ಶುಕ್ರವಾರ, ಜೂನ್ 25, 2021
30 °C
ಎಸ್ಸೆಸ್ಸೆಲ್ಸಿ ಫಲಿತಾಂಶ: ಜಿಲ್ಲೆಗೆ ‘ಸಿ’ ಗ್ರೇಡ್‌; ಈ ಬಾರಿಯೂ 34ನೇ ಸ್ಥಾನ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಯಾದಗಿರಿ ಜಿಲ್ಲೆಗೆ ಮತ್ತೆ ಕೊನೇ ಸ್ಥಾನ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

ಯಾದಗಿರಿ: ಸೋಮವಾರ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಕೊನೇ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ. 34ನೇ ಸ್ಥಾನದಲ್ಲಿದ್ದು, ‘ಸಿ’ ಗ್ರೇಡ್‌ ಪಡೆದಿದೆ.

ಗುಣಮಟ್ಟದ ಶಿಕ್ಷಣದ ಕೊರತೆ, ಶಿಕ್ಷಕರ ಕೊರತೆ ಸೇರಿದಂತೆ ಹಲವು ಕೊರತೆಗಳಿಂದಾಗಿ ಉತ್ತಮ ಫಲಿತಾಂಶ ಪಡೆಯುವಲ್ಲಿ ಹಿಂದುಳಿದೆ. ಮೂರು ವರ್ಷಗಳಿಂದ ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿ ಕೊನೇ ಸ್ಥಾನದಲ್ಲಿ ಉಳಿದುಕೊಂಡಿದೆ. ವಿಶೇಷ ತರಗತಿಗಳು ನಡೆಸಿದ್ದರೂ ಹೆಚ್ಚು ಪ್ರಯೋಜನವಾಗಿಲ್ಲ. ಯಾವ ಸರ್ಕಾರ ಬಂದರೂ ಶಿಕ್ಷಕರ ಕೊರತೆಯನ್ನು ನೀಗಿಸುತ್ತಿಲ್ಲ. ಇದರಿಂದ ಜಿಲ್ಲೆ ಶಿಕ್ಷಣದಲ್ಲಿ ಹಿಂದುಳಿಯಲು ಕಾರಣವಾಗಿದೆ. 

ಶಿಕ್ಷಕರ ಕೊರತೆ: ಜಿಲ್ಲೆಯಲ್ಲಿ 136 ಸರ್ಕಾರಿ ಪ್ರೌಢ ಶಾಲೆಗಳಿದ್ದು, ಬಹುತೇಕ ಹುದ್ದೆಗಳು ಖಾಲಿ ಇವೆ. 20 ಮುಖ್ಯ ಶಿಕ್ಷಕರ ಹುದ್ದೆಗಳು ಭರ್ತಿಯಾಗಿಲ್ಲ. ಇನ್ನು ವಿಷಯವಾರು ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. 

ಕನ್ನಡ 30, ಇಂಗ್ಲಿಷ್ 35, ಹಿಂದಿ 26, ಗಣಿತ 19, ಉರ್ದು 4, ವಿಜ್ಞಾನ 22, ಸಮಾಜ 31 ಸೇರಿದಂತೆ 167 ಶಿಕ್ಷಕರ ಹುದ್ದೆಗಳು ಭರ್ತಿಯಾಗಬೇಕಿತ್ತು. ಆದರೆ, ಅತಿಥಿ ಶಿಕ್ಷಕರಿಂದ ಶಾಲೆಗಳನ್ನು ನಡೆಸಲಾಗುತ್ತಿದೆ. ಇದರಿಂದ ಗುಣಮಟ್ಟದ ಶಿಕ್ಷಣಕ್ಕೆ ಕೊರತೆಯಾಗಿದೆ. 

122 ಸರ್ಕಾರಿ, 17 ಅನುದಾನಿತ, 86 ಖಾಸಗಿ ಶಾಲೆಗಳಿವೆ. ಸರ್ಕಾರಿ ಶಾಲೆಯ 122 ಶಾಲೆಗಳಲ್ಲಿ ಶೇ 60 ಕ್ಕಿಂತ ಹೆಚ್ಚು ಶಿಕ್ಷಕರ ಕೊರತೆ ಇದೆ. ಇದರಿಂದಲೇ ಶಿಕ್ಷಣದಲ್ಲಿ ಕಡಿಮೆ ಫಲಿತಾಂಶ ಬಂದಿದೆ‌ ಎನ್ನುವುದು ಶಿಕ್ಷಣ ಇಲಾಖೆಯ ಮಾಹಿತಿಯಾಗಿದೆ.

ಫಲಿತಾಂಶ ಗ್ರೇಡ್‌ಗಳ ವಿವರ: ಶಹಾಪುರ ತಾಲ್ಲೂಕಿನಲ್ಲಿ 9 ಶಾಲೆಗಳಿಗೆ ಎ ಗ್ರೇಡ್‌, 17 ಶಾಲೆಗಳಿಗೆ ಬಿ ಗ್ರೇಡ್‌, 41 ಶಾಲೆಗಳಿಗೆ ಸಿ ಗ್ರೇಡ್ ಫಲಿತಾಂಶ ಬಂದಿದೆ. ಸುರಪುರ ತಾಲ್ಲೂಕಿನಲ್ಲಿ ಎ ಗ್ರೇಡ್‌ 14, ಬಿ ಗ್ರೇಡ್ 23, ಸಿ ಗ್ರೇಡ್‌ 43 ಶಾಲೆಗಳು ಪಡೆದಿವೆ. ಯಾದಗಿರಿ ತಾಲ್ಲೂಕಿನಲ್ಲಿ 10 ಶಾಲೆ ಎ ಗ್ರೇಡ್, 16 ಶಾಲೆ ಬಿ ಹಾಗೂ 52 ಶಾಲೆ ಸಿ ಗ್ರೇಡ್‌ ಪಡೆದಿವೆ. ಒಟ್ಟು 33 ಶಾಲೆಗಳು ಎ ಗ್ರೇಡ್‌, 56 ಶಾಲೆಗಳು ಬಿ ಗ್ರೇಡ್‌ ಹಾಗೂ 136 ಶಾಲೆಗಳು ಸಿ ಗ್ರೇಡ್‌ ಫಲಿತಾಂಶ ಪಡೆದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.