ಕಾರ್ಗಲ್: ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರು ಹಿಂದೆಂದೂ ಕಾಣದಷ್ಟು ತಳಮಟ್ಟಕ್ಕೆ ತಲುಪಿದೆ. ಈಗ ಸಂಗ್ರಹ ಇರುವ ನೀರು ವಿದ್ಯುತ್ ಉತ್ಪಾದಿಸಲು ಮುಂದಿನ 20 ದಿನಗಳವರೆಗೆ ಮಾತ್ರ ಸಾಕು ಎಂದು ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ಜಿ. ಹನುಮಂತಪ್ಪ ಮಾಹಿತಿ ನೀಡಿದರು.

ಮುಂಗಾರು ಮಳೆ ಕೈಕೊಟ್ಟಿರುವು ದರಿಂದ ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ವಿದ್ಯುತ್ ಉತ್ಪಾದನೆಗೆ ಸಮಸ್ಯೆ ಆದೀತು ಎಂಬ ಭೀತಿ ಎದುರಾಗಿದೆ.

ಕೆಪಿಸಿ ಸಿವಿಲ್ ವಿಭಾಗದ ಮುಖ್ಯ ಎಂಜಿನಿಯರ್ ರಾಜಮುಡಿ ಮಾತನಾಡಿ, ಪ್ರಸ್ತುತ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ 15.22 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಇದು ಅಣೆಕಟ್ಟೆಯ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ 10ರಷ್ಟು. ಕಳೆದ ವರ್ಷ ಜೂನ್ 15ರಂದು 1,759 ಅಡಿ ನೀರು ಇತ್ತು, ಇಗ 1,746 ಅಡಿ ನೀರು ಇದೆ. ಅಂದರೆ ಕಳೆದ ಸಾಲಿಗಿಂತ 13 ಅಡಿ ನೀರು ಕಡಿಮೆ ಎಂದರು.

ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ 1,200 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ.
ಒಂದೇ ದಿನದಲ್ಲಿ 23.461 ದಶಲಕ್ಷ ಯೂನಿಟ್ ಉತ್ಪಾದಿಸುವ ಮೂಲಕ ದೇಶದ ವಿದ್ಯುತ್ ಕ್ಷೇತ್ರದಲ್ಲಿ ದಾಖಲೆ ಮಾಡಲಾಗಿದೆ ಎಂದು ರಾಜಮುಡಿ ತಿಳಿಸಿದರು.

50 ವರ್ಷಗಳಲ್ಲಿ ಮಾಡಲಾಗದ ಸಾಧನೆ ಮತ್ತು ದಾಖಲೆ ಇದಾಗಿದೆ. ವಿದ್ಯುತ್ ಘಟಕಗಳಿಗೆ ನೀರು ಪೂರೈಸುವ ಮಳಲಿ ನಾಲೆಯ ದುರಸ್ತಿಯಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.