ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೂಪ್-ಸಿ (ತಾಂತ್ರಿಕೇತರ) ಹುದ್ದೆ: ಭಾರತೀಯ ಸಮಾಜ ಮತ್ತು ಅದರ ಕ್ರಿಯಾಶೀಲತೆ

ಗ್ರೂಪ್-ಸಿ (ತಾಂತ್ರಿಕೇತರ) ಹುದ್ದೆ
Last Updated 2 ಡಿಸೆಂಬರ್ 2021, 1:08 IST
ಅಕ್ಷರ ಗಾತ್ರ

ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್ ‘ಸಿ‘ ವೃಂದದ ತಾಂತ್ರಿಕೇತರ ಹುದ್ದೆಗಳ ನೇಮಕಕ್ಕಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನ ವಿಭಾಗದಲ್ಲಿ ‘ಭಾರತೀಯ ಸಮಾಜ ಮತ್ತು ಅದರ ಕ್ರಿಯಾಶೀಲತೆ‘ ವಿಷಯದ ಕುರಿತಾದ ಬಹು ಆಯ್ಕೆ ಪ್ರಶ್ನೆಗಳು.

1) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಭಾರತೀಯ ಸಮಾಜವು ವರ್ಣಾಶ್ರಮ ಧರ್ಮದ ಮೇಲೆ ನಿಂತಿದೆ. ವರ್ಣಗಳು ಗುಣ , ಕರ್ಮ, ವೃತ್ತಿ, ಮತ ಮತ್ತು ಭಾಷೆ ದೇಶ ಮುಂತಾದವುಗಳನ್ನು ಅನುಸರಿಸಿಯೇ ವಿನಾ ಮನುಷ್ಯ ವರ್ಗವನ್ನು ಅನುಸರಿಸಲ್ಲ. ಒಂದೇ ಗೋತ್ರದಲ್ಲಿ ಬ್ರಾಹ್ಮಣ ಕ್ಷತ್ರಿಯ, ವೈಶ್ಯರೂ, ಇದ್ದಾರೆ.

2) ಅನಾದಿಕಾಲದಿಂದಲೂ ಭಾರತೀಯ ಸಮಾಜದಲ್ಲಿದ್ದ ಜಾತಿ ಅಥವಾ ವರ್ಣವು ಮೂಲತ: ಸ್ವ-ಸಾಮರ್ಥ್ಯದ ಫಲವಾಗಿ ಹುಟ್ಟಿರಬಹುದು, ಆದರೆ ಜಾತಿಯು ಬಹುಬೇಗನೆ ಜನ್ಮವನ್ನು ಆಧರಿಸಿದ ಸಾಮಾಜಿಕ ಸ್ತರವಿನ್ಯಾಸವಾಗಿ ಹಾಳಾಯಿತು.

3) ಭಾರತದಲ್ಲಿ ಬ್ರಾಹ್ಮಣರಿಗೊಂದು ಕಾಯ್ದೆಯಿದ್ದರೆ, ಶೂದ್ರರಿಗೆ ಇನ್ನೊಂದು ಕಾಯ್ದೆ ಅಸ್ತಿತ್ವಕ್ಕೆ ಬಂದವು, ಪಠಾಣರೆಂದು ಸುಪರಿಚರಾದ ಟರ್ಕರೂ ಹಾಗೂ ಮೊಗಲರೂ, ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ ನಂತರವೂ ಪರಿಸ್ಥಿತಿಗಳು ಸುಧಾರಿಸಲಿಲ್ಲ. ಪಠಾಣರ ಆಡಳಿತದ ಕಾಲದಲ್ಲಿ ಇತರ ಪ್ರಜೆಗಳಿಗಿಂತ ಪಠಾಣನಿಗೆ ಶ್ರೇಷ್ಠವಾದ ಹಕ್ಕುಗಳಿದ್ದವು. ಇದೇ ರೀತಿಯಲ್ಲಿ ಮೊಗಲರ ಕಾಲದಲ್ಲಿ ಮೊಗಲರು ಉಳಿದೆಲ್ಲ ವರ್ಗದ ಜನರಿಗಿಂತ ಅಗ್ರಮಾನ್ಯತೆಯನ್ನು ಪಡೆದರು.

4) ಬ್ರಿಟಿಷರು, ಪ್ರಜೆಗಳೆಲ್ಲರೂ ಸರಿಸಮಾನರು ಎಂಬ ‘ನ್ಯಾಯದ ಪ್ರಭುತ್ವ'ದ ಕಲ್ಪನೆಗೆ ತಾವು ಬದ್ಧವಾಗಿರುವುದಾಗಿ ಸಾರಿದರು. ಆದರೆ ಆರೋಪಿಯಾದ ಐರೋಪ್ಯನಿಗೆ ವಿಶೇಷ ನ್ಯಾಯನಿರ್ಣಾಯಕರ (ಜ್ಯೂರಿ) ಸೌಲಭ್ಯವನ್ನು ಕೊಡುವುದರ ಮೂಲಕ ಅವರು ಸಮಾಜದಲ್ಲಿ ಅಸಮಾನತೆಯನ್ನು ಜೀವಂತ ಇಟ್ಟರು ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿದ್ದವು?

ಎ) ಹೇಳಿಕೆ 1ರಿಂದ 4ರ ತನಕ ಎಲ್ಲವೂ ಸರಿಯಾಗಿವೆ

ಬಿ) ಹೇಳಿಕೆ 3 ಮತ್ತು 4 ಮಾತ್ರ ಸರಿಯಾಗಿವೆ

ಸಿ) ಹೇಳಿಕೆ 1, 2 ಮತ್ತು 3 ಮಾತ್ರ ಸರಿಯಾಗಿವೆ

ಡಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಉತ್ತರ:- ಎ

2) 19ನೇ ಶತಮಾನದ ಆದಿಭಾಗದಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಸಾರ್ವಜನಿಕ ಶಿಕ್ಷಣಕ್ಕಾಗಿ ಹಣ ಒದಗಿಲು ಪ್ರಾರಂಭಿಸಿತು ಅದು ಈ ಕೆಳಗಿನ ಯಾವುದರ ಕಲಿಕೆಗಾಗಿ ಹೆಚ್ಚು ಮಹತ್ವವನ್ನು ಆರಂಭದಲ್ಲಿ ನೀಡಿತು?

ಎ) ಸಂಸ್ಕೃತ, ಅರಬ್ಬೀ ಮತ್ತು ಪರ್ಸಿಯನ್ ಭಾಷೆಗಳ ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಿತು

ಬಿ) ಕಲೆ ಮತ್ತು ವಿಜ್ಞಾನದ ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಿತು

ಸಿ) ಕಲೆ ಮತ್ತು ವಾಣಿಜ್ಯ ವಿಷಯಗಳ ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಿತು

ಡಿ) ಕಲೆ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದ ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಿತು

ಉತ್ತರ:- ಎ

3) ಹೇಳಿಕೆಗಳನ್ನು ಗಮನಿಸಿ

1) ದಕ್ಷಿಣ ಭಾರತದಲ್ಲಿ ಪ್ರಥಮ ಇಂಗ್ಲಿಷ್ ಮಾಧ್ಯಮದ ಶಾಲೆಯು 1717ರಲ್ಲಿ ಕಡಲೂರಿನಲ್ಲಿ ಪ್ರಾರಂಭವಾಯಿತು,

2) ರಿಚಾರ್ಡ್ ಕಾಬ್ ಎಂಬವನು ಬಡ ಯೂರೋಪಿಯನ್ ಹಾಗೂ ಆಂಗ್ಲೊ ಇಂಡಿಯನ್ ಮಕ್ಕಳಿಗಾಗಿ ಮುಂಬಯಿಯಲ್ಲಿ ಒಂದು ಧರ್ಮಾರ್ಥ ಶಾಲೆಯನ್ನು 1719ರಲ್ಲಿ ಸ್ಥಾಪಿಸಿದನು ಅದನ್ನು ಮುಂದೆ 1815ರಲ್ಲಿ ಭಾರತೀಯ ಮಕ್ಕಳ ಪ್ರವೇಶಕ್ಕೂ ಮುಕ್ತಗೊಳಿಸಲಾಯಿತು.

3) ಕ್ರಿ. ಶ. 1720ರಲ್ಲಿ ಧರ್ಮಾರ್ಥ ಶಾಲೆಯೊಂದು ಕೋಲ್ಕತ್ತದಲ್ಲಿ ಸ್ಥಾಪಿಸ
ಲಾಯಿತು.

4) ಕೋಲ್ಕತ್ತದ ಅಲೆಕ್ಜಾಂಡರ್ ಡಫ್, ಮುಂಬಯಿಯ ಜಾನ್ ವಿಲ್ಸನ್ ಮತ್ತು ಮದ್ರಾಸಿನ ವಿಲಿಯಂ ಮಿಲ್ಲರ್ ಈ ಮೂವರ ಹೆಸರುಗಳು ಭಾರತದ ಪಾಶ್ಚಿಮಾತ್ಯ ಶಿಕ್ಷಣದ ಇತಿಹಾಸದಲ್ಲಿ ಎಂದೆಂದಿಗೂ ಗೌರವದ ಸ್ಥಾನವನ್ನು ಪಡೆಯುತ್ತವೆ.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ) ಹೇಳಿಕೆ 1ರಿಂದ 4ರ ತನಕ ಎಲ್ಲವೂ ಸರಿಯಾಗಿವೆ.

ಬಿ) ಹೇಳಿಕೆ 3 ಮತ್ತು 4 ಮಾತ್ರ ಸರಿಯಾಗಿವೆ.

ಸಿ) ಹೇಳಿಕೆ 1, 2 ಮತ್ತು 3 ಮಾತ್ರ ಸರಿಯಾಗಿವೆ.

ಡಿ) ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ:- ಎ

4) 1944ರಷ್ಟು ಹಿಂದೆಯೇ …………………………ಸಮಿತಿಯು ಅಮೆರಿಕದ ಸಂಯುಕ್ತ ರಾಜ್ಯದಲ್ಲಿರುವ ಮ್ಯಾಸೆಚುಟಸೆಟ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಜ್ಯೂರಿಚ್‌ದಲ್ಲಿರುವ ಟೆಕ್ನಿಕ್ ಹಾಕ್ ಸ್ಕೂಲ್ ಇವುಗಳ ಮಾದರಿಯಲ್ಲಿ ಭಾರತದಲ್ಲಿ ತಂತ್ರಜ್ಞಾನ ಸಂಸ್ಥೆಗಳನ್ನು ತೆರೆಯಲು ಶಿಫಾರಸು ಮಾಡಿತ್ತು.

ಎ) ನಲಿನಿ ರಂಜನ ಸರ್ಕಾರ್ ಬಿ) ಮೇಜರ್ ರಾಯಲ್ ಡಾಲ್ಫಿನ್

ಸಿ) ಜದುನಾಥ್ ಸರ್ಕಾರ್ ಡಿ) ಬ್ರಿಚಿತ್ರಾನಂದ ದೇ

ಉತ್ತರ:- ಎ

5) 1901ರಲ್ಲಿ ನಡೆದ ಜನಗಣಿತಿಯ ಸಂದರ್ಭದಲ್ಲಿ ನಿರ್ದೇಶನ ನೀಡಿ ಭಾರತದಲ್ಲಿ ಜಾತಿಯ ಮಹತ್ವದ ಕುರಿತು ಅಂಕಿಅಂಶಗಳನ್ನು ಕಲೆಹಾಕಲು ತಿಳಿಸಲಾಯಿತು. ಅಂದರೆ ಯಾವ ಪ್ರದೇಶದಲ್ಲಿ ಯಾವ ಜಾತಿಗೆ ಯಾವ ಸ್ಥಾನಮಾನವಿದೆ? ಎಂಬುದನ್ನು ಕಲೆ ಹಾಕಲು ತಿಳಿಸಲಾಯಿತು. ಇದು ಭಾರತೀಯ ಸಮಾಜದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರಿತು. ಪ್ರತಿಯೊಂದು ಜಾತಿಯೂ ಸಮಾಜದಲ್ಲಿ ತನ್ನ ಸ್ಥಾನವು ಯಾವ ಉಚ್ಚಮಟ್ಟದ್ದು ಎಂದು ತಿಳಿಸಲು ಪೈಪೋಟಿಗೆ ಇಳಿಯಿತು. ಅದಕ್ಕಾಗಿ ಐತಿಹಾಸಿಕ ದಾಖಲೆಗಳನ್ನು, ಶಾಸನ, ಗ್ರಂಥ/ಪುಸ್ತಕಗಳಲ್ಲಿ ಇರುವ ಉಲ್ಲೇಖಗಳನ್ನು ಹಿಂದಿನಿಂದ ಸಮಾಜದಲ್ಲಿ ಆಯಾ ಜಾತಿಗಿದ್ದ ಮಾನ ಸಮ್ಮಾನಗಳನ್ನು ವೈಭವಿಕರಿಸಿ ಬ್ರಿಟಿಷ್ ಅಧಿಕಾರಿಗಳ ಮುಂದೆ ಇಡಲು ಪ್ರಯತ್ನಿಸಿತು.

ಹಾಗಾದರೆ ಈ ನಿರ್ದೇಶನ ನೀಡಿದವರು ಯಾರು?

ಎ) ಹರ್ಬರ್ಟ್ ರಿಸ್ಲೆ ಬಿ) ಅಲೆಕ್ಜಾಂಡರ್ ಡಫ್

ಸಿ) ಜಾನ್ ವಿಲ್ಸನ್ ಡಿ) ವಿಲಿಯಂ ಮಿಲ್ಲರ್

ಉತ್ತರ:- ಎ

6) ಹೇಳಿಕೆಗಳನ್ನು ಗಮನಿಸಿ

1) ಬ್ರಿಟಿಷ್ ಸಾಮ್ರಾಜ್ಯದ ಕೊನೆಯ ಹಂತದಲ್ಲಿ ಅಂದರೆ 1935ರ ಹೊತ್ತಿಗೆ Government of India Act of 1935 ಜಾರಿಗೆ ತರಲಾಯಿತು ಅದರಲ್ಲಿ ಶೆಡ್ಯೂಲ್ ಕಾಸ್ಟ್ ಮತ್ತು ಶೆಡ್ಯೂಲ್ ಟ್ರೈಬ್ಸ್‌ಗೆ ರಿಕೆಗ್ನಿಷನ್/ಮಾನ್ಯತೆ ನೀಡಿತು ಅದಕ್ಕಾಗಿಯೇ ಒಂದು ಶೆಡ್ಯೂಲ್ ಅನ್ನು ಕಾಯ್ದೆಯಲ್ಲಿ ನಿರ್ಮಿಸಿದ ಪರಿಣಾಮ ಶೆಡ್ಯೂಲ್ ಕಾಸ್ಟ್ ಮತ್ತು ಶೆಡ್ಯೂಲ್ ಟ್ರೈಬ್ಸ್‌ ಪದಗಳು ಜನಜನಿತವಾದವು.

2) ದೇಶದ ಶೇ 85ರಷ್ಟು ಬುಡಕಟ್ಟು (ಗುಡ್ಡಗಾಡು) ಜನರು ಮಧ್ಯಭಾರತದಲ್ಲಿಯೇ ವಾಸವಾಗಿದ್ದಾರೆ. ಗುಜರಾತ್‌ ಮತ್ತು ರಾಜಸ್ಥಾನದಿಂದ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾವರೆಗೆ ಈ ಸಮುದಾಯದವರ ಸಂಖ್ಯೆ ಹೆಚ್ಚಿಗೆ ಇರುವುದನ್ನು ನೋಡುತ್ತೇವೆ.

3) ಅಸ್ಪೃಶ್ಯತೆ ವಿರುದ್ದವಾಗಿ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಡ್ರಿಪ್ರೆಸ್ಡ್ ಕ್ಲಾಸ್ ಮೂವ್‌ಮೆಂಟ್ ಆರಂಭವಾಯಿತು. ಇದಲ್ಲದೇ ಉಚ್ಚ ಜಾತಿಯಲ್ಲಿರುವ ವಿಚಾರವಾದಿಗಳು ಹಾಗೂ ಅಸ್ಪೃಶ್ಯ ಸಮಾಜದಲ್ಲಿರುವ ಧುರಿಣರು ಹೀಗೆ ಎರಡೂ ಕಡೆಯಿಂದಲೂ ಅಸ್ಪೃಶ್ಯತೆ ವಿರುದ್ದವಾಗಿ ಚಳವಳಿ ಆರಂಭವಾಯಿತು. ಮಹಾತ್ಮ ಜ್ಯೋತಿ ಫುಲೆ, ಸಂತ ನಾರಾಯಣ ಗುರು, ಪೆರಿಯಾರ್ ಇವಿ ರಾಮಸ್ವಾಮಿ ನಾಯ್ಕರ್, ಮಹಾತ್ಮಗಾಂಧಿ, ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಾಯಕತ್ವದಲ್ಲಿ ಈ ಆಂದೋಲನ ನಡೆಯಿತು.

4) ಗುಲಾಮರ ಒಡೆತನದ ಬಗೆಗಿನ ಬೇಡಿಕೆಗಳನ್ನು ನಾಗರಿಕ ನ್ಯಾಯಾಲಯಗಳು ಗಮನಕ್ಕೆ ತೆಗೆದುಕೊಳ್ಳಬಾರದೆಂದು 1843ರ ಕಾಯ್ದೆಯ ಮೇರೆಗೆ ಅವಕಾಶ ಕಲ್ಪಿಸಲಾಯಿತು. ಈ ಕ್ರಮದಿಂದ ದಾಸ್ಯತ್ವದ ಮೇಲಿನ ಒಡೆತನದ ಹಕ್ಕು ನಷ್ಟವಾಯಿತು ಹಾಗೂ ಸಾಮಾಜಿಕ ಅನಿಷ್ಟ ಸಂಪ್ರದಾಯವನ್ನು ಉಚ್ಚಾಟನೆ ಮಾಡುವುದಕ್ಕೆ ಹಾದಿಯನ್ನು ಹಾಕಿಕೊಟ್ಟಿತು.

ಮೇಲಿನ ಯಾವೆಲ್ಲಾ ಹೇಳಿಕೆಗಳು ತಪ್ಪಾಗಿವೆ?

ಎ) ಹೇಳಿಕೆ 1 ರಿಂದ 3ರ ತನಕ ಮಾತ್ರ ತಪ್ಪಾಗಿವೆ

ಬಿ) ಹೇಳಿಕೆ 1, 3 ಮತ್ತು 4 ಮಾತ್ರ ತಪ್ಪಾಗಿವೆÉ

ಸಿ) ಹೇಳಿಕೆ 2 ಮತ್ತು 3 ಮಾತ್ರ ತಪ್ಪಾಗಿವೆ ಡಿ) ಯಾವ ಹೇಳಿಕೆಯೂ ತಪ್ಪಾಗಿಲ್ಲ

ಉತ್ತರ:- ಡಿ

7) ರಾಯಿ ಸಾಹೇಬ ಹರವಿಲಾಸ ಶಾರದಾ ಅವರ ಹೆಸರಿನಿಂದಲೇ ಪ್ರಸಿದ್ಧಿ ಪಡೆದ ‘ಶಾರದಾ ವಿಧೇಯಕ’ ಎಂಬ ಬಾಲವಿವಾಹ ಪ್ರತಿಬಂಧಕ ಕಾಯ್ದೆಯು …………………….ರಲ್ಲಿ ಅಂಗೀಕೃತವಾಯಿತು. ವಧುವಿನ ವಯಸ್ಸು ಹದಿನಾಲ್ಕಕ್ಕಿಂತ ಕಡಿಮೆ ಮತ್ತು ವರನ ವಯಸ್ಸು ಹದಿನೆಂಟಕ್ಕಿಂತ ಕಡಿಮೆ ಇದ್ದ ಮದುವೆಗೆ ಕಾರಣರಾದವರನ್ನು ಶಿಕ್ಷಿಸುವಂತೆ ಇದರಲ್ಲಿ ವಿಧಿಸಲಾಗಿದ್ದಿತ್ತು

ಎ) 1939 ಬಿ)1929

ಸಿ)1940 ಡಿ) 1945

ಉತ್ತರ:- ಬಿ

8) ಭಾರತ ಸಂವಿಧಾನ ಯಾವ ಆರ್ಟಿಕಲ್, ನಮ್ಮ ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಆಚರಿಸುವುದು ಅಪರಾಧ ಎಂದು ಘೋಷಿಸುತ್ತದೆ ಹಾಗೂ ಅಸ್ಪೃಶ್ಯತೆಯನ್ನು ನಿಷೇಧಿಸುತ್ತದೆ?

ಎ) 19 ಬಿ) 30

ಸಿ) 17 ಡಿ) 27

ಉತ್ತರ:- ಸಿ

9) ವಿಧವಾ ಪುನರ್ವಿವಾಹ ಬಗ್ಗೆ ರಾಮಮೋಹನ ರಾಯ್ ಅವರು ಆಂದೋಲನ ಆರಂಭಿಸಿದ್ದರು. ಈಶ್ವರಚಂದ್ರ ವಿದ್ಯಾಸಾಗರ ಅವರು ತೀವ್ರ ಪ್ರಯತ್ನದಿಂದ. ‘ಹಿಂದೂ ವಿಧವೆಯ ಪುನರ್ವಿವಾಹ ಕಾಯ್ದೆ’ಯನ್ನು 1856ರಲ್ಲಿ ಅಂಗೀಕರಿಸಲಾಯಿತು. ಹಾಗಾದರೆ ಈ ಕೆಳಗಿನ ಯಾವ ಸ್ಥಳದಲ್ಲಿ ಹಿಂದು ವಿಧವಾ ಸುಧಾರಣಾ ಲೀಗ್ ಸ್ಥಾಪಿಸಿ ಹೋರಾಟ ಮಾಡಲಾಗಿತ್ತು?

ಎ) ಚಂಡಿಗಢ ಬಿ) ಲಖನೌ

ಸಿ) ಭುವನೇಶ್ವರ ಡಿ) ಮೈಸೂರು

ಉತ್ತರ:- ಬಿ

10) ಕೇಳಗಿನ ಹೇಳಿಕೆಗಳನ್ನು ಗಮನಿಸಿ

1) ಬ್ರಿಟಿಷ್ ಅಧಿಕಾರಿ ಸರ್ ಬಾರ್ಟರ್ ಫ್ರೆರೆ ಪ್ರಕಾರ ಬ್ರಿಟಿಷ್ ಭಾರತದಲ್ಲಿ(ಬ್ರಿಟಿಷ್ ಇಂಡಿಯಾದಲ್ಲಿ) 8 ರಿಂದ 9 ದಶಲಕ್ಷ ಜನರು ದಾಸ್ಯಕ್ಕೆ ಒಳಗಾಗಿ ದುಡಿಯುತ್ತಿದ್ದರು.

2) ಬ್ರಿಟಿಷ್ ಕಾಲದಲ್ಲಿ ಕೊಲ್ಕತ್ತಾದಂತಹ ಕಡೆಗಳಲ್ಲಿ ಬೀದಿ ಬೀದಿಯಲ್ಲಿ ಕೂಗಿ ಕೂಗಿ ಮಕ್ಕಳನ್ನು ಮಾರಾಟ ಮಾಡಲಾಗುತ್ತಿತ್ತು. ಗುಲಾಮರನ್ನು ಒಂದು ಜಿಲ್ಲೆಯಿಂದ ಖರೀದಿಸಿ ತಂದು ಇನ್ನೊಂದು ಜಿಲ್ಲೆಯಲ್ಲಿ ಮಾರಾಟ ಮಾಡಲಾಗುತಿತ್ತು

3) ಸಾಲ ತೀರಿಸದ ಕಾರಣಕ್ಕಾಗಿ ಜೀತ ಮಾಡುತ್ತಿದ್ದವವರೂ ಸೇರಿದಂತೆ ಇತರ ಕಾರಣಗಳಿಗಾಗಿ ದಾಸ್ಯತ್ವದಿಂದ ಬದುಕುತ್ತಿದ್ದ 1200 ಜನರನ್ನು ಬ್ರಿಟಿಷರು ಅಸ್ಸಾಂನ ಕಾಮರೂಪದಿಂದ ಮುಕ್ತರನ್ನಾಗಿ ಮಾಡಿದ ಅಂಶ ಬ್ರಿಟಿಷ್ ದಾಖಲೆಗಳಿಂದ ತಿಳಿದು ಬರುತ್ತದೆ.

4) ರಾಜಮನೆತನಗಳ ದಬ್ಬಾಳಿಕೆಯಿಂದ ರಾಜಪುಟಾಣದಿಂದ ಬಂದ ಜನರನ್ನು ಪುಣೆ ಮತ್ತು ದಕ್ಷಿಣ ಭಾರತಕ್ಕೆ ನಿರ್ಯಾತ ಮಾಡಲಾಗುತ್ತಿತ್ತು. ಆ ಪ್ರದೇಶದಲ್ಲಿ ಬೆಲೆಯೂ ಹೆಚ್ಚಾಗಿತ್ತು. ಹೀಗಾಗಿ, ಆ ವ್ಯಾಪಾರದಲ್ಲಿ ತೊಡಗಿದ್ದ ಮರಾಠ ಬ್ರಾಹ್ಮಣರಿಗೆ ಲಾಭವಾಗುತಿತ್ತು.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ) ಹೇಳಿಕೆ 1, 2 ಮತ್ತು 4 ಮಾತ್ರ ಸರಿಯಾಗಿವೆ.

ಬಿ) ಹೇಳಿಕೆ 3 ಮತ್ತು 4 ಮಾತ್ರ ಸರಿಯಾಗಿವೆ.

ಸಿ) ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿವೆ

ಡಿ) ಹೇಳಿಕೆ 1ರಿಂದ 4ರ ತನಕ ಎಲ್ಲವೂ ಸರಿಯಾಗಿವೆ.

ಉತ್ತರ:- ಡಿ

ಮಾಹಿತಿ :- YouTube Chanel :-ಸ್ಪರ್ಧಾ ಭಾರತಿ, ಯುಪಿಎಸ್‌ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT