ಯಾದಗಿರಿ: ನಗರದ ರೈಲ್ವೆ ಸ್ಟೇಷನ್ ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಇರಿಸಿದ್ದ ₹ 14.50 ಲಕ್ಷ ನಗದು ಹಾಗೂ 35 ಗ್ರಾಂ ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದಿದ್ದಾರೆ.

ಬಳಿಚಕ್ರ ಗ್ರಾಮದ ಶರಣಪ್ಪ ಕೊನೆಮನಿ ಎಂಬುವವರು ನಗದು ಮತ್ತು ಚಿನ್ನಾಭರಣ ಕಳೆದುಕೊಂಡವರು. ದೂರು ಆಧರಿಸಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ವಾಸವಿರುವ ಶರಣಪ್ಪ ಅವರು ವ್ಯವಹಾರ ಸಂಬಂಧಿಸಿದ ಕಾರ್ಯಕ್ಕಾಗಿ ₹ 5 ನಗದ ಹಣದೊಂದಿಗೆ ಕುಟುಂಬ ಸಮೇತ ಬಂದಿದ್ದರು. ಬ್ಯಾಂಕ್ನಿಂದ ₹9.50 ಲಕ್ಷ ಡ್ರಾ ಮಾಡಿಕೊಂಡು ಬಂದು ಕಾರಿನಲ್ಲಿ ಇರಿಸಿದ್ದರು. ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಬಟ್ಟೆ ಖರೀದಿ, ಜ್ಯೂಸ್ ಕುಡಿಯಲು ತೆರಳಿದ್ದರು. ಅದೇ ವೇಳೆ ಕಾರಿನಲ್ಲಿ ಇರಿಸಿದ್ದ ಚಿನ್ನಾಭರಣ ಹಾಗೂ ₹ 14.50 ಲಕ್ಷ ನಗದು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.