ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ: ಸೀಟ್‍ಮ್ಯಾಟ್ರಿಕ್ಸ್ ಮತ್ತು ಕೋರ್ಸ್ ಕೋಡ್

Last Updated 3 ಜುಲೈ 2018, 10:43 IST
ಅಕ್ಷರ ಗಾತ್ರ

ಸಿಇಟಿ ಪ್ರವೇಶ ಪರೀಕ್ಷೆ ಬರೆದು, ದಾಖಲೆಗಳ ಪರಿಶೀಲನೆ ಮಾಡಿಸಿಕೊಂಡು, ಇಚ್ಛೆಗಳನ್ನು ನಮೂದಿಸುವ ತಯಾರಿಯಲ್ಲಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೀಟ್ ಮ್ಯಾಟ್ರಿಕ್ಸ್ ಮತ್ತು ಕೋರ್ಸ್ ಕೋಡ್‍ಗಳನ್ನು ಪ್ರಕಟಿಸಿದೆ. ಎಂಜಿನಿಯರಿಂಗ್ ವಿಭಾಗದ ಸಾಮಾನ್ಯ, ಹೈದರಾಬಾದ್ ಕರ್ನಾಟಕ ಮತ್ತು ವಿಶೇಷ ಕೋಟಾ, ಆರ್ಕಿಟೆಕ್ಚರ್ (ವಾಸ್ತುಶಿಲ್ಪ) ವಿಭಾಗದ ಸಾಮಾನ್ಯ, ಹೈದರಾಬಾದ್ ಕರ್ನಾಟಕ ಮತ್ತು ವಿಶೇಷ ಕೋಟಾ, ಫಾರ್ಮ್ ಸೈನ್ಸ್ ವಿಭಾಗದ ಸಾಮಾನ್ಯ, ಅಗ್ರಿಕಲ್ಚರ್ ಮತ್ತು ವಿಶೇಷ ಕೋಟಾದಲ್ಲಿ ಲಭ್ಯವಿರುವ ಸೀಟುಗಳ ವಿವರ ಸೀಟ್ ಮ್ಯಾಟ್ರಿಕ್ಸ್‌ನಲ್ಲಿದೆ. ಸಾಮಾನ್ಯ ಮತ್ತು ವಿವಿಧ ಪ್ರವರ್ಗಗಳಾದ 1, 2ಎ, 2ಬಿ, 3ಎ, 3ಬಿ, ಎಸ್‍ಸಿ, ಎಸ್‍ಟಿ ಹಾಗೂ ಎಲ್ಲ ವಿಭಾಗಗಳ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಕೋಟಾದ ಸೀಟುಗಳ ಸಂಪೂರ್ಣ ವಿವರ ಸೀಟ್ ಮ್ಯಾಟ್ರಿಕ್ಸ್‌ನಲ್ಲಿ ನೀಡಲಾಗಿದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿಭಾಗದಲ್ಲಿ ಸರಕಾರಿ, ಖಾಸಗಿ, ಎನ್‍ಆರ್‌ಐ ಮತ್ತು ಇತರ ಹಾಗೂ ಆಯುಷ್ ವಿಭಾಗದ ನಾಲ್ಕು ಕೋರ್ಸ್‌ಗಳಸೀಟ್ ಮ್ಯಾಟ್ರಿಕ್ಸ್ ಇನ್ನು ಪ್ರಕಟವಾಗಬೇಕಿದೆ.

ಇಚ್ಛೆಗಳನ್ನು ನಮೂದಿಸುವಾಗ ಆಪ್ಶನ್ ಎಂಟ್ರಿ ಪ್ಯಾನಲ್‍ನಲ್ಲಿ ಕಾಲೇಜು ಮತ್ತು ಕೋರ್ಸ್ ಹೆಸರು ಕಾಣಸಿಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಾಲೇಜು ಕೋಡ್ ಮತ್ತು ಕೋರ್ಸ್ ಕೋಡ್‍ಗಳನ್ನು ತಿಳಿದಿರಬೇಕಾಗಿರುವುದು ಅಗತ್ಯ. ಕಾಲೇಜು ಕೋಡ್‍ಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಈಗಾಗಲೇ ಪ್ರಕಟಿಸಲಾದ ಕಾಲೇಜುಗಳ ಪಟ್ಟಿಯಲ್ಲಿವೆ.

ಮೆಡಿಕಲ್, ಡೆಂಟಲ್ ಮತ್ತು ಆಯುಶ್ ಕೋರ್ಸ್ ಕೋಡ್‍ಗಳು:MG(ಎಂಬಿಬಿಎಸ್ ಸರಕಾರಿ ಕೋಟಾ),MP (ಎಂಬಿಬಿಎಸ್ ಪ್ರೈವೇಟ್ಕೋಟಾ),MN (ಎಂಬಿಬಿಎಸ್ ಎನ್‌ಆರ್‌ಐ ಕೋಟಾ),MO (ಎಂಬಿಬಿಎಸ್ ಇತರ ಕೋಟಾ), DG (ಬಿಡಿಎಸ್ ಸರಕಾರಿ ಕೋಟಾ), DP(ಬಿಡಿಎಸ್ ಪ್ರೈವೇಟ್ ಕೋಟಾ), DN(ಬಿಡಿಎಸ್ ಎನ್‍ಆರ್‌ಐ ಕೋಟಾ), DO (ಬಿಡಿಎಸ್ ಇತರ ಕೋಟಾ), AY (ಬಿಎಎಂಎಸ್ ಆಯುರ್ವೇದ),HO (ಬಿಹೆಚ್‍ಎಂಎಸ್ ಹೋಮಿಯೋಪಥಿ),NY ( ಬಿಎನ್‍ವೈ ಎಸ್ ನ್ಯಾಚುರೋಪಥಿ ಮತ್ತು ಯೋಗ),UN (ಬಿಯುಎಂಎಸ್ ಯುನಾನಿ).

ಕೃಷಿ ವಿಜ್ಞಾನ ಕೋರ್ಸ್ ಕೋಡ್‍ಗಳು:
AB(ಬಿಟೆಕ್ ಬಯೋಟೆಕ್ನಾಲಜಿ), AG (ಬಿಎಸ್ಸಿ ಅಗ್ರಿಕಲ್ಚರ್), AM (ಬಿಎಸ್ಸಿ ಅಗ್ರಿ. ಮ್ಯಾಕೊ), DT(ಬಿಟೆಕ್ ಡೈರಿ ಟೆಕ್ನಾಲಜಿ), EA(ಬಿಟೆಕ್ ಅಗ್ರಿಕಲ್ಚರ್ ಎಂಜಿನಿಯರಿಂಗ್), ‌FH (ಬಿಎಫ್‍ಎಸ್ ಫಿಶರೀಸ್ ಸೈನ್ಸ್), FR (ಬಿಎಸ್ಸಿ ಫಾರೆಸ್ಟರಿ),FS (ಬಿಟೆಕ್ ಫುಡ್ ಸೈನ್ಸ್ ಆಂಡ್ ಟೆಕ್ನಾಲಜಿ), FT (ಬಿಟೆಕ್ ಫುಡ್ ಟೆಕ್ನಾಲಜಿ),HE (ಹಾರ್ಟಿಕಲ್ಚರಲ್ ಎಂಜಿನಯರಿಂಗ್), HS (ಬಿಎಸ್ಸಿ ಕಮ್ಯುನಿಟಿ ಸೈನ್ಸ್), HT(ಬಿಎಸ್ಸಿ ಹಾರ್ಟಿಕಲ್ಚರ್),SR (ಬಿಎಸ್ಸಿ ಸೆರಿಕಲ್ಚರ್),VS (ಬಿವಿಎಸ್ಸಿ ಆಂಡ್ ಎಹೆಚ್-ವೆಟರ್ನಿಟಿ ಸೈನ್ಸ್ ಆಂಡ್ ಎನಿಮಲ್ ಹಸ್ಬೆಂಡರಿ)

ಫಾರ್ಮಸಿ ಕೋರ್ಸ್ ಕೋಡ್‍ಗಳು:
BP(ಬಿ. ಫಾರ್ಮಾ ಬ್ಯಾಚ್ಯುಲರ್ ಇನ್ ಫಾರ್ಮಸಿ), BP(L) (ಬಿ. ಫಾರ್ಮಾ ಲೇಟರಲ್ ಎಂಟ್ರಿ),PD (ಫಾರ್ಮಾ ಡಿ. ಡಾಕ್ಟರ್ ಇನ್ ಫಾರ್ಮಸಿ)

ಸಿಇಟಿ ಪ್ರವೇಶ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಸರಕಾರಿ, ಅನುದಾನಿತ, ಖಾಸಗಿ ಹಾಗೂ ಡೀಮ್ಡ್ ಯುನಿವರ್ಸಿಟಿಗಳಲ್ಲಿ ಲಭ್ಯವಿರುವ ವಿವಿಧ ಕೋರ್ಸ್‌ಗಳಿಗೆ ಪಾವತಿಸಬೇಕಾದ ಶುಲ್ಕಗಳ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಸರಕಾರ ನಿಗಧಿಪಡಿಸಿರುವ ಶುಲ್ಕಗಳು ಹಾಗೂ ಎಂಜಿನಿಯರಿಂಗ್ ಕೋರ್ಸ್‌ನ ವಿವಿಧ ಬ್ರಾಂಚ್‍ಗಳ ಕೋರ್ಸ್ ಕೋಡ್‍ಗಳನ್ನು ಮುಂದಿನ ಸಂಚಿಕೆಯಲ್ಲಿ ವಿವರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT