ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎ ಪರೀಕ್ಷಾ ವೇಳಾಪಟ್ಟಿ ಪರಿಷ್ಕರಣೆ

Published 20 ಮಾರ್ಚ್ 2024, 14:21 IST
Last Updated 20 ಮಾರ್ಚ್ 2024, 14:21 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯು (ಐಸಿಎಐ) ತನ್ನ ಪರೀಕ್ಷೆಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾರ್ಟೆಡ್ ಅಕೌಂಟೆಂಟ್‌ (ಸಿಎ) ಪರೀಕ್ಷೆಗಳನ್ನು ಈ ಹಿಂದೆ ನಿರ್ಧರಿಸಿದಂತೆ ಮೇ ತಿಂಗಳಲ್ಲಿನಲ್ಲಿಯೇ ನಡೆಸಲಾಗುವುದು. ಆದರೆ ಕೆಲ ದಿನಾಂಕಗಳನ್ನು ಪರಿಷ್ಕರಿಸಲಾಗಿದೆ ಎಂದು ಐಸಿಎಐ ತಿಳಿಸಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಗ್ರೂಪ್‌ 1ರ ಇಂಟರ್‌ಮೀಡಿಯೇಟ್‌ ಕೋರ್ಸ್‌ ಪರೀಕ್ಷೆಯು ಮೇ 3, 5 ಮತ್ತು 9ರಂದು ನಡೆಯಲಿದೆ. ಮೊದಲು ಈ ಪರೀಕ್ಷೆಗಳನ್ನು ಮೇ 3, 5 ಮತ್ತು 7ರಂದು ನಿಗದಿಪಡಿಸಲಾಗಿತ್ತು.

ಗ್ರೂಪ್‌ 2ರ ಇಂಟರ್‌ಮೀಡಿಯೇಟ್‌ ಕೋರ್ಸ್‌ ಪರೀಕ್ಷೆಯು ಮೇ 11, 15 ಮತ್ತು 17ರಂದು ನಡೆಯಲಿದೆ. ಈ ಮೊದಲು ಮೇ 9, 11 ಮತ್ತು 13ರಂದು ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು.

ಗ್ರೂಪ್‌ 1ರ ಅಂತಿಮ ಪರೀಕ್ಷೆಯನ್ನು ಮೇ 2, 4 ಮತ್ತು 8ರಂದು ನಡೆಸಲಾಗುತ್ತದೆ. ಈ ಪರೀಕ್ಷೆಗಳನ್ನು ಈ ಹಿಂದೆ ಮೇ 2,4 ಮತ್ತು 6ರಂದು ನಡೆಸಲು ನಿಗದಿಪಡಿಸಲಾಗಿತ್ತು. ಗ್ರೂಪ್‌ 2ರ ಅಂತಿಮ ಪರೀಕ್ಷೆಯನ್ನು ಮೇ 10, 14 ಮತ್ತು 16ರಂದು ನಡೆಸಲಾಗುತ್ತದೆ. ಈ ಪರೀಕ್ಷೆಗಳನ್ನು ಈ ಮೊದಲು ಮೇ 8, 10 ಮತ್ತು 12ರಂದು ನಡೆಸಲು ನಿಗದಿಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT