ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ: ಬಹುಆಯ್ಕೆಯ ಪ್ರಶ್ನೆಗಳು

Published 26 ಜೂನ್ 2024, 23:30 IST
Last Updated 26 ಜೂನ್ 2024, 23:30 IST
ಅಕ್ಷರ ಗಾತ್ರ
ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಬಹುಆಯ್ಕೆಯ ಪ್ರಶ್ನೋತ್ತರಗಳು ಇಲ್ಲಿವೆ...

1. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಳಗಿನ ಯಾವ ಶಾಖೋತ್ಪನ್ನ ಉತ್ಪಾದನಾ ಘಟಕವನ್ನು ಅತಿ ದೊಡ್ಡ ಉತ್ಪಾದನಾ ಘಟಕ ಎಂದು ಪರಿಗಣಿಸಬಹುದು?

ಎ. ವಿಂಧ್ಯಚಲ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕ.

ಬಿ. ಚಂದ್ರಾಪುರ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕ.

ಸಿ. ಮುಂದ್ರಾ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕ.

ಡಿ. ದುರ್ಗಾಪುರ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕ.

ಉತ್ತರ: ಎ

2. ಕೆಳಗಿನ ಯಾವ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳನ್ನು ಮಹಾರಾಷ್ಟ್ರದಲ್ಲಿ ಕಾಣಬಹುದಾಗಿದೆ?

1.  ಫರಕ್ಕಾ ಶಾಖೋತ್ಪನ್ನ ಉತ್ಪಾದನಾ ಘಟಕ.

2.  ಸೋಲಾಪುರ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಘಟಕ.

3.  ಸಿಕ್ಕ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಘಟಕ.

4.  ಸತ್ಪುರ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2 ಮತ್ತು 3 ಬಿ. 2 ಮಾತ್ರ

ಸಿ. 2 ಮತ್ತು 3 ಡಿ. 3 ಮತ್ತು 4

ಉತ್ತರ: ಬಿ

3. ಭಾರತಕ್ಕೆ ಹರಿದು ಬರುತ್ತಿರುವ ಖಾಸಗಿ ಪಾವತಿಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1.  ಭಾರತಕ್ಕೆ ಹರಿದು ಬರುತ್ತಿರುವ ಒಟ್ಟು ಖಾಸಗಿ ಪಾವತಿಗಳಲ್ಲಿ ಕೊಲ್ಲಿ ರಾಷ್ಟ್ರಗಳ ಕೊಡುಗೆ ಶೇ 28.6ರಷ್ಟು.

2.  ಹರಿದು ಬರುತ್ತಿರುವ ಒಟ್ಟು ಖಾಸಗಿ ಪಾವತಿಗಳಲ್ಲಿ ಕುವೈತ್‌ನ ಕೊಡುಗೆ ಶೇ 2.4 ರಷ್ಟು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ   ಬಿ. 2 ಮಾತ್ರ ‌

ಸಿ. 1 ಮತ್ತು

2  ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿದೆ.

ಉತ್ತರ: ಸಿ

4. ಕೊಲ್ಲಿ ಸಹಕಾರ ಮಂಡಳಿಯಲ್ಲಿ ಕೆಳಗಿನ ಯಾವ ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿರುತ್ತವೆ?

1.  ಯುನೈಟೆಡ್ ಅರಬ್ ಎಮಿರೇಟ್ಸ್.

2.  ಸೌದಿ ಅರೇಬಿಯಾ.

3.  ಕುವೈತ್.  4. ಒಮಾನ್.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ ಬಿ. 1, 2, 3 ಮತ್ತು 4 ‌

ಸಿ. 2 ಮತ್ತು 4 ಡಿ. 3 ಮತ್ತು 4

ಉತ್ತರ: ಬಿ

5. ಭಾರತದಲ್ಲಿ ಕೆಳಗಿನ ಯಾವ ಸ್ವರೂಪದ ಬ್ಯಾಂಕೇತರ ಹಣಕಾಸು ಕಂಪನಿಗಳನ್ನು ಕಾಣಬಹುದು?

1.  ಯಂತ್ರೋಪಕರಣಗಳ ಮೇಲೆ ಸಾಲ ನೀಡುವ ಕಂಪನಿ.

2.  ಭದ್ರತಾ ಮಾರುಕಟ್ಟೆಯ ಸಾಧನೆಗಳ ಮೇಲೆ ಹೂಡಿಕೆ ಮಾಡುವ ಕಂಪನಿ.

3. ಸೂಕ್ಷ್ಮ ಹಣಕಾಸು ಸೇವೆಗಳನ್ನು ನೀಡುವ ಕಂಪನಿ.

4. ವಸತಿ ಸವಲತ್ತುಗಳಿಗಾಗಿ ಹಣಕಾಸು ನೀಡುವ ಕಂಪನಿ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ ಬಿ. 1, 2, 3 ಮತ್ತು 4

ಸಿ. 3 ಮತ್ತು 4 ಡಿ. 2 ಮತ್ತು 3

ಉತ್ತರ: ಬಿ

6. ಬ್ಯಾಂಕೇತರ ಹಣಕಾಸು ಕಂಪನಿಗಳ ಉಗಮ ಮತ್ತು ಪ್ರಗತಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1.  ಬ್ಯಾಂಕೇತರ ಹಣಕಾಸು ಕಂಪನಿಗಳು ಭಾರತದಲ್ಲಿ 1960 ರಿಂದಲೇ ಅಸ್ತಿತ್ವದಲ್ಲಿದೆ.

2.  ಬ್ಯಾಂಕೇತರ ಹಣಕಾಸು ಕಂಪನಿಗಳು 1990ರ ದಶಕದ ನಂತರ ಮುನ್ನಲೆಗೆ ಬಂದಿತು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ ಬಿ. 2 ಮಾತ್ರ

ಸಿ. 1 ಮತ್ತು 2

ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.

ಉತ್ತರ: ಸಿ

7. ಕೆಳಗಿನ ಯಾವ ಒಕ್ಕೂಟ ಉಕ್ರೇನ್ ಗೆ 50 ಶತಕೋಟಿ ಡಾಲರ್ ಬೆಂಬಲ ನೀಡಲು ನಿರ್ಧಾರವನ್ನು ಕೈಗೊಂಡಿದೆ?

ಎ. G-8 ಒಕ್ಕೂಟ.

ಬಿ. G-7 ಒಕ್ಕೂಟ.

ಸಿ. G-20 ಒಕ್ಕೂಟ.

ಡಿ. G-77 ಒಕ್ಕೂಟ.

ಉತ್ತರ: ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT