ಸೋಮವಾರ, ಜನವರಿ 20, 2020
18 °C

ಅದ್ಧೂರಿ ಯಲ್ಲಮ್ಮನ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಕೋಟಾ: ತಾಲ್ಲೂಕಿನ ಬಾಬಾನಗರ ಗ್ರಾಮದ ಗುಡ್ಡದಲ್ಲಿರುವ ಯಲ್ಲಮ್ಮ ದೇವಸ್ಥಾನದಲ್ಲಿ ಗುರುವಾರ ಯಲ್ಲಮ್ಮನ ಜಾತ್ರೆ ಅದ್ಧೂರಿಯಾಗಿ ನೆರವೇರಿತು.

ಸುತ್ತಮುತ್ತಲಿನ ಏಳು ಗ್ರಾಮಗಳಾದ ಬಾಬಾನಗರ, ಬಿಜ್ಜರಗಿ, ಕಳ್ಳಕವಟಗಿ, ಹುಬನೂರ, ಸೋಮದೇವರಹಟ್ಟಿ, ಟಕ್ಕಳಕಿ, ಧನರ್ಗಿ ಗ್ರಾಮದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಎತ್ತಿನ ಗಾಡಿ, ಟ್ರಾಕ್ಟರ್, ಕಾರು, ಬೈಕ್ ಮೂಲಕ ಜಾತ್ರೆಗೆ ಬಂದು ದೇವಿಯ ದರ್ಶನ ಪಡೆದರು. ಈ ಜಾತ್ರೆಯು ಹೆೇಡಗಿ (ಬುಟ್ಟಿ) ಜಾತ್ರೆ ಎಂದೇ ಪ್ರತೀತಿ ಪಡೆದಿದೆ. ಅಂದರೆ, ಬಂದಂತಹ ಎಲ್ಲ ಭಕ್ತಾಧಿಗಳು ಹೇಡಗಿಯಲ್ಲಿ ದೇವರಿಗೆ ನೈವೇದ್ಯ ಹಾಗೂ ತಮ್ಮ ಕುಟುಂಬದವರಿಗೆ ವಿವಿಧ ಆಹಾರ ಖಾದ್ಯಗಳಾದ ಕಡುಬು, ಹೋಳಿಗೆ, ಸಜ್ಜೆ ರೊಟ್ಟಿಗಳನ್ನು ತಂದು ದೇವಿಗೆ ಅರ್ಪಿಸಿದರು. ನಂತರ ಸಾಮೂಹಿಕವಾಗಿ ಕುಟುಂಬ ಸದಸ್ಯರು ಹಾಗೂ ಬಂಧುಗಳು ಊಟ ಸವಿದರು.

ಮಧ್ಯಾಹ್ನ 2 ಗಂಟೆಗೆ ದೇವಿಯ ಪಲ್ಲಕಿ ಉತ್ಸವ ನೇರವೇರಿತು. ‘ರೇಣುಕಾ ಯಲ್ಲಮ್ಮ ನಿನ್ನ ಪಲ್ಲಕ್ಕಿ ಉದೋ ಉದೋ’ ಎಂದು ಭಕ್ತರು ಘೋಷಣೆ ಕೂಗಿದರು.

ದೇವಸ್ಥಾನದ ಸುತ್ತ ಪಲ್ಲಕಿ ಉತ್ಸವ ನೇರವೇರಿದ ನಂತರ ಮಡಿಯಿಂದ ಬಸವರಾಜ ಪೂಜೇರಿ ಹಾಗೂ ಸೋಮನಿಂಗ ಹಾದಿಮನಿ ಅವರು ಅಂಬಲಿ ಕೊಡ ಹೊತ್ತು ಅಗ್ನಿಕುಂಡ ಹಾಯ್ದರು. ಸೇರಿದ್ದ ಭಕ್ತರು ದೇವರಿಗೆ ಉಟಗಿ, ಉಡಿ ತುಂಬಿ, ಧೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು.

ರಾಮಣ್ಣ ಪೂಜೇರಿ, ಸಿದ್ದಪ್ಪ ಪೂಜೇರಿ, ಪ್ರಕಾಶ ಪೂಜೇರಿ, ಧರೆಪ್ಪ ಪೂಜೇರಿ, ಯಲ್ಲಮ್ಮ ದೇವಿಯ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

 

 

ಪ್ರತಿಕ್ರಿಯಿಸಿ (+)