ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SEBIಯಲ್ಲಿ ಉದ್ಯೋಗಾವಕಾಶ: ಅಧಿಕಾರಿ ಹಂತದ 97 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Published 26 ಮಾರ್ಚ್ 2024, 10:18 IST
Last Updated 26 ಮಾರ್ಚ್ 2024, 10:20 IST
ಅಕ್ಷರ ಗಾತ್ರ

ನವದೆಹಲಿ: ಬಂಡವಾಳ ಮಾರುಕಟ್ಟೆಯ ವಾಚ್‌ಡಾಗ್‌ ಸೆಬಿ(SEBI) ತನ್ನ ವಿವಿಧ ಸ್ಟ್ರೀಮ್‌ಗಳಲ್ಲಿ ಖಾಲಿಯಿರುವ ಅಧಿಕಾರಿ ಹಂತದ 97 ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.

ಕಳೆದ ಜೂನ್‌ನಲ್ಲಿ ಕಾನೂನು ವಿಭಾಗದಲ್ಲಿ 25 ಸೀನಿಯರ್‌ ಲೆವಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತೆ ಕೋರಿತ್ತು. ಈ ವರ್ಷ ಗ್ರೇಡ್‌ ಎ ಸಾಮಾನ್ಯ (ಸಹಾಯಕ ವ್ಯವಸ್ಥಾಪಕ), ಕಾನೂನು, ಮಾಹಿತಿ ತಂತ್ರಜ್ಞಾನ, ಎಂಜಿನಿಯರಿಂಗ್ ಎಲೆಕ್ಟ್ರಿಕಲ್, ಸಂಶೋಧನೆ ಮತ್ತು ಅಧಿಕೃತ ಭಾಷಾ ಸ್ಟ್ರೀಮ್‌ಗಳಿಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ಹೊರಡಿಸಿದೆ.

62 ಸೆಬಿ ಅಸಿಸ್ಟಂಟ್ ಮ್ಯಾನೇಜರ್‌ ಹುದ್ದೆಗಳು, ಮಾಹಿತಿ ತಂತ್ರಜ್ಞಾನ ವಿಭಾಗದ 24 ಹುದ್ದೆಗಳು, ಕಾನೂನು ಘಟಕ 5 ಹುದ್ದೆಗಳು, ಎಂಜಿನಿಯರಿಂಗ್ ಎಲೆಕ್ಟ್ರಿಕಲ್, ಸಂಶೋಧನೆ ಮತ್ತು ಅಧಿಕೃತ ಭಾಷಾ ಸ್ಟ್ರೀಮ್‌ಗೆ ತಲಾ ಎರಡು ಹುದ್ದೆಗಳಿವೆ.

ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಎರಡು ವಿಷಯಗಳಿಗೆ (ಪೇಪರ್‌) ಆನ್‌ಲೈನ್‌ ಪರೀಕ್ಷೆ ಇರಲಿದೆ. ಇದರಲ್ಲಿ ಶಾರ್ಟ್‌ಲೀಸ್ಟ್‌ ಆದವರು ಎರಡನೇ ಹಂತಕ್ಕೆ ಬರುತ್ತಾರೆ. ಇಲ್ಲಿಯೂ ಎರಡು ವಿಷಯಗಳಿಗೆ ಆನ್‌ಲೈನ್‌ ಪರೀಕ್ಷೆ ಇರಲಿದೆ. ಎರಡನೇ ಹಂತದಲ್ಲಿ ಶಾರ್ಟ್‌ಲೀಸ್ಟ್‌ ಆದವರನ್ನು ಸಂದರ್ಶನಕ್ಕೆ ಕರೆಯಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2022ರ ಜುಲೈನಲ್ಲಿ,  ಮಾಹಿತಿ ಮತ್ತು ತಂತ್ರಜ್ಞಾನ ಹುದ್ದೆಗೆ 24 ಹಿರಿಯ ಮಟ್ಟದ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. 2021ರ ಜನವರಿ ಗ್ರೇಡ್ ಎ (ಸಹಾಯಕ ವ್ಯವಸ್ಥಾಪಕ) ಹುದ್ದೆಗಳ ವಿವಿಧ ಸ್ಟ್ರೀಮ್‌ಗಳ 120 ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿತ್ತು.

ಭಾರತ ಸರ್ಕಾರದ ಶಾಸನಬದ್ಧ ಸಂಸ್ಥೆಯಾಗಿರುವ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್‌ ಬೋರ್ಡ್ ಆಫ್ ಇಂಡಿಯಾ (ಸೆಬಿ) 1992ರ ಏಪ್ರಿಲ್ 12 ರಂದು ಸ್ಥಾಪಿಸಲಾಯಿತು. ಭಾರತೀಯ ಹೂಡಿಕೆ ಮಾರುಕಟ್ಟೆಯಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸಲು ಇದನ್ನು ಪರಿಚಯಿಸಲಾಯಿತು. ಇದರ ಪ್ರಧಾನ ಕಚೇರಿ ಮುಂಬೈಯಲ್ಲಿದೆ. ಅಲ್ಲದೆ ನವದೆಹಲಿ, ಅಹಮದಾಬಾದ್, ಕೋಲ್ಕತಾ ಮತ್ತು ಚೆನ್ನೈ ಸೇರಿದಂತೆ ಹಲವೆಡೆ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT