ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSC ವತಿಯಿಂದ 1,198 MTS ಹುದ್ದೆಗಳು, 360 ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಜುಲೈ 21 ಅರ್ಜಿ ಸಲ್ಲಿಸಲು ಕಡೆಯ ದಿನ: ಮಾಹಿತಿ ಇಲ್ಲಿದೆ
Published 8 ಜುಲೈ 2023, 13:30 IST
Last Updated 8 ಜುಲೈ 2023, 13:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರದ ಸಿಬ್ಬಂದಿ ನೇಮಕಾತಿ ಅಯೋಗದ (SSC– Staff Selection Commission) ವತಿಯಿಂದ ಕೇಂದ್ರದ ಸಚಿವಾಲಯಗಳಲ್ಲಿ ಖಾಲಿ ಇರುವ ‘ನಾನ್‌ ಟೆಕ್ನಿಕಲ್ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ’ ಮತ್ತು ‘ಸಿಬಿಐಸಿ–ಸಿಬಿಎನ್’ ನಲ್ಲಿನ ಹವಾಲ್ದಾರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 1,198 ನಾನ್‌ ಟೆಕ್ನಿಕಲ್ ಮಲ್ಟಿ ಟಾಸ್ಕಿಂಗ್ ಹುದ್ದೆಗಳಿವೆ. ಈ ಹುದ್ದೆಗಳು ಕೇಂದ್ರ ಸರ್ಕಾರದ ಸಚಿವಾಲಯದಲ್ಲಿನ ನಾನ್‌ ಟೆಕ್ನಿಕಲ್ ಗ್ರೂಪ್ ಸಿ ಹುದ್ದೆಗಳಾಗಿವೆ. ಇದರಲ್ಲಿ ಕರ್ನಾಟಕ ಕೇರಳ ಸರ್ಕಲ್‌ನ 68 ಹುದ್ದೆಗಳೂ ಕೂಡ ಸೇರಿವೆ.

ಕೇಂದ್ರದ ಹಣಕಾಸು ಮಂತ್ರಾಲಯದ ಅಡಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆಯ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC) ಹಾಗೂ ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್ (CBN) ನಲ್ಲಿ ಖಾಲಿ ಇರುವ 360 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಕರ್ನಾಟಕ–ಕೇರಳ ಸರ್ಕಲ್‌ನ 5 ಹುದ್ದೆಗಳೂ ಸೇರಿವೆ.

ಅರ್ಜಿ ಸಲ್ಲಿಸಲು ಜುಲೈ 21 ಕಡೆಯ ದಿನವಾಗಿದೆ. ಅರ್ಜಿ ಶುಲ್ಕ ₹100 ಇರಲಿದೆ. ಈ ಹುದ್ದೆಗಳಿಗೆ ಸೆಪ್ಟೆಂಬರ್‌ನಲ್ಲಿ ಕಂಪ್ಯೂಟರ್ ಆಧರಿತ ಪರೀಕ್ಷೆ ನಡೆಯಲಿವೆ.

ನಾನ್‌ ಟೆಕ್ನಿಕಲ್ ಮಲ್ಟಿ ಟಾಸ್ಕಿಂಗ್, ಹವಾಲ್ದಾರ್ ಹುದ್ದೆಗಳಿಗೆ ದೈಹಿಕ ಸಾಮರ್ಥ್ಯ, ಕೌಶಲ ಪರೀಕ್ಷೆಗಳು ಇರಲಿವೆ.

ಶೈಕ್ಷಣಿಕ ಅರ್ಹತೆ, ವಯೋಮಿತಿ ಹೆಚ್ಚಿನ ಮಾಹಿತಿಗೆ ಆಸಕ್ತರು SSC ಅಧಿಕೃತ ವೆಬ್‌ಸೈಟ್ https://ssc.nic.in/ ವೀಕ್ಷಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT