ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನದ ಆಡಳಿತಾತ್ಮಕ ಹುದ್ದೆಗಳಿಗೆ ಒಟ್ಟಿಗೆ ಆಯ್ಕೆಯಾದ ಮೂವರು ಸಹೋದರಿಯರು

ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದ ಆಡಳಿತಾತ್ಮಕ ಸೇವೆ(ಆರ್‌ಎಎಸ್‌) ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಮೂವರು ಸಹೋದರಿಯರು ಒಟ್ಟಿಗೆ ಉತ್ತೀರ್ಣರಾಗಿರುವುದು ಪ್ರಶಂಸೆಗೆ ಕಾರಣವಾಗಿದೆ.

ರಾಜಸ್ಥಾನದ ಹನುಮಾನ್‌ಗಢದಲ್ಲಿ ಕೃಷಿಕರಾಗಿರುವ ಸಹದೇವ್‌ ಸಹರನ್‌ ಅವರ ಮೂವರು ಮಕ್ಕಳಾದ ಅನ್ಶು, ರೀತು ಹಾಗೂ ಸುಮನ್ ಅವರು ಆರ್‌ಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಹದೇವ್‌ ಸಹರನ್‌ ಅವರ ಇನ್ನಿಬ್ಬರು ಹೆಣ್ಣುಮಕ್ಕಳು ಈಗಾಗಲೇ ಆರ್‌ಎಎಸ್‌ ಹುದ್ದೆಗಳಲ್ಲಿದ್ದಾರೆ. ಈಗ ಉಳಿದ ಮೂವರು ಆಯ್ಕೆಯಾಗುವ ಮೂಲಕ ಐವರು ಸಹೋದರಿಯರು ಆರ್‌ಎಎಸ್‌ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಂತಾಗಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಸಹರನ್‌ ಸಹೋದರಿಯರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

'ಇದು ಒಳ್ಳೆಯ ಸುದ್ದಿ. ಅನ್ಶು, ರೀತು ಮತ್ತು ಸುಮನ್ ರಾಜಸ್ಥಾನದ ಹನುಮನ್‌ಗಢದ ಮೂವರು ಸಹೋದರಿಯರು. ಈ ಮೂವರೂ ಒಟ್ಟಾಗಿ ಆರ್‌ಎಎಸ್‌ಗೆ ಆಯ್ಕೆಯಾಗಿದ್ದಾರೆ. ಇವರು ತಮ್ಮ ತಂದೆ ಮತ್ತು ಕುಟುಂಬವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ' ಎಂದು ಕಸ್ವಾನ್‌ ತಿಳಿಸಿದ್ದಾರೆ.

'ಇವರು ಐವರು ಸಹೋದರಿಯರು. ರೋಮಾ ಮತ್ತು ಮಂಜು ಈಗಾಗಲೇ ಆಎಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃಷಿಕರಾಗಿರುವ ಸಹದೇವ್ ಸಹರನ್ ಅವರ ಎಲ್ಲಾ ಐದು ಹೆಣ್ಣುಮಕ್ಕಳು ಈಗ ಆರ್‌ಎಎಸ್‌ ಅಧಿಕಾರಿಗಳಾಗಿ ಆಯ್ಕೆಯಾದಂತಾಗಿದೆ' ಎಂದು ಕಸ್ವಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT