60.04, ಯಾದಗಿರಿಗೆ ಶೇ 56.25 ಫಲಿತಾಂಶ ದೊರಕಿದೆ.

ಜಿಲ್ಲೆಗೆ ಒಟ್ಟು 34 ವಿದ್ಯಾರ್ಥಿಗಳು ಟಾಪರ್ಸ್ (600ಕ್ಕಿಂತ ಹೆಚ್ಚು ಅಂಕ) ಆಗಿದ್ದು ಅದರಲ್ಲಿ ಸುರಪುರ ತಾಲ್ಲುಕಿನ 13 ವಿದ್ಯಾರ್ಥಿಗಳು ಸೇರಿದ್ದು ವಿಶೇಷ. ಸುರಪುರದ 5 ಶಾಲೆಗಳು ಶೂನ್ಯ ಫಲಿತಾಂಶ ಪಡೆದರೆ, ಯಾದಗಿರಿಯ 2, ಶಹಾಪುರದ ಒಂದು ಶಾಲೆ ಶೂನ್ಯ ಫಲಿತಾಂಶ ಪಡೆದುಕೊಂಡಿವೆ.

ರಾಜ್ಯಕ್ಕೆ 6ನೇ ಸ್ಥಾನ:

ಹುಣಸಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶರಣಬಸವ ಭೀಮಣ್ಣ ಕುರಿ 620 ಅಂಕ ಪಡೆದು ಜಿಲ್ಲೆಗೆ ಪ್ರಥಮ ಮತ್ತು ರಾಜ್ಯಕ್ಕೆ 6ನೇ ಪಡೆದಿದ್ದಾನೆ.

ಹುಣಸಗಿಯ ಬಿ.ಎನ್.ಪಾಟೀಲ ಸ್ಮಾರಕ ಪ್ರೌಢಶಾಲೆಯ ಗಾಯತ್ರಿ ಮಹಾದೇವಪ್ಪಗೌಡ ಪಾಟೀಲ 610 ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಹಗರಟಗಿಯ ಸರ್ಕಾರಿ ಪ್ರೌಢಶಾಲೆಯ ಶರತರಾಜ ಬಸಪ್ಪ ಹುಗ್ಗಿ 606 ಅಂಕ ಪಡೆದು ಜಿಲ್ಲೆಯ ಟಾಪರ್ ಲಿಸ್ಟ್‍ನಲ್ಲಿ ಸ್ಥಾನ ಪಡೆದಿದ್ದಾರೆ.

ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಹೆಚ್ಚಿನ ಫಲಿತಾಂಶ ನಿರೀಕ್ಷಿಸಲಾಗಿತ್ತು. ಮುಂದಿನ ವರ್ಷ ಹೆಚ್ಚಿನ ಫಲಿತಾಂಶ ಪಡೆಯಲು ಯತ್ನಿಸಲಾಗುವುದು
ಯಲ್ಲಪ್ಪ ಕಾಡ್ಲೂರು ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT