ಉಲ್ಟಾ ಧ್ವಜಾರೋಹಣ; ಧ್ವಜ ನೀತಿಸಂಹಿತೆ ಉಲ್ಲಂಘನೆ

7

ಉಲ್ಟಾ ಧ್ವಜಾರೋಹಣ; ಧ್ವಜ ನೀತಿಸಂಹಿತೆ ಉಲ್ಲಂಘನೆ

Published:
Updated:

ಯಾದಗಿರಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ 72ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಚಿವ ರಾಜಶೇಖರ ಪಾಟೀಲರು ಆರೋಹಣ ಮಾಡಿದ ರಾಷ್ಟ್ರಧ್ವಜ ಉಲ್ಟಾ ಹಾರಾಡಿ ಅವಾಂತರ ಸೃಷ್ಟಿಸಿತು.

ಸಚಿವರು ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ಕ್ರೀಡಾಂಗಣದ ತುಂಬಾ ರಾಷ್ಟಗೀತೆ ಮೊಳಗಿತು. ಆದರೆ, ಧ್ವಜಾರೋಹಣ ಉಲ್ಟಾ ಆಗಿರುವುದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಕೂಡಲೇ ಧ್ವಜವನ್ನು ಅವರೋಹಣ ಮಾಡಿ ಸರಿ ಮಾಡಿದರು. ಇದರಿಂದ ಅಧಿಕಾರಿಗಳು ಧ್ವಜನೀತಿ ಸಂಹಿತೆ ಉಲ್ಲಂಘಿಸಿದರು. ಇದರಿಂದ ನೆರೆದವರೂ ಇರಿಸುಮುರಿಸು ಅನುಭವಿಸಿದರು.

ಸಚಿವರ ಭಾಷಣದಲ್ಲಿ ತಪ್ಪುಗಳು: ಧ್ವಜಾರೋಹಣ ನೆರವೇರಿಸಿದ ಸಚಿವ ರಾಜಶೇಖರ ಪಾಟೀಲ ಅವರು ಜಿಲ್ಲಾಡಳಿತ ಸಿದ್ಧಪಡಿಸಿದ್ದ ಮಾದರಿ ಭಾಷಣವನ್ನು ಓದುವಾಗ ಹಲವು ತಪ್ಪುಗಳನ್ನು ಉಚ್ಛರಿಸುವ ಮೂಲಕ ಅಭಾಸ ಉಂಟು ಮಾಡಿದರು. ಜಿಲ್ಲಾಧಿಕಾರಿಯ ‘ಕೂರ್ಮಾರಾವ್‌’  ಹೆಸರು ಸಚಿವರು ‘ಕರ್ಮಾರಾವ್‌’ ಎಂದು ತಪ್ಪಾಗಿ ಓದಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿ ಮಾಲಿಪಾಟೀಲ ಅವರನ್ನು ಶಾಸಕರು ಎಂದು ಸಂಬೋಧಿಸಿದರು. ‘ಮಹತ್ವಾಕಾಂಕ್ಷಿ ಜಿಲ್ಲೆ’ ಎನ್ನುವ ಬದಲಿಗೆ ‘ಮಹಾಕಾಂಕ್ಷೆ ಜಿಲ್ಲೆ’ ಎಂದು ತಪ್ಪಾಗಿ ಹೇಳುತ್ತಿದ್ದಂತೆ ನೆರೆದವರು ಸಚಿವರ ಭಾಷಣ ಕೇಳಿ ಸುಸ್ತಾದರು. 

ತನಿಖೆಗೆ ಆದೇಶ: ಧ್ವಜ ಆರೋಹಣ ಮಾಡಲು ನುರಿತ ಮತ್ತು ವಿಶೇಷ ತರಬೇತಿ ಇರುವ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಆದರೆ, ಅಂತಹ ಸಿಬ್ಬಂದಿ ನಿರ್ಲಕ್ಷ್ಯದಿಂದ ಧ್ವಜವನ್ನು ಉಲ್ಟಾ ಆರೋಹಣ ಮಾಡಬೇಕಾಯಿತು. ಧ್ವಜಾರೋಹಣ ಸಿದ್ಧತೆಯ ಹೊಣೆ ಯಾರದ್ದು? ಈ ಅಚಾತುರ್ಯಕ್ಕೆ ಕಾರಣವೇನು? ಈ ಕುರಿತು ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ್‌ ಪಾಟೀಲ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !