ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಕೂರ್ಗ್‌ನಿಂದ ಯುವತಿಯರಿಗೆ ತರಬೇತಿ

Last Updated 9 ಜೂನ್ 2017, 9:32 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಹಾಕಿ ಕೂರ್ಗ್ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮಹಿಳಾ ಹಾಕಿ ಟೂರ್ನಿ ಆಯೋಜಿಸಿದ್ದು  ಪ್ರತಿಭಾವಂತ ಆಟಗಾರ್ತಿಯರನ್ನು ಪ್ರೋತ್ಸಾಹಿಸಲು ಒಂದು ತಿಂಗಳ ಅವಧಿಯ ತರಬೇತಿ ಶಿಬಿರ ನಡೆಯಿತು. ಪೊನ್ನಂಪೇಟೆ  ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟರ್ಫ್‌ ಮೈದಾನದಲ್ಲಿ ನಡೆದ ಶಿಬಿರದಲ್ಲಿ 30 ಮಂದಿ ಆಟಗಾರ್ತಿಯರು ಪಾಲ್ಗೊಂಡಿದ್ದರು.

ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಶಿಬಿರಕ್ಕೆ ಸಹಕಾರ ನೀಡಿದ್ದರು. ಕ್ರೀಡಾ ವಸತಿ ನಿಲಯದಲ್ಲಿ ವಸತಿ, ಊಟದ ವ್ಯವಸ್ಥೆ ಇತ್ತು. ವಸತಿ ನಿಲಯದ ತರಬೇತುದಾರ,  ಹಾಕಿ ಕೂರ್ಗ್‌ ಟೂರ್ನಮೆಂಟ್ ಅಧ್ಯಕ್ಷ  ಬುಟ್ಟಿಯಂಡ ಚಂಗಪ್ಪ, ಸದಸ್ಯ ಎಚ್‌. ಎನ್‌. ಅರುಣಾ ತರಬೇತಿ ನೀಡಿದರು.

ಹಾಕಿ ಕೂರ್ಗ್‌ನಲ್ಲಿ ತರಬೇತಿ ಪಡೆದ 60 ಆಟಗಾರರಿದ್ದಾರೆ. ಹಾಕಿ ಇಂಡಿಯಾ ಹಾಕಿ ಕೂರ್ಗ್‌ಗೆ 2 ತಂಡಗಳಿಗೆ ಭಾಗ ವಹಿಸಲು ಅವಕಾಶ ಕಲ್ಪಿಸಿದೆ. ಹೀಗಾಗಿ, 22 ವರ್ಷದೊಳಗಿನ ಸೀನಿಯರ್‌, 19 ವರ್ಷದೊಳಗಿನ ಜೂನಿಯರ್‌, 16 ವರ್ಷದೊಳಗಿನ ಸಬ್‌ ಜೂನಿಯರ್‌ ಎಂದು 3 ತಂಡಗಳಲ್ಲಿ ತರಬೇತಿ ನೀಡಲಾಗುತ್ತಿದೆ. 

ರಾಷ್ಟ್ರೀಯ ಟೂರ್ನಿಗೂ ಇದೇ ಆಧಾರದಲ್ಲಿ ಕಳುಹಿಸಲಾಗುವುದು. ಸೀನಿಯರ್‌, ಜೂನಿಯರ್, ಸಬ್‌ ಜೂನಿಯರ್‌ ತಂಡಗಳು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಮೂರು ವಿಭಾಗಗಳಲ್ಲೂ ಕಂಚಿನ ಪದಕ ಪಡೆದುಕೊಂಡಿದ್ದಾರೆ ಎಂದು ತರಬೇತುದಾರ ಚಂಗಪ್ಪ ಹೇಳಿದರು.

ತಂಡದೊಂದಿಗೆ ವ್ಯವಸ್ಥಾಪಕಿ ಪೂರ್ಣಿಮಾ, ತರಬೇತುದಾರ ಕೋಣೆರಿರ ಮಧು  ಸಹಕರಿಸುತ್ತಿದ್ದಾರೆ. ತರಬೇತಿ ಶಿಬಿರದಲ್ಲಿ ಜಿಲ್ಲೆಯ  3 ತಾಲ್ಲೂಕುಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಸಂಧ್ಯಾ, ಯಕ್ಷಿತಾ, ಲಿಪಿತಾ. ರಾಘವಿ, ಉಷಾ, ಕವನಾ, ಹರಿಣಾಕ್ಷಿ, ಟೀನಾ,ಸೌಜನ್ಯಾ, ಪಾರ್ವತಿ, ವಿದ್ಯಾ, ದೇವಿ, ಅನ್ನಪೂರ್ಣಾ, ಕಾವ್ಯಾ, ರಂಜಿತಾ, ಬಬಿತಾ, ಕಾವೇರಮ್ಮ, ನಿವೇದಿತಾ, ಕಾದಂಬರಿ, ಸುಮಲತಾ, ಸುಶ್ಮಿತಾ, ಹೇಮಾ, ಮೇಘನಾ, ಕೀರ್ತನಾ, ದೀಪ್ತಿ, ಸೌಮ್ಯಾ, ಕುಮುದಾ, ಬಿ.ಜಿ.ಕಾವೇರಿ, ಎಂ.ಸಿ.ಸಂಧ್ಯಾ ತರಬೇತಿ ಶಿಬಿರದಲ್ಲಿ ಭಾಗವಹಿಸಿ, ಕ್ರೀಡೆಯಲ್ಲಿ ಹೆಚ್ಚಿನ ನೈಪುಣ್ಯ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT