ಪರಮಾಣು ಹೊಣೆಗಾರಿಕೆ ಕಾನೂನುಗಳಿಗೆ ತಿದ್ದುಪಡಿ

ಭಾರತ ಸರ್ಕಾರವು 2010 ರ ಪರಮಾಣು ಹಾನಿಗಳಿಗೆ ನಾಗರಿಕ ಹೊಣೆಗಾರಿಕೆ ಕಾಯ್ದೆ (CLNDA) ಮತ್ತು 1962 ರ ಪರಮಾಣು ಶಕ್ತಿ ಕಾಯ್ದೆಗೆ ತಿದ್ದುಪಡಿಗಳನ್ನು ಘೋಷಿಸಿದೆ.

ಈ ತಿದ್ದುಪಡಿಗಳು ವಿದೇಶಿ ಪರಮಾಣು ಹೂಡಿಕೆಗಳನ್ನು, ವಿಶೇಷವಾಗಿ 15 ವರ್ಷಗಳಿಗೂ ಹೆಚ್ಚು ಕಾಲ ಕಾನೂನು ಅಡೆತಡೆ ಎದುರಿಸುತ್ತಿರುವ ಅಮೆರಿಕನ್ ಮತ್ತು ಫ್ರೆಂಚ್ ಕಂಪನಿಗಳಿಂದ ಸುಗಮಗೊಳಿಸುವ ಗುರಿ ಹೊಂದಿವೆ.

ಈ ತಿದ್ದುಪಡಿಗಳು ಜೈತಾಪುರದಲ್ಲಿ ಆರು ರಿಯಾಕ್ಟರ್ಗಳನ್ನು ನಿರ್ಮಿಸಲು ಎಲೆಕ್ಟ್ರಿಸಿಟ್ ಡಿ ಫ್ರಾನ್ಸ್ನ (EDF) ಒಪ್ಪಂದ ಮತ್ತು ಕೊವ್ವಾಡದಲ್ಲಿ ಆರು ರಿಯಾಕ್ಟರ್ಗಳಿಗಾಗಿ ವೆಸ್ಟಿಂಗ್ಹೌಸ್ ಎಲೆಕ್ಟ್ರಿಕ್ ಕಂಪನಿಯ (WEC) ಯೋಜನೆಗಳಂತಹ ಸ್ಥಗಿತ ಯೋಜನೆಗಳನ್ನು ಪುನರುಜ್ಜೀವನಗೊಳಿಸಲು ಅನುವು ಮಾಡಿಕೊಡುತ್ತವೆ.

ನಾಗರಿಕ ಪರಮಾಣು ಹೊಣೆಗಾರಿಕೆಯ ಬಗ್ಗೆಯೂ ಈ ತಿದ್ದುಪಡಿಗಳು ಪ್ರಸ್ತಾಪಿಸಿವೆ. ಪರಮಾಣು ಅವಘಡಗಳ ಸಂತ್ರಸ್ತರಿಗೆ ಪರಿಹಾರವನ್ನು ಖಚಿತಪಡಿಸುವುದು ಮತ್ತು ಹಾನಿಗೆ ಜವಾಬ್ದಾರ ಆದವರನ್ನು ಗುರುತಿಸುವುದು, ಕನಿಷ್ಠ ಪರಿಹಾರ ಮೊತ್ತವನ್ನು ಖಚಿತಪಡಿಸುವ ನಿಯಮಾವಳಿಗಳು ಈ ಕಾಯ್ದೆಯಲ್ಲಿ ಅಡಕವಾಗಿವೆ.

ಪರಮಾಣು ಸ್ಥಾವರ ನಿರ್ವಾಹಕರು ಕಟ್ಟುನಿಟ್ಟಾಗಿ ಹಾನಿಗೆ ಹೊಣೆಗಾರರು, ಅವರು ತಪ್ಪಿಲ್ಲದಿದ್ದರೂ ಪರಿಹಾರ ಪಾವತಿಸಬೇಕು. ನಿರ್ವಾಹಕರಿಗೆ ಪರಿಹಾರ ಮಿತಿ ₹1,500 ಕೋಟಿ ಆಗಿದ್ದು, ಇದನ್ನು ವಿಮೆ ಅಥವಾ ಇತರ ಆರ್ಥಿಕ ಭದ್ರತೆಯ ಮೂಲಕ ಭರಿಸಬೇಕು.

ಪರಿಹಾರದ ಪಾವತಿಗಳು ₹1,500 ಕೋಟಿ ಮೀರಿದರೆ, ಸರ್ಕಾರ ಮಧ್ಯಪ್ರವೇಶಿಸಿ ಹೆಚ್ಚುವರಿ 300 ಮಿಲಿಯನ್ ಹಣ ಪಾವತಿಸಬೇಕು.

ಭಾರತದಲ್ಲಿ ಪ್ರಸ್ತುತ ಪರಮಾಣು ಶಕ್ತಿ ಸ್ಥಿತಿ

ಭಾರತದ ಪ್ರಸ್ತುತ ಪರಮಾಣು ವಿದ್ಯುತ್ ಸಾಮರ್ಥ್ಯ 6,780 MV ಆಗಿದ್ದು, ಇದನ್ನು 22 ರಿಯಾಕ್ಟರ್ಗಳಿಂದ ಪಡೆಯಲಾಗುತ್ತಿದೆ.

ಪ್ರಸ್ತುತ ಭಾರತದಲ್ಲಿ ಬಳಸುತ್ತಿರುವ ಏಕೈಕ ವಿದೇಶಿ ಆಪರೇಟರ್ ರಷ್ಯಾದ ರೊಸಾಟಮ್ ಆಗಿದೆ.

2033 ರ ವೇಳೆಗೆ ಐದು SMR ಗಳನ್ನು ಅಭಿವೃದ್ಧಿಪಡಿಸಲು ₹20,000 ಕೋಟಿ ಹೂಡಿಕೆಯೊಂದಿಗೆ, 2047 ರ ವೇಳೆಗೆ ಕನಿಷ್ಠ 100 GV ಪರಮಾಣು ಶಕ್ತಿ ಪಡೆಯುವ ಗುರಿ ಸರ್ಕಾರಕ್ಕಿದೆ.

ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ನೀತಿ ಆಯೋಗ ವರದಿ

ಇತ್ತೀಚೆಗೆ, ನೀತಿ ಆಯೋಗ ‘ರಾಜ್ಯಗಳು ಮತ್ತು ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳ ಮೂಲಕ ಗುಣಮಟ್ಟದ ಉನ್ನತ ಶಿಕ್ಷಣವನ್ನು ವಿಸ್ತರಿಸುವುದು’ ಎಂಬ ಶೀರ್ಷಿಕೆಯ ವರದಿ ಬಿಡುಗಡೆ ಮಾಡಿದೆ.

ಈ ವರದಿಯು ಭಾರತದ ಶೇ 80 ರಷ್ಟು ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳ (SPU) ಗುಣಮಟ್ಟದ ಮೇಲೆ ಕೇಂದ್ರೀಕರಿಸುತ್ತದೆ.

ಇದು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರೊಂದಿಗೆ ಹೊಂದಿಕೆ ಆಗುತ್ತದೆ ಮತ್ತು 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಜಮ್ಮು ಮತ್ತು ಕಾಶ್ಮೀರ ಶಿಕ್ಷಣ ವೆಚ್ಚದಲ್ಲಿ ಮುಂಚೂಣಿಯಲ್ಲಿದೆ. ದೆಹಲಿ ಮತ್ತು ತೆಲಂಗಾಣ ರಾಜ್ಯಗಳು ಕಡಿಮೆ ಹಂಚಿಕೆ ಮಾಡಿವೆ. ರಾಜ್ಯಗಳಾಲ್ಲಿ ನಿಧಿಯ ಅಸಮಾನತೆ ಆತಂಕಕಾರಿ ಆಗಿದೆ. ಕೆಲ ರಾಜ್ಯಗಳು ಉನ್ನತ ಶಿಕ್ಷಣ ವೆಚ್ಚದಲ್ಲಿ ನಕಾರಾತ್ಮಕ ಬೆಳವಣಿಗೆ ದರ ದಾಖಲಿಸಿವೆ.

ಉನ್ನತ ಶಿಕ್ಷಣದ ಮೇಲಿನ ಒಟ್ಟು ಖರ್ಚು ಜಿಡಿಪಿಯ ಕೇವಲ ಶೇ 0.62 ರಷ್ಟಿದೆ ಎಂದು ವರದಿ ಬಹಿರಂಗಪಡಿಸಿದೆ. ಮೂಲಸೌಕರ್ಯ ಅಭಿವೃದ್ಧಿ ಬೆಂಬಲಿಸಲು ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಈ ಹಂಚಿಕೆ ಹೆಚ್ಚಿಸುವ ಅಗತ್ಯವಿದೆ ಎಂದು ಅದು ಒತ್ತಿಹೇಳಿದೆ. ಉನ್ನತ ಶಿಕ್ಷಣ ನಿಧಿಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ, ಆದರೆ ಕೆಲ ಸಣ್ಣ ರಾಜ್ಯಗಳು ಹಿಂದುಳಿದಿವೆ ಎಂದು ವರದಿ ಉಲ್ಲೇಖಿಸಿದೆ.

ದಾಖಲಾತಿ ದರಗಳಲ್ಲಿ ಲಿಂಗ ಅಸಮಾನತೆಗಳನ್ನು ವರದಿ ಗುರುತಿಸಿದೆ. ಕೇರಳ ಪುರುಷರಿಗಿಂತ ಹೆಚ್ಚಿನ ಮಹಿಳಾ ದಾಖಲಾತಿ ದರವನ್ನು ಹೊಂದಿದೆ. ಭೌಗೋಳಿಕವಾಗಿ ಸಣ್ಣ ರಾಜ್ಯಗಳು ಹೆಚ್ಚು ಸಮತೋಲಿತ ದಾಖಲಾತಿ ಅನುಪಾತವನ್ನು ಪ್ರದರ್ಶಿಸಿವೆ.

ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳು: ಜನವರಿ 2025 ರ ಹೊತ್ತಿಗೆ ಭಾರತದಲ್ಲಿ ಒಟ್ಟು 495 ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳು (SPU: State Public Universities) ಗಳು ಅಸ್ತಿತ್ವದಲ್ಲಿ ಇವೆ. ಅವುಗಳಲ್ಲಿ ಕರ್ನಾಟಕ ಅತಿ ಹೆಚ್ಚು (43), ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ (ತಲಾ 38) ಸಾರ್ವಜನಿಕ ವಿವಿ ಹೊಂದಿವೆ.

ಕಳೆದ 14 ವರ್ಷಗಳಲ್ಲಿ, SPU ಗಳ ಸಂಖ್ಯೆ ಶೇ 50 ರಷ್ಟು ಹೆಚ್ಚಾಗಿದೆ ಮತ್ತು ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಶೇ 38 ರಷ್ಟು ಹೆಚ್ಚಾಗಿದ್ದು, ಒಟ್ಟು 3.24 ಕೋಟಿ ವಿದ್ಯಾರ್ಥಿಗಳನ್ನು ತಲುಪಿದೆ.

ಈ ನಿಟ್ಟಿನಲ್ಲಿ ವರದಿಯು ಶಿಕ್ಷಣ ಹಾಗೂ ಸಂಶೋಧನಾ ಗುಣಮಟ್ಟ, ಹಣಕಾಸು, ಆಡಳಿತ ಹಾಗೂ ಉದ್ಯೋಗಾರ್ಹತೆ ಈ ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ 80 ನೀತಿ ಶಿಫಾರಸುಗಳನ್ನು ಸೂಚಿಸಿದೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ:

ಶಿಕ್ಷಣ ಹಾಗೂ ಸಂಶೋಧನಾ ಗುಣಮಟ್ಟದ ಸುಧಾರಣೆ: ಸಂಶೋಧನಾ ಗುಣಮಟ್ಟವನ್ನು ಸುಧಾರಿಸಲು ರಾಷ್ಟ್ರೀಯ ಸಂಶೋಧನಾ ನೀತಿಯನ್ನು ಪರಿಚಯಿಸುವುದು.

ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಶ್ರೇಷ್ಠತಾ ಕೇಂದ್ರಗಳನ್ನು ರಚಿಸುವುದು. ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನಾ ವಿಶ್ವವಿದ್ಯಾಲಯಗಳನ್ನು (MERU) ಸ್ಥಾಪಿಸುವುದು.

ಮಾನವಿಕ ಸಂಶೋಧನೆ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುವುದು. ಬೋಧನಾ ವಿಧಾನಗಳು ಮತ್ತು ಡಿಜಿಟಲ್ ಕಲಿಕಾ ವೇದಿಕೆಗಳನ್ನು ಸುಧಾರಿಸುವುದು.

ಜಾಗತಿಕ ಮಾನ್ಯತೆಗಾಗಿ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಪಾಲುದಾರಿಕೆ ಹೊಂದುವುದು.

ಹಣಕಾಸು ಸುಧಾರಣೆ: SPU ಗಳಿಗೆ ಆರ್ಥಿಕ ಸ್ವಾಯತ್ತತೆಯನ್ನು ಹೆಚ್ಚಿಸುವುದು. ರಾಜ್ಯ ಮಟ್ಟದ ಮೂಲಸೌಕರ್ಯ ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸುವುದು.

ಹೆಚ್ಚಿನ ಹಣವನ್ನು ಆಕರ್ಷಿಸಲು SPU ಗಳಿಗೆ ತೆರಿಗೆ ವಿನಾಯಿತಿಗಳನ್ನು ಅನುಮತಿಸುವುದು. ಮೂಲಸೌಕರ್ಯವನ್ನು ಸುಧಾರಿಸಲು CSR ಕೊಡುಗೆಗಳನ್ನು ಬಳಸಿಕೊಳ್ಳುವುದು.

SPU ಗಳಿಗೆ ಒದಗಿಸುವ ವಿದ್ಯುತ್ ಮತ್ತು ನೀರಿನ ದರಗಳನ್ನು ಕಡಿಮೆ ಮಾಡುವುದು.

ಆಡಳಿತ ಸುಧಾರಣೆಗಳು: 2047 ಕ್ಕೆ ರಾಜ್ಯಮಟ್ಟದ ಉನ್ನತ ಶಿಕ್ಷಣ ಮುನ್ನೋಟವನ್ನು ರೂಪಿಸುವುದು.

ಯುಜಿಸಿಯಂತೆ ಕಾರ್ಯನಿರ್ವಹಿಸಲು ರಾಜ್ಯ ಉನ್ನತ ಶಿಕ್ಷಣ ಮಂಡಳಿಗಳನ್ನು ಬಲಪಡಿಸುವುದು.

ನಿರ್ಧಾರ ತೆಗೆದುಕೊಳ್ಳುವಲ್ಲಿ SPU ಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದು. ಉತ್ತಮ ಬೋಧನಾ ಗುಣಮಟ್ಟಕ್ಕಾಗಿ ಅಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ಸುಧಾರಿಸುವುದು.

ಉದ್ಯೋಗಾರ್ಹತೆ ಸುಧಾರಣೆ: ವಿಶ್ವವಿದ್ಯಾಲಯ–ಉದ್ಯಮ ಪಾಲುದಾರಿಕೆಯನ್ನು ಬಲಪಡಿಸುವುದು.

ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಮತ್ತು ಅಪ್ರೆಂಟಿಸ್ಶಿಪ್ಗಳನ್ನು ಹೆಚ್ಚಿಸುವುದು.

ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಉದ್ಯಮಶೀಲತಾ ಕಾರ್ಯಕ್ರಮಗಳನ್ನು ಉತ್ತೇಜಿಸುವುದು. ಕೌಶಲ ಅಭಿವೃದ್ಧಿ ಮತ್ತು ನೈಜ ಜಗತ್ತಿನ ಅನ್ವಯಿಕೆಗಳತ್ತ ಗಮನಹರಿಸುವುದು. ಚಿಪ್ಸೆಟ್ಗಳು, ಚಿಪ್ಸೆಟ್ಗಳು ಮತ್ತು ಸಿಸ್ಟಮ್ ಆನ್ ಚಿಪ್ಸ್ (SoC ಗಳು) ಉತ್ಪಾದನೆಗೂ ಆರ್ಥಿಕ ಬೆಂಬಲವನ್ನು ಒದಗಿಸಲಾಗುತ್ತಿದೆ.

‘ಇಂಡಿಯಾ–AI’ ಮಿಷನ್ ಅಡಿ 10,000 GPU ಸಂಗ್ರಹ ಆರಂಭ

ಇತ್ತೀಚೆಗೆ, ಭಾರತ ಸರ್ಕಾರ ಇಂಡಿಯಾ–AI ಮಿಷನ್ ಅಡಿಯಲ್ಲಿ 10,000 ಗ್ರಾಫಿಕ್ಸ್ ಸಂಸ್ಕರಣಾ ಘಟಕಗಳ (GPU) ಖರೀದಿಗೆ ಬಿಡ್ಡಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿತು.

ಈ ಮಿಷನ್ನಡಿ, ದೇಶದಲ್ಲಿ ಕೃತಕ ಬುದ್ಧಿಮತ್ತೆ ಅಭಿವೃದ್ಧಿ ಹಾಗೂ ಬಳಕೆಯನ್ನು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಮುಂಬರುವ 5 ವರ್ಷಗಳಲ್ಲಿ ₹10,372 ಕೋಟಿ ಬಜೆಟ್ ವ್ಯಯಿಸಲು ಯೋಜಿಸಿದೆ.

ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು AI ಪರಿಸರ ವ್ಯವಸ್ಥೆಯನ್ನು ರಚಿಸುವಲ್ಲಿ ವಿವಿಧ ಪಾಲುದಾರ ರನ್ನು ಬೆಂಬಲಿಸಲು GPU ಸಂಗ್ರಹಣೆ ನಿರ್ಣಾಯಕ ಹೆಜ್ಜೆಯಾಗಿದೆ.

ಖರೀದಿ ಪ್ರಕ್ರಿಯೆಯಲ್ಲಿ ಜಿಯೋ ಪ್ಲಾಟ್ಫಾರ್ಮ್ಗಳು ಮತ್ತು ಟಾಟಾ ಕಮ್ಯುನಿಕೇಷನ್ಸ್ ಸೇರಿದಂತೆ ಹತ್ತು ಆಯ್ದ ಕಂಪನಿಗಳು GPUಗಳ ಪೂರೈಕೆಗಾಗಿ ಆಸಕ್ತಿ ವ್ಯಕ್ತಪಡಿಸಿವೆ.

ಮಿಷನ್ನ ಸುಮಾರು ಶೇ 44 ರಷ್ಟು (₹4,563.36 ಕೋಟಿ) ಹಣವನ್ನು GPU ಸಂಗ್ರಹಣೆಗೆ ಈಗಾಗಲೇ ಹಂಚಿಕೆ ಮಾಡಲಾಗಿದೆ.

AI ಮಾದರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು GPU ಗಳು ಅಗತ್ಯ. ಅವು ಏಕಕಾಲದಲ್ಲಿ ಅಪಾರ ಪ್ರಮಾಣದ ಡೇಟಾ ಪ್ರಕ್ರಿಯೆಗೊಳಿಸಬಲ್ಲವು, ಸಾಂಪ್ರದಾಯಿಕ CPU ಗಳಿಗಿಂತ ಅವುಗಳ ವೇಗ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿರುತ್ತದೆ.

GPU ಗಳಿಗೆ ತಾಗುವ ಹೆಚ್ಚಿನ ವೆಚ್ಚ, ಸೀಮಿತ ಲಭ್ಯತೆ ಮತ್ತು ಕೌಶಲಪೂರ್ಣ AI ವೃತ್ತಿಪರರ ಕೊರತೆ ಈ ಯೋಜನೆಯ ಪ್ರಗತಿಗೆ ಅಡ್ಡಿಯಾಗಬಹುದು. ಇದಲ್ಲದೆ, ಭಾರತದಲ್ಲಿ ಕಂಪ್ಯೂಟಿಂಗ್ ಮೂಲಸೌಕರ್ಯವು ಕಡಿಮೆ ಪ್ರಮಾಣದಲ್ಲಿದ್ದು, ಜಾಗತಿಕ ಸಾಮರ್ಥ್ಯದ ಶೇ 2 ಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ.

ಭಾರತದಲ್ಲಿ AI ನ ಪ್ರಸ್ತುತ ಸ್ಥಿತಿ: ಭಾರತದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ AI ಅಳವಡಿಕೆ ಹೆಚ್ಚುತ್ತಿದೆ. ಡಿಜಿಟಲ್ ಇಂಡಿಯಾ ಮತ್ತು ರಾಷ್ಟ್ರೀಯ AI ಉಪಕ್ರಮಗಳು ಈ ಪ್ರವೃತ್ತಿಯನ್ನು ಮುನ್ನಡೆಸುತ್ತಿವೆ. ಬೆಂಗಳೂರು ಮತ್ತು ಹೈದರಾಬಾದ್ನಂಥ ಪ್ರಮುಖ ನಗರಗಳು AI ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ, ಇವುಗಳಿಗೆ ಸಂಶೋಧನಾ ಸಂಸ್ಥೆಗಳು ಮತ್ತು ನವೋದ್ಯಮಗಳು ಬೆಂಬಲ ನೀಡುತ್ತಿವೆ.

‘ಇಂಡಿಯಾ–AI ಮಿಷನ್’ ಉನ್ನತ ಮಟ್ಟದ AI ಕಂಪ್ಯೂಟಿಂಗ್ ಪರಿಸರ ವ್ಯವಸ್ಥೆಯನ್ನು ರಚಿಸುವ ನಿಟ್ಟಿನಲ್ಲಿ ಇಂಡಿಯಾ–AI ಇನ್ನೋವೇಶನ್ ಸೆಂಟರ್ ಮತ್ತು ಡೇಟಾಸೆಟ್ಗಳ ವೇದಿಕೆಯ ಸ್ಥಾಪನೆ, AI ಶಿಕ್ಷಣವನ್ನು ಉತ್ತೇಜಿಸುವುದು ಮತ್ತು ನವೋದ್ಯಮಗಳಿಗೆ ಹಣಕಾಸು ನೆರವು ಒದಗಿಸುವುದು, ನೈತಿಕ AI ಅಭ್ಯಾಸಗಳನ್ನು ಖಚಿತಪಡಿಸಿಕೊಳ್ಳುವುದು ಮತ್ತು ಪರಿಸರ ಕಾಳಜಿಗಳನ್ನು ಅಳವಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

‘ಡಿಜಿಟಲ್ ಆರ್ಥಿಕತೆ’ ವರದಿ

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ‘ಭಾರತದ ಡಿಜಿಟಲ್ ಆರ್ಥಿಕತೆಯ ಅಂದಾಜು ಮತ್ತು ಮಾಪನ’ ಎಂಬ ಪ್ರಮುಖ ವರದಿಯನ್ನು ಬಿಡುಗಡೆ ಮಾಡಿದೆ.

ಭವಿಷ್ಯದ ಬೆಳವಣಿಗೆಗೆ ಕಾರ್ಯತಂತ್ರ ರೂಪಿಸುವಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವಲಯದ ನೀತಿ ನಿರೂಪಕರು ಹಾಗೂ ಉದ್ಯಮಿಗಳಿಗೆ ಈ ವರದಿಯು ನಿರ್ಣಾಯಕವಾಗಿದೆ.

ಡಿಜಿಟಲ್ ಆರ್ಥಿಕತೆ ಡಿಜಿಟಲ್ ತಂತ್ರಜ್ಞಾನ ಬಳಸುವ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಒಳಗೊಳ್ಳುತ್ತದೆ. ಡಿಜಿಟಲ್ ವಲಯದ ಕೈಗಾರಿಕೆಗಳು ಮಾತ್ರವಲ್ಲದೇ, ಬ್ಯಾಂಕಿಂಗ್, ಶಿಕ್ಷಣ, ವ್ಯಾಪಾರದಂಥ ಸಾಂಪ್ರದಾಯಿಕ ವಲಯಗಳ ಪಾಲನ್ನು ಇದು ಒಳಗೊಂಡಿದೆ.

ವರದಿಯ ಪ್ರಕಾರ, ಇತ್ತೀಚಿನ ಅಂದಾಜುಗಳು ಮತ್ತು ಸಂಶೋಧನೆಗಳನ್ವಯ ಭಾರತದ ಡಿಜಿಟಲ್ ಆರ್ಥಿಕತೆಯು 2022–23ರಲ್ಲಿ ರಾಷ್ಟ್ರೀಯ ಆದಾಯದ ಸರಿಸುಮಾರು ಶೇ 11.74 ರಷ್ಟಿದ್ದು, ಇದು ₹ 31.64 ಲಕ್ಷ ಕೋಟಿಗೆ ಸಮನಾಗಿದೆ.

ಈ ಅಂಕಿ ಅಂಶಗಳನ್ವಯ ಭಾರತ ಡಿಜಿಟಲ್ ಆರ್ಥಿಕತೆಯಲ್ಲಿ, OECD ಚೌಕಟ್ಟು ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB) ಶಿಫಾರಸು ಮಾಡಿದ ಇನ್ಪುಟ್–ಔಟ್ಪುಟ್ ವಿಧಾನಗಳನ್ನು ಬಳಸಿಕೊಳ್ಳುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿದೆ.

ICT ಸೇವೆಗಳು ಮತ್ತು ದೂರಸಂಪರ್ಕ ವಲಯಗಳನ್ನು ಒಳಗೊಂಡಿರುವ ಡಿಜಿಟಲ್ ಕೈಗಾರಿಕೆಗಳು ದೇಶದ ಮಾರುಕಟ್ಟೆಯ ಒಟ್ಟು ಮೌಲ್ಯವರ್ಧನೆಗೆ (GVA: Gross Value Added) ಸುಮಾರು ಶೇ 2 ರಷ್ಟು ಕೊಡುಗೆ ನೀಡುತ್ತವೆ. ಹೆಚ್ಚುವರಿಯಾಗಿ, ಬ್ಯಾಂಕಿಂಗ್ ಮತ್ತು ಶಿಕ್ಷಣದಂಥ ಸಾಂಪ್ರದಾಯಿಕ ವಲಯಗಳಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆಯಿಂದಲೂ ಶೇ 2 ರಷ್ಟು ದೇಶದ ಮಾರುಕಟ್ಟೆಯ ಮೌಲ್ಯವರ್ಧನೆ ಉಂಟಾಗುತ್ತದೆ.

2022–23ರಲ್ಲಿ ಡಿಜಿಟಲ್ ಆರ್ಥಿಕತೆ ವಲಯವು ಸುಮಾರು 14.67 ಮಿಲಿಯನ್ ಕಾರ್ಮಿಕರಿಗೆ ಉದ್ಯೋಗ ಒದಗಿಸಿದ್ದು, ಇದು ಭಾರತದ ಒಟ್ಟು ಉದ್ಯೋಗಿಗಳ ಪೈಕಿ ಶೇ 2.55 ಪಾಲನ್ನು ಒಳಗೊಂಡಿದೆ.

ಭಾರತದ ಡಿಜಿಟಲ್ ಆರ್ಥಿಕತೆ ಒಟ್ಟಾರೆ ಆರ್ಥಿಕತೆಗಿಂತ 2 ಪಟ್ಟು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ ಎಂದು ಮುನ್ಸೂಚನೆಗಳು ಸೂಚಿಸಿವೆ, ವಿವಿಧ ವಲಯಗಳಲ್ಲಿ ಹೆಚ್ಚಲಿರುವ ಡಿಜಿಟಲೀಕರಣ ದಿಂದ ಇದು 2030 ರ ವೇಳೆಗೆ ರಾಷ್ಟ್ರೀಯ ಆದಾಯದ 5ನೇ ಒಂದು ಭಾಗದಷ್ಟಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

2 ಮತ್ತು 3ನೇ ಹಂತದ ನಗರಗಳ ಉತ್ಪಾದನೆ ಶಕ್ತಿ ಹೆಚ್ಚಳಕ್ಕೆ ಕ್ರಮ

ಕೇಂದ್ರ ಸರ್ಕಾರ ಶ್ರೇಣಿ 2 ಮತ್ತು 3 ನಗರಗಳ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯಡಿ (DPIIT: Department for Promotion of Industry and Internal Trade) ಉಪಕ್ರಮವನ್ನು ಆರಂಭಿಸಿದ್ದು, ಜೂನ್ 2026 ರೊಳಗೆ ಆರಂಭಿಕವಾಗಿ 100 ಆಯ್ದ ನಗರಗಳಿಗೆ ‘ನಗರ ಮಟ್ಟದ ಆರ್ಥಿಕ ದೃಷ್ಟಿಕೋನ’ ಅಭಿವೃದ್ಧಿಪಡಿಸುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿದೆ.

ಈ ಯೋಜನೆಯಡಿ 1,039 ಪಟ್ಟಣಗಳ ಉತ್ಪಾದನಾ ಸಾಮರ್ಥ್ಯ ಹಾಗೂ ಆರ್ಥಿಕ ಬಲವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.

ಭಾರತದ ಆರ್ಥಿಕ ಬೆಳವಣಿಗೆಗೆ ಟೈಯರ್ 2 ಮತ್ತು ಟೈಯರ್ 3 ನಗರಗಳು ಅತ್ಯಗತ್ಯವಾಗಿವೆ. ಈ ನಗರಗಳಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಹೆಚ್ಚಿಸುವ ಮೂಲಕ ಬಲವಾದ ಉತ್ಪಾದನಾ ಪರಿಸರ ವ್ಯವಸ್ಥೆ ಸೃಷ್ಟಿಸಲು ಸರ್ಕಾರ ಯೋಜನೆ ರೂಪಿಸಿದೆ.

ಕಡಿಮೆ ರಾಜ್ಯ ಆಂತರಿಕ ಉತ್ಪನ್ನ (GSDP: Gross State Domestic Product) ಹೊಂದಿರುವ ರಾಜ್ಯಗಳ ಆರ್ಥಿಕ ಬಲವರ್ಧನೆಗೂ ಈ ಯೋಜನೆ ನೆರವಾಗಲಿದೆ.

ಈ ಯೋಜನೆಯಡಿ ಡಿಸೆಂಬರ್ 2025 ರ ವೇಳೆಗೆ 100 ಪ್ಲಗ್–ಅಂಡ್–ಪ್ಲೇ ಪಾರ್ಕ್ಗಳು, ಜೂನ್ 2026 ರೊಳಗೆ ರಾಜ್ಯ ಲಾಜಿಸ್ಟಿಕ್ಸ್ ಕ್ರಿಯಾ ಯೋಜನೆ ಅನುಷ್ಠಾನಕ್ಕೆ ತರುವ ಗುರಿ ಹೊಂದಲಾಗಿದೆ.

ಡಿಸೆಂಬರ್ 2029 ರ ವೇಳೆಗೆ ಕೌಶಲ ಅಂತರದ ಅಧ್ಯಯನಗಳನ್ನು ನಡೆಸುವುದು ಮತ್ತು 100 ಹೊಸ ಸ್ಟಾರ್ಟ್–ಅಪ್ ಇನ್ಕ್ಯುಬೇಷನ್ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.

ಜೂನ್ 2026 ರೊಳಗೆ ನಗರ ಮಟ್ಟದ ಆರ್ಥಿಕ ದೃಷ್ಟಿ ಮತ್ತು ರಾಜ್ಯ ಲಾಜಿಸ್ಟಿಕ್ಸ್ ಕ್ರಿಯಾ ಯೋಜನೆಯನ್ನು ಸಲ್ಲಿಸುವ ಹಾಗೂ ಡಿಸೆಂಬರ್ 2026ರ ಒಳಗೆ 25 ನಗರಗಳಿಗೆ ನಗರ ಲಾಜಿಸ್ಟಿಕ್ಸ್ ಯೋಜನೆಗಳ ರಚಿಸುವ ಗುರಿಯನ್ನು ರಾಜ್ಯಗಳಿಗೆ ನಿಗದಿಪಡಿಸಲಾಗಿದೆ.

2047 ರ ವೇಳೆಗೆ ಉದ್ಯೋಗದಲ್ಲಿ ಉತ್ಪಾದನಾ ಕ್ಷೇತ್ರದ ಪಾಲನ್ನು ಶೇ 12 ರಿಂದ ಶೇ 22ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಗುರಿಯು ಉತ್ಪಾದನೆಯನ್ನು ಶ್ರೇಣಿ 2 ಮತ್ತು 3 ನಗರಗಳಿಗೆ ವಿಸ್ತರಿಸುವ ಮೂಲಕ, ಹೆಚ್ಚಿನ ಪ್ರಮಾಣದ ಉದ್ಯೋಗ ಸೃಷ್ಟಿಯನ್ನು ನಿರೀಕ್ಷಿಸುತ್ತದೆ.

ಒಳಚರಂಡಿ ತ್ಯಾಜ್ಯ ಮರುಬಳಕೆ

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಇತ್ತೀಚೆಗೆ ಒಳಚರಂಡಿ ಕೆಸರು ನಿರ್ವಹಣೆ ತುರ್ತು ಸಮಸ್ಯೆಯನ್ನು ಪರಿಹರಿಸಲು ತ್ಯಾಜ್ಯ ನೀರಿ ಪರಿಣಾಮಕಾರಿಯಾಗಿ ವಿಲೇವಾರಿಗಾಗಿ ಯೋಜನೆಯೊಂದನ್ನು ರೂಪಿಸಿದೆ.

ಒಳಚರಂಡಿ ಕೆಸರನ್ನು ನಿರ್ವಹಿಸಲು ಜೈವಿಕ–ಘನವಸ್ತುಗಳ ಗುಣಮಟ್ಟವನ್ನು ಹೆಚ್ಚಿಸುವ ವಿಧಾನವನ್ನು ಅನುಸರಿಸುವ ಮತ್ತು ಕೃಷಿಯಲ್ಲಿ ಅವುಗಳ ಸುರಕ್ಷಿತ ಮರುಬಳಕೆಯನ್ನು ಸುಗಮಗೊಳಿಸುವ ಗುರಿಯನ್ನು ಇಲಾಖೆ ಹೊಂದಿದೆ.

ಭಾರತದ ನಗರ ಕೇಂದ್ರಗಳು ಪ್ರತಿದಿನ ಸುಮಾರು 72,368 ಮಿಲಿಯನ್ ಲೀಟರ್ ತ್ಯಾಜ್ಯ ನೀರನ್ನು ಉತ್ಪಾದಿಸುತ್ತವೆ. ಈ ತ್ಯಾಜ್ಯನೀರಿನಲ್ಲಿ ಕೇವಲ ಶೇ 28ರಷ್ಟು ಮಾತ್ರ ಸಂಸ್ಕರಿಸಲ್ಪಡುತ್ತದೆ.

ಗ್ರಾಮೀಣ ಪ್ರದೇಶಗಳು ದಿನಕ್ಕೆ ಅಂದಾಜು 39,604 ಮಿಲಿಯನ್ ಲೀಟರ್ ತ್ಯಾಜ್ಯ ನೀರನ್ನು ಹೊರಸೂಸುತ್ತವೆ. ಗ್ರಾಮಗಳಲ್ಲಿ ತ್ಯಾಜ್ಯ ನೀರನ್ನು ಸಣಸ್ಕರಿಸುವ ಪ್ರಮಾಣ ಶೇ 1ಕ್ಕಿಂತ ಕಡಿಮೆ ಇದೆ.

ಇದಲ್ಲದೇ, ಭಾರತದಲ್ಲಿ ದಿನನಿತ್ಯ ಸುಮಾರು 1,20,000 ಟನ್ ಮಲ–ಮೂತ್ರದ ಕೆಸರು ಉತ್ಪಾದನೆಯಾಗುತ್ತದೆ.

ಇದು ಪರಿಣಾಮಕಾರಿ ನಿರ್ವಹಣಾ ತಂತ್ರಗಳ ತುರ್ತು ಅಗತ್ಯವನ್ನು ಸೂಚಿಸುತ್ತಿದ್ದು, ಸುರಕ್ಷಿತ ವಿಲೇವಾರಿ ಮತ್ತು ಮರುಬಳಕೆಯ ಪ್ರಾಮುಖ್ಯತೆಯನ್ನು ವಿವರಿಸುತ್ತದೆ.

ಕೊಳಚೆನೀರಿನ ಕೆಸರು ಭಾರ ಲೋಹಗಳು ಮತ್ತು ರೋಗಕಾರಕ ಗಳಂಥ ಹಾನಿಕಾರಕ ವಸ್ತುಗಳನ್ನು ಹೊಂದಿರುತ್ತದೆ. ಇದಲ್ಲದೇ, ಇದು ಸಾರಜನಕ ಮತ್ತು ರಂಜಕದಂಥ ಪೋಷಕಾಂಶಗಳನ್ನು ಸಹ ಹೊಂದಿರುತ್ತದೆ. ಇದರ ಸರಿಯಾದ ಸಂಸ್ಕರಣೆ ಕೆಸರನ್ನು ಕೃಷಿಗೆ ಉಪಯುಕ್ತ ಸಂಪನ್ಮೂಲವಾಗಿ ಪರಿವರ್ತಿಸುತ್ತದೆ. ಇದು ಕೃಷಿಗೆ ಗೊಬ್ಬರ ಅಥವಾ ಮಣ್ಣಿಗೆ ಉತ್ತಮ ಕಂಡಿಷನರ್ ಆಗಿರುತ್ತದೆ.

ಈ ನಿಟ್ಟಿನಲ್ಲಿ ಕೊಳಚೆನೀರಿನ ಸುರಕ್ಷಿತ ವಿಲೇವಾರಿಯನ್ನು ಖಚಿತಪಡಿಸಿಕೊಳ್ಳುವ ಅಭ್ಯಾಸಗಳನ್ನು ಉತ್ತೇಜಿಸುವುದು ಮತ್ತು ಸಂಸ್ಕರಿಸಿದ ಕೆಸರಿನ ಜವಾಬ್ದಾರಿಯುತ ಮರುಬಳಕೆಯನ್ನು ಪ್ರೋತ್ಸಾಹಿಸಬೇಕಿದೆ.

ಕೊಳಚೆನೀರಿನ ಸುರಕ್ಷಿತ ವಿಲೇವಾರಿ ಹಾಗೂ ಮರುಬಳಕೆಯನ್ನು ಅನುಷ್ಠಾನಕ್ಕೆ ತರಲು ಈ ಕೆಳಗಿನ ಸಲಹಾತ್ಮಕ ಅಂಶಗಳನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡಿದೆ.

ಮರುಬಳಕೆಗೆ ಯೋಗ್ಯವಾಗುವಂತೆ ಕೆಸರನ್ನು ಒಣಗಿಸುವುದು, ರೋಗಕಾರಕ ಸೂಕ್ಷ್ಮಜೀವಿಗಳನ್ನು ತೊಡೆದುಹಾಕಲು ಕೆಸರು ನಿರ್ಜಲೀಕರಣ ತಂತ್ರ ಅನುಸರಿಸುವುದು, ಜೈವಿಕ–ಘನವಸ್ತುಗಳ ಗುಣಮಟ್ಟ ಹೆಚ್ಚಿಸಲು ಸೌರ ಹಸಿರುಮನೆ ಡ್ರೈಯರ್ಗಳ ಕಾರ್ಯಾಚರಣೆ ನಡೆಸುವುದು ಈ ಸಲಹೆಗಳಲ್ಲಿ ಮಹತ್ವದ್ದಾಗಿದೆ.

ಕೃಷಿಯಲ್ಲಿ ಕೆಸರನ್ನು ಬಳಸುವಾಗ ನೀರಿನ ಗುಣಮಟ್ಟವನ್ನು ರಕ್ಷಿಸುವುದು, ರೈತರು ಕೊಳಚೆನೀರಿನ ಕೆಸರನ್ನು ಗೊಬ್ಬರವಾಗಿ ಹೇಗೆ ಬಳಸಬಹುದು ಎಂಬುದರ ಕುರಿತು ಮಾರ್ಗಸೂಚಿಗಳನ್ನು ನೀಡುವುದು, ಮಾನವನ ಆರೋಗ್ಯ ಮತ್ತು ಪರಿಸರವನ್ನು ಕಾಪಾಡಲು ಮಣ್ಣು ಮತ್ತು ಕೆಸರಿನಲ್ಲಿರುವ ಭಾರ ಲೋಹಗಳ ಮೇಲೆ ನಿರ್ದೇಶಿತ ಮಿತಿಗಳನ್ನು ವಿಧಿಸುವುದು ಕೂಡ ಸಲಹೆಗಳಲ್ಲಿ ಸೇರಿದೆ.

ಪ್ರಸ್ತುತ ಒಳಚರಂಡಿ ಕೆಸರಿನ ಒಂದು ಭಾಗವನ್ನು ಮಾತ್ರ ಸಂಸ್ಕರಿಸಲಾಗುತ್ತಿದೆ ಮತ್ತು ಮರುಬಳಕೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಅರಿವು ಮತ್ತು ತಾಂತ್ರಿಕ ಬೆಂಬಲದ ಅವಶ್ಯಕತೆ ಇದೆ. ಇದಲ್ಲದೆ, ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ನಿಯಂತ್ರಕ ಮಾನದಂಡಗಳ ಅನುಸರಣೆ ಖಚಿತವಾಗಬೇಕಿದೆ.

ಪರಿಣಾಮಕಾರಿ ಒಳಚರಂಡಿ ಕೆಸರು ನಿರ್ವಹಣೆ ಸಾಧಿಸಲು, ಸರ್ಕಾರಿ ಸಂಸ್ಥೆಗಳು, ಸ್ಥಳೀಯ ಅಧಿಕಾರಿಗಳು, ಸಮುದಾಯಗಳ ನಡುವಿನ ಸಹಯೋಗ ಅತ್ಯಗತ್ಯ. ಸಂಸ್ಕರಿಸಿದ ಒಳಚರಂಡಿ ಕೆಸರಿನ ಮರುಬಳಕೆಯನ್ನು ಹೆಚ್ಚಿಸಲು ಮತ್ತು ಪರಿಸರ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನವೀನ ತಂತ್ರಜ್ಞಾನಗಳು ಮತ್ತು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವುದು ಪ್ರಮುಖವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.