ಸುರಪುರ: ‘ಮಾಹಿತಿ ಮತ್ತು ತಂತ್ರಜ್ಞಾನ ಅಮೋಘವಾಗಿ ಬೆಳೆದಿದೆ. ಹೆಚ್ಚು ತಿಂದರೆ ವಿಷ ಎನ್ನಲಾಗುತ್ತದೆ. ಅದರಂತೆ ಮೋಬೈಲ್ನ ಹೆಚ್ಚು ಬಳಕೆಯಿಂದ ಹಾನಿ ಸಂಭವಿಸುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳು ಈ ಗೀಳಿನಿಂದ ಹೊರಬರಲು ಒದ್ದಾಡುತ್ತಿದ್ದಾರೆ’ ಎಂದು ಕಲಬುರಗಿಯ ರಾಮಕೃಷ್ಣ ಆಶ್ರಮದ ಸ್ವಾಮಿ ಮಹೇಶ್ವರಾನಂದ ಹೇಳಿದರು.

ನಗರದ ಪ್ರಭು ಮತ್ತು ಬೋಹರಾ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ತಂತ್ರಜ್ಞಾನ ನಮ್ಮ ಅಭಿವೃದ್ಧಿಗೆ ಪೂರಕವಾಗಿದೆ. ಅದರ ಸಮರ್ಪಕ ಬಳಕೆಯ ಬಗ್ಗೆ ತಿಳಿದುಕೊಳ್ಳಬೇಕು. ಅದುವೇ ನಮ್ಮ ಅವಸಾನಕ್ಕೆ ಕಾರಣವಾಗಬಾರದು’ ಎಂದು ತಿಳಿಸಿದರು.

‘ಇಂದಿನ ವಿದ್ಯಾರ್ಥಿಗಳು ಪಠ್ಯಕ್ರಮದ ಒತ್ತಡ, ಪರೀಕ್ಷಾ ತಯಾರಿ ಇತರ ಅಂಶಗಳಿಂದ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ನಮ್ಮ ಸುಕೃತದಿಂದ ನಾವು ಮನುಷ್ಯರಾಗಿ ಜನಿಸಿದ್ದೇವೆ. ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು’ ಎಂದರು.

‘ನಮ್ಮ ಸನಾತನ ಪರಂಪರೆಯ ಯೋಗ, ಧ್ಯಾನಗಳು ಉಪಯುಕ್ತವಾಗಿವೆ. ನಿತ್ಯವೂ ಇವುಗಳನ್ನು ಕೈಗೊಳ್ಳುವುದರಿಂದ ಮನಸ್ಸು ಪ್ರಫುಲ್ಲಿತವಾಗುತ್ತದೆ. ವಿದ್ಯಾರ್ಥಿಗಳು ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ’ ಎಂದರು.

ಎಚ್ಕೆಇ ಸಂಸ್ಥೆಯ ಸದಸ್ಯರಾದ ನಿಶಾಂತ ಎಲಿ, ಪ್ರಶಾಂತ ಉಣಚಾಗಿ ಮಾತನಾಡಿದರು.

ಪದವಿ ಕಾಲೇಜಿನ ಪ್ರಾಚಾರ್ಯ ವಿರುಪಾಕ್ಷಿ ನಾಯಕ, ಉಪನ್ಯಾಸಕ ಸಿ.ವಿ. ಕಲಬುರಗಿ ವೇದಿಕೆಯಲ್ಲಿದ್ದರು.

ಪ್ರಾಚಾರ್ಯ ಕಿಶನ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಉಪೇಂದ್ರನಾಯಕ ಸುಬೇದಾರ ಸ್ವಾಗತಿಸಿದರು. ಸುರೇಶ ಮಾಮಡಿ ನಿರೂಪಿಸಿದರು. ಶರಣುನಾಯಕ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.