ಆಸಕ್ತಿ ಇಲ್ಲದ ಜೀವನ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಆಸಕ್ತಿ ಇಲ್ಲದ ಜೀವನ

Published:
Updated:

ನನಗೆ ಜೀವನದಲ್ಲಿ ಉತ್ಸಾಹವೇ ಇಲ್ಲ. ತುಂಬಾ ಬೇಜಾರಾಗುತ್ತದೆ. ಆದರೆ ಕಾರಣ ತಿಳಿದಿಲ್ಲ. ಯಾವುದರಲ್ಲೂ ಆಸಕ್ತಿ ಇಲ್ಲ. ನನಗೆ ಏಕೆ ಹೀಗಾಗುತ್ತಿದೆ. ನಾನು ಸರಿ ಹೊಂದಲು ಏನು ಮಾಡಬೇಕು?

– ಹೆಸರು, ಊರು ಬೇಡ

ನೀವು ನಿಮ್ಮ ವಯಸ್ಸು, ನೀವು ಓದುತ್ತಿದ್ದೀರೋ ಕೆಲಸದಲ್ಲಿದ್ದಿರೋ ಎಂಬುದನ್ನು ಇಲ್ಲಿ ತಿಳಿಸಿ. ನಾನು ಹೇಳುವುದೇನೆಂದರೆ ನಿಮಗಾಗಿ ಕೆಲದಿನಗಳು ರಜೆ ತೆಗೆದುಕೊಳ್ಳಿ. ನೀವು ಜೀವನದಲ್ಲಿ ಏನು ಮಾಡಬೇಕು ಎಂದುಕೊಂಡಿದ್ದೀರಿ ಅದನ್ನು ಗುರುತಿಸಿ. ನೀವು ಸಾಧಿಸಬೇಕು ಎಂದುಕೊಂಡಿರುವ ಗುರಿಗಳನ್ನು ಒಂದೆಡೆ ಬರೆದಿಟ್ಟುಕೊಳ್ಳಿ. ಅದು ನಿಮ್ಮನ್ನು ಜಾಗೃತರಾಗಿರಿಸಿ, ಗುರಿ ಸಾಧನೆಯ ಮೇಲೆ ಕೆಲಸ ಮಾಡಲು ಸಹಾಯ ಮಾಡುತ್ತದೆ. ಸ್ನೇಹಿತರ ಜೊತೆ ಬೆರೆಯಿರಿ. ಪ್ರತಿದಿನ ಕೆಲಹೊತ್ತು ಆಟವಾಡಿ. ಆಟದಂತಹ ಕಠಿಣ ವ್ಯಾಯಾಮ ನಿಮ್ಮನ್ನು ಸೋಮಾರಿತನದಿಂದ ಹೊರಬರಲು ಸಹಾಯ ಮಾಡುತ್ತದೆ. ನಿಧಾನಕ್ಕೆ ನೀವು ನಿಮ್ಮ ಕ್ರಿಯಾಶೀಲತೆಯನ್ನು ಮರಳಿ ಪಡೆಯುತ್ತೀರಿ ಮತ್ತು ಉತ್ಸಾಹದಿಂದಿರುತ್ತೀರಿ.

ನಾನು ಯುಪಿಎಸ್‌ಇ ಪರೀಕ್ಷೆಗೆ ಓದುತ್ತಿದ್ದೇನೆ. ಆದರೆ ನನಗೆ ಎರಡು ದಿನ ಓದಿದ್ರೆ ನಂತರ ದಿನಗಳಲ್ಲಿ ಬೋರ್ ಆಗಲು ಶುರುವಾಗುತ್ತದೆ. ಜೊತೆಗೆ ಮೊಬೈಲ್‌ ಅನ್ನು ಜಾಸ್ತಿ ಬಳಕೆ ಮಾಡುತ್ತೇನೆ. ಮೊಬೈಲ್ ಕಡಿಮೆ ಉಪಯೋಗಿಸಬೇಕು ಎಂದರೆ ಏನು ಮಾಡಬೇಕು. ಯುಪಿಎಸ್‌ಇ ಪರೀಕ್ಷೆ ಪಾಸ್ ಮಾಡಬೇಕೆಂದು ಮನಸ್ಸು ಚಡಪಡಿಸುತ್ತಿದೆ. ಇದಕ್ಕೆ ಏನು ಮಾಡಲಿ. ಸಲಹೆ ಕೊಡಿ.

– ರವಿ, ಶಿವಮೊಗ್ಗ

ಯುಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಾಗ ಸರಿಯಾದ ಕ್ರಮದಲ್ಲಿ ಅಭ್ಯಾಸ ಮಾಡುವುದು ತುಂಬಾ ಮುಖ್ಯ. ನೀವು ನಿಜವಾಗಿಯೂ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ನಿಮಗೆ ಬೇರೆ ದಾರಿ ಇಲ್ಲ. ನಿರಂತರವಾಗಿ ಗಂಭೀರವಾಗಿ ಕುಳಿತು ಓದಲೇಬೇಕು. ಓದಿನ ಮಧ್ಯೆ 10 ನಿಮಿಷಗಳ ವಿರಾಮ ತೆಗೆದುಕೊಂಡು ಸ್ವಲ್ಪ ದೂರ ಅಡ್ಡಾಡಿ ಮತ್ತೆ ಬಂದು ಓದಲು ಆರಂಭಿಸಿ. ಕೋಚಿಂಗ್ ತರಗತಿಗಳಿಗೆ ಹೋಗುವುದು ಒಳ್ಳೆಯ ಅವಕಾಶ. ಅವರು ನಿಮಗೆ ಬೇಕಾದ ರೀತಿಯಲ್ಲಿ ತರಬೇತಿ ನೀಡುತ್ತಾರೆ.

ಮೊಬೈಲ್ ವಿಷಯಕ್ಕೆ ಬಂದರೆ ಎಲ್ಲಾ ಸಾಮಾಜಿಕ ಜಾಲತಾಣಗಳ ಆ್ಯಪ್‌ಗಳನ್ನು ಡಿಲಿಟ್ ಮಾಡಿ. ನೋಟಿಫಿಕೇಶನ್‌ಗಳನ್ನು ಬಂದ್ ಮಾಡಿ. ಮುಖ್ಯವಾದ ಕರೆಗಳಿಗೆ ಮಾತ್ರ ಮೊಬೈಲ್ ಬಳಸಿ. ಮೊಬೈಲ್‌ ಬಳಕೆಯನ್ನು ನಿಮ್ಮಿಂದ ನಿಯಂತ್ರಿಸಲು ಸಾಧ್ಯವಾಗದಿದ್ದರೆ ನಿಮ್ಮ ಪರೀಕ್ಷೆ ಮುಗಿಯುವವರೆಗೂ ಫೋನ್ ಸ್ವಿಚ್‌ಆಫ್ ಮಾಡಿ ಬದಿಗಿರಿಸಿ.

* ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ನಾನು ಏನೇ ಕೆಲಸ ಮಾಡಿದರೂ ಅದರಲ್ಲಿ ನಮ್ಮ ಅಮ್ಮನಿಗೆ ತಪ್ಪು ಸಿಗುವ ಹಾಗೆ ಮಾಡುತ್ತೇನೆ. ನನಗೆ ಅಮ್ಮನನ್ನು ಕಂಡರೆ ತುಂಬಾ ಪ್ರೀತಿ. ಹಾಗಾಗಿ ಅವರು ಸ್ವಲ್ಪ ಬೈದರೂ ಮನಸ್ಸಿಗೆ ನೋವಾಗುತ್ತದೆ. ಮನಸ್ಸು ಅಪ್‌ಸೆಟ್ ಆಗುವ ಕಾರಣಕ್ಕೆ ಅದು ನನ್ನ ಓದಿನ ಮೇಲೂ ಪರಿಣಾಮ ಬೀರುತ್ತಿದೆ. ಓದಿನ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ನಾನು ಮಾಡುವ ಕೆಲಸವನ್ನು ಪರ್ಫೆಕ್ಟ್ ಆಗಿ ಮಾಡಲು ಏನು ಮಾಡಬೇಕು. ಮನಸ್ಸನ್ನು ಫ್ರೀಯಾಗಿರಿಸಿಕೊಂಡು ಹೇಗೆ ಕೆಲಸ ಮಾಡಬೇಕು?

ಹೆಸರು, ಊರು ಬೇಡ

ನೀವು ನಿಮ್ಮ ವಿದ್ಯಾಭ್ಯಾಸ ಜೀವನದ ಅತ್ಯಂತ ಪ್ರಮುಖ ಘಟ್ಟದಲ್ಲಿದ್ದೀರಿ. ಹಾಗಾಗಿ ನೀವು ನಿಮ್ಮ ಸಂಪೂರ್ಣ ಸಮಯ ಹಾಗೂ ಶ್ರಮವನ್ನು ಓದಿನ ಮೇಲೆ ನೀಡಿ. ನಡುವೆ ಸಿಗುವ ಚಿಕ್ಕ ಬಿಡುವಿನಲ್ಲಿ ನೀವು ನಿಮ್ಮ ತಾಯಿ ವಹಿಸಿದ ಕೆಲಸವನ್ನು ಮಾಡಬಹುದು ಅಥವಾ ನಿಮ್ಮ ತಾಯಿಗೆ ಕೆಲಸದಲ್ಲಿ ಸಹಾಯ ಮಾಡಬಹುದು. ಒಂದನ್ನು ನೆನಪಿಡಿ ಯಾವುದೇ ವಿಷಯಕ್ಕೂ ಪರಿಪೂರ್ಣ ಅಸ್ತಿತ್ವ ಎನ್ನುವುದಿಲ್ಲ. ಆದರೆ ಮಾಡುವ ಕೆಲಸವನ್ನು ದಕ್ಷತೆಯಿಂದ ಪರಿಪೂರ್ಣವಾಗಿ ಮಾಡಬೇಕು. ನಿಮ್ಮ ತಾಯಿ ನಿಮ್ಮನ್ನು ತಿದ್ದಲು ಪ್ರಯ್ನತಿಸುತ್ತಿದ್ದಾರೆ. ಯಾಕೆಂದರೆ ನೀವು ಆ ಕೆಲಸವನ್ನು ಸರಿಯಾದ ಕ್ರಮದಲ್ಲಿ ಮಾಡಲು ಕಲಿಯಲಿ ಎಂಬ ಕಾರಣಕ್ಕೆ. ಅದರ ಬಗ್ಗೆ ಹೆಚ್ಚಿಗೆ ವಿಚಾರ ಮಾಡಬೇಡಿ. ಅವರು ನಿಮಗೆ ಬೈಯುವುದು ನೀವು ಕೆಲಸ ಕಲಿಯಲಿ ಎಂಬ ಕಾಳಜಿಯಿಂದ. ಹಾಗಾಗಿ ನೀವು ಈಗಿನಿಂದ ನಿಮ್ಮ ಓದಿನ ಮೇಲೆ ಗಮನ ಹರಿಸಿ. ಸದ್ಯಕ್ಕೆ ಬೇರೆ ಯಾವುದೂ ನಿಮಗೆ ಮುಖ್ಯವಲ್ಲ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !