ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಲಿತ ವಿದ್ಯಮಾನಗಳು: ಹಸಿರು ಬಾಂಡುಗಳ ಮರುಪರಿಚಯ

Published 5 ಅಕ್ಟೋಬರ್ 2023, 1:15 IST
Last Updated 5 ಅಕ್ಟೋಬರ್ 2023, 1:15 IST
ಅಕ್ಷರ ಗಾತ್ರ

ದೀರ್ಘಾವಧಿಯ ಹಸಿರು ಬಾಂಡುಗಳು ಮತ್ತು ಸರ್ಕಾರಿ ಭದ್ರತೆಗಳು

50 ವರ್ಷಗಳ ನಂತರ ಮರು ಪಾವತಿ ಮಾಡಬೇಕಾದ ಸರ್ಕಾರಿ ಬಾಂಡುಗಳ ಮತ್ತು 30 ವರ್ಷದ ನಂತರ ಮರುಪಾವತಿ ಮಾಡಬೇಕಾದ ಹಸಿರು ಬಾಂಡುಗಳ ವಿತರಿಸುವ ಕುರಿತು ಇತ್ತೀಚೆಗೆ ಭಾರತ ಸರ್ಕಾರ ನಿರ್ಧಾರ ಕೈಗೊಂಡಿದೆ. ಜೀವವಿಮಾ ಸಂಸ್ಥೆಗಳು ಮತ್ತು ಭವಿಷ್ಯನಿಧಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ದೀರ್ಘಾವಧಿಯ ಹೂಡಿಕೆಗೆ ಅವಕಾಶಗಳನ್ನು ಕಲ್ಪಿಸಬೇಕು ಎಂದು ಸರ್ಕಾರದಲ್ಲಿ ಮನವಿ ಮಾಡುತ್ತಿತ್ತು. ಈ ಬೇಡಿಕೆಗೆ ಅನುಸಾರ ದೀರ್ಘಾವಧಿಯ ಹಸಿರು ಬಾಂಡು ಮತ್ತು ಸರ್ಕಾರಿ ಬಾಂಡುಗಳನ್ನು ವಿತರಿಸಲು ಮುಂದಾಗಿದೆ.

ಭವಿಷ್ಯ ನಿಧಿಯ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳು ಮತ್ತು ಪಿಂಚಣಿ ವಲಯದಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳು ಹಾಗೂ ವಿಮಾ ಸಂಸ್ಥೆಗಳು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುವ ಸಂದರ್ಭದಲ್ಲಿ ದೀರ್ಘಾವಧಿಗೆ ಸಂಗ್ರಹಿಸುತ್ತದೆ. ಸಂಗ್ರಹಣೆಗೆ ಅನುಗುಣವಾಗಿ ವಿಮಾ ಕಂಪನಿಗಳು, ಭವಿಷ್ಯ ನಿಧಿಯ ಕಂಪನಿಗಳು ಮತ್ತು ಪಿಂಚಣಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ನಷ್ಟದ ಸಾಧ್ಯತೆಗಳು ಕಡಿಮೆ ಇರುವ ವಲಯದಲ್ಲಿ ಹೂಡಿಕೆಗೆ ಹೆಚ್ಚು ಆಸಕ್ತರಾಗಿರುತ್ತಾರೆ. ಖಾಸಗಿ ವಲಯದ ಬಾಂಡುಗಳ ಮೇಲೆ ಹೂಡಿಕೆಯನ್ನು ಮಾಡಿದರೆ ನಷ್ಟ ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಆದ್ದರಿಂದ ವಿಮಾ ಸಂಸ್ಥೆಗಳು, ಭವಿಷ್ಯ ನಿಧಿಯ ಸಂಸ್ಥೆಗಳು 20 ಪಿಂಚಣಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಸರ್ಕಾರಿ ಬಾಂಡುಗಳ ಮೇಲೆ ಹೂಡಿಕೆ ಮಾಡಿದರೆ ನಷ್ಟದ ಯಾವುದೇ ಸಾಧ್ಯತೆ ಇರುವುದಿಲ್ಲ.

ಹಸಿರು ಬಾಂಡುಗಳ ಮರುಪರಿಚಯ

ಹಸಿರು ಬಾಂಡುಗಳನ್ನು ಕೆಲ ವರ್ಷಗಳ ಮುಂಚೆ ವಿತರಣೆ ಮಾಡಿತ್ತು. ಮತ್ತೊಮ್ಮೆ 2023ರಲ್ಲಿ ಹಸಿರು ಬಾಂಡುಗಳ ವಿತರಣೆಗೆ ಮುಂದಾಗಿದೆ.

ಭಾರತೀಯ ನೌಕಾಪಡೆಯ ಸ್ವಾವಲಂಬನ್-2.0

ಅಕ್ಟೋಬರ್ 2023ರ ಮೊದಲ ವಾರದಲ್ಲಿ ಭಾರತೀಯ ನೌಕಾಪಡೆ ಸ್ವಾವಲಂಬನ-2.0 ಕಾರ್ಯಸೂಚಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ನೌಕಾಪಡೆಗೆ ಬೇಕಾಗುವ ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ಭಾರತದಲ್ಲಿ ತಯಾರಿಸುವ ಕಾರ್ಯಸೂಚಿ ಎಂದು ಪರಿಗಣಿಸಬಹುದು.

ಭಾರತೀಯ ನೌಕಾಪಡೆಗೆ ಬೇಕಾದ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿದ್ದು ವಿದೇಶಿ ವಿನಿಮಯದ ಮೇಲೆ ಹೊರೆ ಹೆಚ್ಚಾಗುತ್ತಿದೆ. ಇದನ್ನು ತಗ್ಗಿಸಲು ಭಾರತೀಯ ನೌಕಾಪಡೆ ಭಾರತದಲ್ಲಿ ತಯಾರಿಸಿ ಯೋಜನೆಗೆ ಅನುಗುಣವಾಗಿ ದೇಶೀಯ ಮಟ್ಟದಲ್ಲಿ ಉಪಕರಣಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಸ್ವಾವಲಂಬನ ಯೋಜನೆಯನ್ನು ಕೈಗೆತ್ತಿಕೊಂಡಿತ್ತು.

2022ರ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ನೌಕಾಪಡೆಗೆ ಅನುಗುಣವಾಗುವ 75 ವಿವಿಧ ಬಗೆಯ ನೂತನ ತಂತ್ರಜ್ಞಾನದ ಅಭಿವೃದ್ಧಿಗೆ ಭಾರತೀಯ ನೌಕಾಪಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಗುರಿಯನ್ನು ತಲುಪಿರುವುದು ಮಾತ್ರವಲ್ಲದೆ ಹೆಚ್ಚುವರಿಯಾಗಿ ನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.

ನೂತನ ತಂತ್ರಜ್ಞಾನಗಳು ಜಾಗತಿಕ ಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಸಿದ್ಧವಾಗಿದ್ದು ಕಡಿಮೆ ವೆಚ್ಚದಾಯಕವಾಗಿದೆ. ಭಾರತದಲ್ಲಿ ತಯಾರಿಸಿರುವುದರಿಂದ ವೆಚ್ಚ ಕಡಿಮೆಯಾಗಿದ್ದು ಬೇರೆ ರಾಷ್ಟ್ರಗಳಿಗೆ ಈ ಉಪಕರಣಗಳನ್ನು ರಫ್ತು ಮಾಡುವ ಉದ್ದೇಶವನ್ನು ಕೂಡ ಭಾರತೀಯ ನೌಕಾಪಡೆ ಹಮ್ಮಿಕೊಂಡಿದೆ. ಸ್ವಾವಲಂಬನ-2.0 ಕಾರ್ಯಕ್ರಮ ಖಾಸಗಿ ವಲಯದೊಂದಿಗೆ ಸಹಭಾಗಿತ್ವಗಳಿಗೆ ಸಹಿ ಹಾಕಲಾಗುತ್ತದೆ ಮತ್ತು ಜಂಟಿ ಸಹಭಾಗಿತ್ವ ಯೋಜನೆಗಳ ಮೂಲಕ ನೂತನ ತಂತ್ರಜ್ಞಾನಗಳ ಅಭಿವೃದ್ಧಿಗೆ ಕಾರ್ಯಸೂಚಿಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತನ್ನ ವರದಿಯಲ್ಲಿ ಬಿಡುಗಡೆ ಮಾಡಿದೆ.

ಕೈಮೂರ್ ವನ್ಯಜೀವಿ ಧಾಮ

ಬಿಹಾರ್ ಸರ್ಕಾರ ಕೈಮೂರ್ ಜಿಲ್ಲೆಯಲ್ಲಿ ಎರಡನೇ ಹುಲಿ ಅಭಯಾರಣ್ಯವನ್ನು ಸ್ಥಾಪಿಸಲು ನಿರ್ಧಾರ ಕೈಗೊಂಡಿದೆ. ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕಿ ಹುಲಿ ಅಭಯಾರಣ್ಯ ಮಾತ್ರ ಇದೆ. ಬಿಹಾರ್ ರಾಜ್ಯ ಅರಣ್ಯ ಇಲಾಖೆ ಈಗಾಗಲೇ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಅನುಮೋದನೆಗೆ ಅರ್ಜಿಯನ್ನು ಸಲ್ಲಿಸಿದ್ದು ಮುಂದಿನ ವರ್ಷದ ವೇಳೆಗೆ ಕೈಮೂರ್ ವನ್ಯಜೀವಿಧಾಮವನ್ನು ಕೂಡ ಹುಲಿ ಅಭಯಾರಣ್ಯವನ್ನಾಗಿ ಘೋಷಿಸಲು ಅನುಮತಿ ನೀಡಬೇಕೆಂದು ಅರ್ಜಿಯನ್ನು ಸಲ್ಲಿಸಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಈಗಾಗಲೇ ಪ್ರಾಥಮಿಕ ಹಂತದ ಅನುಮೋದನೆಯನ್ನು ನೀಡಿದ್ದು, ಅಂತಿಮ ಹಂತದ ಅನುಮೋದನೆಯನ್ನು ನೀಡಲು ಇದರ ಪರ ಮತ್ತು ವಿರೋಧಗಳನ್ನು ಕೂಲಂಕಷವಾಗಿ ಚರ್ಚಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT