ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಣಿ ಚನ್ನಮ್ಮ ಮಹಿಳೆಯರಿಗೆ ಆದರ್ಶ’

Last Updated 25 ಅಕ್ಟೋಬರ್ 2017, 9:47 IST
ಅಕ್ಷರ ಗಾತ್ರ

ಕಕ್ಕೇರಾ: ‘ಹಿಂದೆ ಮಹಿಳೆ ಅಡುಗೆ ಮಾಡುವುದಕ್ಕೆ ಮಾತ್ರ ಮೀಸಲು ಎಂಬ ಅಭಿಮತ ಇತ್ತು. ಅಂತಹ ಕಾಲದಲ್ಲೂ ವೈರಿಗಳ ಜೊತೆ ಕಾದಾಡಿ ರಾಜ್ಯ ರಕ್ಷಿಸಿದ ಕಿತ್ತೂರು ರಾಣಿ ಚನ್ನಮ್ಮ ಮಹಿಳೆಯರಿಗೆ ಆದರ್ಶ’ ಎಂದು ಪ್ರಾಂಶುಪಾಲ ಭೀಮಣ್ಣ ಭೋಸಗಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ವೀರ ರಾಣಿ ಚನ್ನಮ್ಮ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ರತಿ ಸ್ತ್ರೀಯಲ್ಲೂ ಸಮಾಜ ತಿದ್ದುವ ಹಾಗೂ ದುಷ್ಟರನ್ನು ನಾಶ ಮಾಡುವ ಶಕ್ತಿ ಇದೆ.

ಹೆಣ್ಣು ಅಬಲೆಯಲ್ಲ ಸಬಲೆ ಎಂದು ದೇಶಕ್ಕೆ ತೋರಿಸಿದ ಮಹಾನ್ ಶಕ್ತಿ ಚನ್ನಮ್ಮ’ ಎಂದು ಹೇಳಿದರು. ಮುಖ್ಯಶಿಕ್ಷಕ ಬಸವರಾಜ ಗುತ್ತೇದಾರ, ಉಪನ್ಯಾಸಕರಾದ ದಯಾನಂದ ಮಠ, ವೆಂಕಟೇಶ ದೊರೆ, ಬಸವರಾಜ ಹಿರೇಹಳ್ಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT