ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಯಲ್ಲಿ 17 ವಿದ್ಯಾರ್ಥಿಗಳು ಟಾಪ್‌

ಮಾನ್ಯ ಚಿತ್ತಾಪುರ ಜಿಲ್ಲೆಗೆ ಟಾಪರ್‌, 624 ಅಂಕಗಳು
Last Updated 19 ಮೇ 2022, 16:36 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 17 ವಿದ್ಯಾರ್ಥಿಗಳು ಟಾಪ್‌ ಸ್ಥಾನ ಪಡೆದಿದ್ದಾರೆ. ನಗರದ ಡಾನ್‌ ಬಾಸ್ಕೊ ಪ್ರೌಢಶಾಲೆಯ ವಿದ್ಯಾರ್ಥಿನಿ ಮಾನ್ಯ ಚಿತ್ತಾಪುರ 625ಕ್ಕೆ 624 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದಂತೆ ಆಗಿದೆ.

ಟಾಪ್‌ ಸ್ಥಾನ ಗಳಿಸಿದ ವಿದ್ಯಾರ್ಥಿಗಳಲ್ಲಿ 15 ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ, ಇಬ್ಬರು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದವರಾಗಿದ್ದಾರೆ.

17 ವಿದ್ಯಾರ್ಥಿಗಳು: ಯಾದಗಿರಿ ತಾಲ್ಲೂಕಿನಲ್ಲಿ 8 ವಿದ್ಯಾರ್ಥಿಗಳು, 8 ಸುರಪುರ ತಾಲ್ಲೂಕಿನ ವಿದ್ಯಾರ್ಥಿಗಳು, ಶಹಾಪುರ ತಾಲ್ಲೂಕಿನ ಒಬ್ಬ ವಿದ್ಯಾರ್ಥಿ ಟಾಪ್‌ ಸ್ಥಾನ ಪಡೆದಿದ್ದಾರೆ.

ಡಾನ್‌ಬಾಸ್ಕ್‌ ಪ್ರೌಢಶಾಲೆಯ ಮಾನ್ಯ ಚಿತ್ತಾಪುರ, ರಕ್ಷಿತಾ ಸಂಜೀವ, ಬಸನಗೌಡ ನಂದನಗೌಡ ಸ್ಮಾರಕ ಪ್ರೌಢಶಾಲೆಯ ಸೌಜನ್ಯ ತೇಜಪ್ಪ, ಡಾ.ಅಂಬೇಡ್ಕರ್‌ ‍ವಸತಿ ಶಾಲೆಯ ವೆಂಕಟೇಶ, ಪ್ರಗತಿ ಪ್ರೌಢಶಾಲೆಯ ಸಾನಿಯಾ ಇಮಾನ್‌, ಶ್ರೀ ಭಗವಾನ್‌ ಮಹಾವೀರ ಪ್ರೌಢಶಾಲೆಯ ವಿಮರ್ಷಾ, ಎಸ್‌ವಿ ವಿದ್ಯಾರಣ್ಯ ಸ್ವಾಮಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮಲ್ಲಿನಾಥ, ಶಾಲಿನಿ, ಪ್ರೇರಣಾ ಪ್ರೌಢಶಾಲೆಯ ಸನ್ಮತಿ, ಶ್ರೀ ಖಾತ್ಗೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಂಜನ ದೇಸಾಯಿ, ಪ್ರಿಯಾಂಕ ಹಿರೇಮಠ, ರಾಚೋಟಿ ವೀರಣ್ಣ ಆಂಗ್ಲಮಾಧ್ಯಮ ಪ್ರೌಢಶಾಲೆಯ ಅಂಕಿತಾ ಪಾಟೀಲ, ಸುಮಾ, ವರ್ಷಿತಾ, ಸಾಕ್ಷಿ, ಸರ್ಕಾರಿ ಪ್ರೌಢಶಾಲೆಯ ಅನಿಕಾ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಣಮಂತರಾಯ ಟಾಪ್‌ ಸ್ಥಾನ ‍ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಒಬ್ಬರು 625ಕ್ಕೆ 624, ಐದು ವಿದ್ಯಾರ್ಥಿಗಳು 625ಕ್ಕೆ 623, ಐದು ವಿದ್ಯಾರ್ಥಿಗಳು 625ಕ್ಕೆ 622, ಇಬ್ಬರು ವಿದ್ಯಾರ್ಥಿಗಳು 625ಕ್ಕೆ 621, ನಾಲ್ಕು ವಿದ್ಯಾರ್ಥಿಗಳು 625ಕ್ಕೆ 620 ಹಂಚಿಕೊಂಡಿದ್ದಾರೆ.

ಮಾನ್ಯಗೆ ಐಎಎಸ್‌ ಮಾಡುವಾಸೆ: ಜಿಲ್ಲೆಗೆ ಪ್ರಥಮ ರ್‍ಯಾಂಕ್‌ ಗಳಿಸಿದ ಮಾನ್ಯ ಚಿತ್ತಾಪುರ ಧನರಾಜ್‌ಗೆ ಐಎಎಸ್‌ ಮಾಡುವಾಸೆ ಇದೆ. 4–5 ಐದು ಗಂಟೆ ವ್ಯಾಸಂಗ ಮಾಡುತ್ತಿದ್ದೆ. ಅಜ್ಜ ಗಣಿತ ಸೂತ್ರಗಳನ್ನು ಹೇಳಿಕೊಡುತ್ತಿದ್ದರು. ತಾಯಿ, ತಂದೆ, ಶಿಕ್ಷಕರು ಉತ್ತಮ ಮಾರ್ಗದರ್ಶನ ನೀಡಿದ್ದಾರೆ ಎಂದು ಮಾನ್ಯ ಹೇಳುತ್ತಾರೆ.

ಜಿಲ್ಲೆಗೆ ಎರಡನೇ ಸ್ಥಾನ ಪಡೆದ ರಕ್ಷಿತಾ ಸಂಜೀವಕುಮಾರ ಪತಂಗೆ ಐಎಎಸ್‌ ಅಥವಾ ಐಪಿಎಸ್‌ ಆಗುವ ಆಕಾಂಕ್ಷೆ ಹೊಂದಿದ್ದಾರೆ. 8–12 ತಾಸು ಓದಲು ಮೀಸಲೀಡುತ್ತಿದ್ದೆ. ಅಂದಿನ ಪಾಠವನ್ನು ಅಂದೇ ಮುಗಿಸುತ್ತಿದ್ದೆ ಎನ್ನುತ್ತಾರೆ ರಕ್ಷಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT