ನಮ್ಮ ಜೀವನವು ಯಾವುದೇ ಲಿಖಿತ ಪರೀಕ್ಷೆಗಿಂತ ಹೆಚ್ಚು ಸಂಕೀರ್ಣವಾದ ಸವಾಲುಗಳನ್ನು ಒಳಗೊಂಡಿರುತ್ತದೆ. ಪ್ರತಿ ವ್ಯಕ್ತಿಯೂ ಆ ಸವಾಲುಗಳನ್ನು ವಿಭಿನ್ನ ರೀತಿಯಲ್ಲಿ ಎದುರಿಸುತ್ತಾನೆ. ಹೀಗಿರುವಾಗ, ವಿದ್ಯಾರ್ಥಿಗಳ ಯಶಸ್ಸನ್ನು ಅಳೆಯಲು ‘ಪಾಸ್’ ಅಥವಾ ‘ಫೇಲ್’ ಎಂಬ ಪದಗಳು ಬಳಕೆಯಾಗುತ್ತಿರುವುದು ಎಷ್ಟು ಸರಿ? ಫಲಿತಾಂಶದ ಬಗ್ಗೆ ಭಯ, ಆತಂಕ, ನ್ಯೂನತೆ, ವೈಫಲ್ಯ ಅಥವಾ ವೈಯಕ್ತಿಕ ಅಸ್ಥಿರತೆಯನ್ನು ಈ ಪದಗಳು ಬಿಂಬಿಸುತ್ತವೆ.

ಕಲಿಯುವವರು ನಿರ್ದಿಷ್ಟ ಸಮಯದಲ್ಲಿ ನಿರೀಕ್ಷಿತ ಮಟ್ಟವನ್ನು ತಲುಪದಿದ್ದಾಗ ಅವರು ಇನ್ನೂ ಅದಕ್ಕೆ ಸಿದ್ಧರಾಗಿಲ್ಲ ಅಥವಾ ಕಲಿಯಲು ಅವರಿಗೆ ಇನ್ನಷ್ಟು ಸಮಯ, ಬೆಂಬಲ, ಹೆಚ್ಚಿನ ಅಭ್ಯಾಸ ಬೇಕಾಗಿದೆ ಎಂದು ಅರ್ಥವೇ ವಿನಾ ಅವರು ಅಸಮರ್ಥರು ಎಂದಲ್ಲ. ಇದುವೇ ಪರಿಪೂರ್ಣವಾದ ಮಾನವೀಯ ಮೌಲ್ಯ ವಿಧಾನ. ಪ್ರಪಂಚದಾದ್ಯಂತ ಶಿಕ್ಷಣ ಸಂಸ್ಥೆಗಳು ಈಗ ಸೌಮ್ಯ, ಬೆಳವಣಿಗೆ ಆಧಾರಿತ ಪರ್ಯಾಯ ಪದಗಳತ್ತ ಗಮನಹರಿಸಿವೆ. ಪೂರ್ಣಗೊಂಡಿದೆ, ಪ್ರಗತಿಯಲ್ಲಿದೆ, ಸಾಧಿಸಲಾಗಿದೆ, ಇನ್ನೂ ಸಾಧಿಸಬೇಕಾಗಿದೆ, ಹೆಚ್ಚಿನ ಅಭ್ಯಾಸದ ಅಗತ್ಯವಿದೆ ಅಥವಾ ಸುಧಾರಣೆಯ ಅಗತ್ಯವಿದೆ ಎಂಬಂತಹ ಪದಗಳು ಶಿಕ್ಷಣದ ನೈಜ ಉದ್ದೇಶವನ್ನು ಬಿಂಬಿಸುತ್ತವೆ. ಇವು ವಿದ್ಯಾರ್ಥಿಗಳನ್ನು ಕಲಿಕೆಯಿಂದ ವಿಮುಖರನ್ನಾಗಿಸುವುದಿಲ್ಲ. ಸಿಬಿಎಸ್ಇ 2020ರಿಂದಲೇ ಅಂಕಪಟ್ಟಿಯಲ್ಲಿ ‘ಫೇಲ್’ ಎಂಬುದರ ಬದಲು ‘ಅಗತ್ಯ ಪುನರಾವರ್ತನೆ’ ಎಂಬ ಪದವನ್ನು ಬಳಸುತ್ತಿದೆ.

ಸ್ವೀಡನ್, ಫಿನ್ಲ್ಯಾಂಡ್, ಅಮೆರಿಕ ಸೇರಿದಂತೆ ಕೆಲ ದೇಶಗಳಲ್ಲಿ ‘ಫೇಲ್’ಗೆ ಪರ್ಯಾಯವಾದ ಪದಗಳು ಬಳಕೆಯಲ್ಲಿವೆ. ‘ಪಾಸ್’ ಎಂಬುದು ಪೂರ್ಣ ಸಾಮರ್ಥ್ಯದ ಸೂಚಕವಲ್ಲ ಅಥವಾ ‘ಫೇಲ್’ ಎಂಬುದು ಅಸಾಮರ್ಥ್ಯಕ್ಕೆ ಪುರಾವೆಯೂ ಅಲ್ಲ.

ಮನೋವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಭಾಷೆ ಅಥವಾ ಪರಿಭಾಷೆಯು ಗ್ರಹಿಕೆಯನ್ನು ರೂಪಿಸುತ್ತದೆ, ನಿರೀಕ್ಷೆಗಳ ಮೇಲೆ ಪ್ರಭಾವ ಬೀರುತ್ತದೆ, ಲೋಪವನ್ನು ಬಲಪಡಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ. ಆದ್ದರಿಂದ ‘ಫೇಲ್’ ಬದಲು ಅದಕ್ಕೆ ಪೂರಕವಾಗಿ ಅನ್ಯ ಪದಗಳನ್ನು ಬಳಕೆ ಮಾಡುವುದರಿಂದ ವಿದ್ಯಾರ್ಥಿಗಳ ಮೇಲಿನ ಭಾವನಾತ್ಮಕ ಹೊರೆ ಕಡಿಮೆಯಾಗುತ್ತದೆ.

ಪಠ್ಯಕ್ರಮ, ಬೋಧನೆ, ಮೌಲ್ಯಮಾಪನ ವಿಧಾನಗಳಲ್ಲಿ ಆಧುನಿಕತೆಗೆ ತಕ್ಕಂತೆ ಬದಲಾವಣೆಗಳು ಆಗಿರುವಂತೆಯೇ ಫಲಿತಾಂಶದ ಪರಿಭಾಷೆಯೂ ಬದಲಾಗಬೇಕು. ಇಂದಿನ ವಿದ್ಯಾರ್ಥಿಗಳಿಗೆ ಪೂರಕವಾಗಿ ಅವುಗಳನ್ನು ಆಧುನೀಕರಿಸಬೇಕು. ಫಲಿತಾಂಶ ನೀಡಿಕೆಯಲ್ಲಿ ಸ್ಫೂರ್ತಿದಾಯಕ, ಪ್ರೇರಣಾದಾಯಕ ಹಾಗೂ ಪ್ರೋತ್ಸಾಹದಾಯಕವಾದ ಸುಧಾರಿತ ಪದಗಳು ಬಳಕೆಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.