ತಾಯಿ ಪತ್ನಿ ಕೂಲಿಗೆ ಹೋದರೆ ಊಟ ಇಲ್ಲದಿದ್ದರೆ ಉಪವಾಸವೇ ಗತಿ. ಸೋರುವ ಮನೆಯಲ್ಲಿದ್ದು ನನ್ನ ಮೂವರು ಮಕ್ಕಳನ್ನು ಓದಿಸಲು ಆಗದ ಪರಿಸ್ಥಿತಿ ಇದೆ. ಹೆಮೋಫಿಲಿಯಾ ಬೆನ್ನಿಗೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದೇನೆ.
ರವಿ ಬಡಕಣ್ಣೋರ್ ಹೆಮೋಫಿಲಿಯಾ ಪೀಡಿತ ವ್ಯಕ್ತಿ
ಮೂವರು ಹೆಮೋಫಿಲಿಯಾ ಪೀಡಿತ ಮಕ್ಕಳ ಜೊತೆ ಕುಟುಂಬ ನಿರ್ವಹಣೆಗೆ ಪರದಾಡಬೇಕಿದೆ. ಸರ್ಕಾರ ಜನಪ್ರತಿನಿಧಿಗಳು ಜೀವನ ಕಟ್ಟಿಕೊಳ್ಳಲು ನೆರವು ನೀಡಬೇಕು
ಬನ್ನಮ್ಮ ಮಲ್ಲಪ್ಪ ರವಿ ತಾಯಿ
ಹೆಮೋಫಿಲಿಯಾ ಹುಟ್ಟುತ್ತಲೆ ಬರುತ್ತದೆ. ಇದು ಗುಣಪಡಿಸಲಾಗದು. ಆದರೆ ಆರೋಗ್ಯ ಇಲಾಖೆಯಿಂದ ಹೆಮೋಫಿಲಿಯಾದಿಂದ ಬಳಲುವವರಿಗೆ ಸೂಕ್ತ ಔಷಧೋಪಚಾರ ನೀಡಲಾಗುವುದು