ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಸಮರ್ಥ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ: ಗ್ರೂಪ್-ಸಿ

ಗ್ರೂಪ್-ಸಿ ತಾಂತ್ರಿಕೇತರ ಹುದ್ದೆ ಸ್ಪರ್ಧಾತ್ಮಕ ಪರೀಕ್ಷೆ
Last Updated 20 ಅಕ್ಟೋಬರ್ 2021, 20:30 IST
ಅಕ್ಷರ ಗಾತ್ರ

ಕರ್ನಾಟಕ ಲೋಕ ಸೇವಾ ಆಯೋಗವು ಗ್ರೂಪ್ ಸಿ ವೃಂದದ ತಾಂತ್ರಿಕೇತರ ಹುದ್ದೆಗಳಿಗೆ ಸದ್ಯದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಜ್ಞಾನ ವಿಭಾಗದಲ್ಲಿರುವ ‘ಕರ್ನಾಟಕದ ಸಮರ್ಥ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ’ ವಿಭಾಗದಲ್ಲಿರುವ ವಿಷಯದ ಕುರಿತಾದ ಬಹು ಆಯ್ಕೆ ಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದೆ.

1. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ವಿಶ್ವದ ಮೊದಲ ಸ್ಥಾನದಲ್ಲಿರುವ 500 ಫಾರ್ಚೂನ್ ಕಂಪನಿಗಳ ಪೈಕಿ 400ಕ್ಕೂ ಹೆಚ್ಚು ಕಂಪನಿಗಳು ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿರುವ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಹೊರಗುತ್ತಿಗೆಯನ್ನು ನೀಡುತ್ತಿವೆ.

2. ಕರ್ನಾಟಕವು ಭಾರತದಲ್ಲಿಯೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಮಾಡುವ ರಾಜ್ಯವಾಗಿದ್ದು ದೇಶದ ಒಟ್ಟಾರೆ ಸಾಫ್ಟ್‌ವೇರ್ ರಫ್ತಿಗೆ ಮೂರನೇ ಒಂದರಷ್ಟು ಕೊಡುಗೆಯನ್ನು ನೀಡುತ್ತಿದೆ.

3. ಕರ್ನಾಟಕವು ಜಗತ್ತಿನಲ್ಲಿಯೇ 4ನೇ ದೊಡ್ಡ ತಂತ್ರಜ್ಞಾನ ಸಮೂಹವಾಗಿದೆ.

4. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲದೇ ಕಾರ್ಪೊರೇಟ್ ವಲಯದ 400 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ನಮ್ಮ ರಾಜ್ಯದಲ್ಲಿವೆ. ಅವು ವಿಜ್ಞಾನ ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೆ ಕೊಡುಗೆ ನೀಡುತ್ತಿವೆ.

5. ಕರ್ನಾಟಕವು ದೇಶದಲ್ಲಿಯೇ 2ನೇ ಅತಿದೊಡ್ಡ ಚಿಪ್‌ ವಿನ್ಯಾಸ ಕೇಂದ್ರವಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. 1ರಿಂದ 4ರತನಕ ಎಲ್ಲವೂ ಸರಿಯಾಗಿದೆ. ಆದರೆ 5ನೇ ಹೇಳಿಕೆ ಮಾತ್ರ ತಪ್ಪಾಗಿದೆ.

ಬಿ. ಹೇಳಿಕೆ 1, 2, 4 ಮತ್ತು 5 ಮಾತ್ರ ಸರಿಯಾಗಿದೆ

ಸಿ. ಹೇಳಿಕೆ 1ರಿಂದ 5ರತನಕ ಎಲ್ಲವೂ ಸರಿಯಾಗಿದೆ

ಡಿ. ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ: ಸಿ

2. ಬ್ರೆಜಿಲ್ ದೇಶದಲ್ಲಿ ಪಿಡಿಪಿಯು ಆರೋಗ್ಯ ಕ್ಷೆತ್ರದಲ್ಲಿ ಬಹಳದೊಡ್ಡ ಕ್ರಾಂತಿಯನ್ನೇ ಮಾಡಿದೆ. ಇದನ್ನು ನಮ್ಮ ರಾಜ್ಯದಲ್ಲಿಯೂ ಅಳವಡಿಸುವಂತೆ ರಾಜ್ಯ ಸರ್ಕಾರ ಪ್ರಕಟಿಸಿದ ‘ಕರ್ನಾಟಕ ಇನೊವೇಷನ್ ವಿಷನ್-2030’ ಕರೆಕೊಟ್ಟಿದೆ. ಹಾಗಾದರೆ ಪಿಡಿಪಿ ಎಂದರೆ ……………

ಎ. ಪ್ರಾಡಕ್ಟಿವ್ ಡೆವಲಪ್‌ಮೆಂಟ್ ಪಾರ್ಟನರ್‌ಶಿಪ್‌

ಬಿ. ಪರ್ಸನಲ್ ಡೆವಲಪ್‌ಮೆಂಟ್ ಪಾರ್ಟನರ್‌ಶಿಪ್‌

ಸಿ. ಪ್ರೈವೇಟ್ ಡೆವಲಪ್‌ಮೆಂಟ್ ಪಾರ್ಟನರ್‌ಶಿಪ್‌

ಡಿ. ಮೇಲಿನ ಯಾವುದೂ ಅಲ್ಲ

ಉತ್ತರ:ಎ (ವಿವರಣೆ: ಖಾಸಗಿ ಕಂಪನಿಗಳು ತಾಂತ್ರಿಕತೆಯನ್ನು ನೀಡಿದರೆ ಅದನ್ನು ಬಳಸಿ ಸರ್ಕಾರಿ/ ಸಾರ್ವಜನಿಕ ಏಜೆನ್ಸಿಗಳು ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೇ ಅಂತಿಮವಾಗಿ ತಲುಪಬೇಕಾದ ಜನರಿಗೆ ತಲುಪಿಸುವ ವ್ಯವಸ್ಥೆಯೇ ಪಿಡಿಪಿ)

3. ವರ್ಲ್ಡ್‌ ಎಕಾನಾಮಿಕ್ ಫೋರಂ ನೀಡಿರುವ ಅಂಕಿಅಂಶಗಳ ಪ್ರಕಾರ 50 ಮಿಲಿಯನ್ ಯೂಸರ್ ಅಥವಾ ಗ್ರಾಹಕರನ್ನು ತಲುಪಲು ವಿಮಾನಯಾನ ಕೈಗಾರಿಕೆ 68 ವರ್ಷಗಳನ್ನು, ಆಟೊಮೊಬೈಲ್ ಕೈಗಾರಿಕೆ 62 ವರ್ಷಗಳನ್ನು, ದೂರವಾಣಿ/ ಟೆಲಿಫೋನ್ ಕೈಗಾರಿಕೆ 50 ವರ್ಷಗಳನ್ನು ಹಾಗೂ ಎಲೆಕ್ಟ್ರಿಸಿಟಿ 46 ವರ್ಷಗಳನ್ನು ತೆಗೆದುಕೊಂಡರೆ ತಂತ್ರಜ್ಞಾನ ಹಾಗೂ ಇನೊವೇಷನ್ ಕಾರಣದಿಂದಾಗಿ ಅದೇ 50 ಮಿಲಿಯನ್ ಗ್ರಾಹಕರನ್ನು ತಲುಪಲು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಕೇವಲ …………… ವರ್ಷಗಳನ್ನು ತೆಗೆದುಕೊಂಡಿತು ಅಂದರೆ ತಂತ್ರಜ್ಞಾನ ಯಾವ ರೀತಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂಬುದು ತಿಳಿಯುತ್ತದೆ.

ಎ. 5 ಬಿ. 10 ಸಿ. 8 ಡಿ. 3

ಉತ್ತರ: ಡಿ

4. ಕರ್ನಾಟಕ ಸರ್ಕಾರ ಪ್ರಕಟಿಸಿದ ‘ಇನೊವೇಷನ್ ವಿಷನ್-2030’ ಪ್ರಕಾರ ಸ್ಟಾರ್ಟ್ಅಪ್ ಇಕೋಸಿಸ್ಟಮ್ ಬೆಳೆಸುವಲ್ಲಿ ಜಗತ್ತಿನಲ್ಲಿ ನಮ್ಮ ಬೆಂಗಳೂರು (2021ರಲ್ಲಿ) ಯಾವ ಸ್ಥಾನದಲ್ಲಿದೆ ?

ಎ. 23ನೇ ಸ್ಥಾನ ಬಿ. 50ನೇ ಸ್ಥಾನ

ಸಿ. 78ನೇ ಸ್ಥಾನ ಡಿ. 12ನೇ ಸ್ಥಾನ

ಉತ್ತರ: ಎ

5. ಬೆಂಗಳೂರಿನ ನಾಗರಿಕರಿಗೆ, ವಿದ್ಯುತ್ ಬಿಲ್ ಪಾವತಿ, ದೂರವಾಣಿ ಬಿಲ್ ಪಾವತಿ, ದೂರಶಿಕ್ಷಣಕ್ಕೆ ಅರ್ಜಿ ಸಲ್ಲಿಸುವಿಕೆ, ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವಿಕೆ, ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿ ಹೀಗೆ ವಿವಿಧ ಸರ್ಕಾರಿ ಯೋಜನೆಯಲ್ಲಿ ಭಾಗವಹಿಸಲು ಹಾಗೂ ಅದರ ಪ್ರಯೋಜನವನ್ನು ಪಡೆಯಲು ಅನುಕೂಲವಾಗುವಂತೆ ………………ರಲ್ಲಿ ‘ಬೆಂಗಳೂರು ಒನ್’ ಸೇವೆಯನ್ನು ಆರಂಭಿಸಲಾಯಿತು.

ಎ. 2 ಏಪ್ರಿಲ್ 2005 ಬಿ. 2 ಅಕ್ಟೋಬರ್ 2006

ಸಿ. 26 ಜನವರಿ 2008 ಡಿ. 9 ಮಾರ್ಚ್ 2004

ಉತ್ತರ: ಎ

6. ‘ಬೆಂಗಳೂರು ಒನ್’ ಯಶಸ್ಸು ಪಡೆದ ಹಿನ್ನೆಲೆಯಲ್ಲಿ 2010ರಲ್ಲಿ ‘ಕರ್ನಾಟಕ ಒನ್’ ಎಂಬ ಸೇವಾ ಯೋಜನೆಯನ್ನು ಆರಂಭಿಸಲಾಯಿತು. ನಮ್ಮ ಕರ್ನಾಟಕದಲ್ಲಿ ಈಗ ಎಷ್ಟು ನಗರಗಳಲ್ಲಿ ಈ ಸೇವೆಯನ್ನು ಒದಗಿಸಲಾಗುತ್ತಿದೆ?

ಎ. 12 ಬಿ. 9 ಸಿ. 18ಡಿ. 8

ಉತ್ತರ: ಬಿ

7. ಜಿಲ್ಲೆಯ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಹಲವಾರು ಸೇವೆಗಳನ್ನು ನಾಗರಿಕರಿಗೆ ತಡೆರಹಿತವಾಗಿ ನೀಡಲು ಅನುವಾಗಲು ಮತ್ತು ಇಲಾಖೆಗಳ ದಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಈ ಕೆಳಗಿನ ಯಾವುದು ಕೆಲಸ ಮಾಡುತ್ತಿದೆ?

ಎ. ಸೇವಾ ಸಿಂಧು ಯೋಜನೆ
ಬಿ. ಭೂಮಿ ಸಿ. ಇ-ಸ್ಪಂದನಾ
ಡಿ. ಮಾಹಿತಿ ಕಣಜ

ಉತ್ತರ: ಎ

8. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ನಾಗರಿಕರು ವಿವಿಧ ಇಲಾಖೆಗಳ ಸೇವೆಯನ್ನು ಪಡೆಯಲು ಸೇವಾ ಸಿಂಧು ಅಂತರ್‌ಜಾಲ ತಾಣವು ಏಕರೂಪ ವೇದಿಕೆಯನ್ನು ಸೃಷ್ಟಿಸುತ್ತದೆ.

2. ನಮ್ಮ ರಾಜ್ಯದಲ್ಲಿ ಇಲ್ಲಿಯ ತನಕ 1,12,000 ವ್ಯವಹಾರಗಳನ್ನು ಸೇವಾ ಸಿಂಧು ಅಂತರ್ಜಾಲದ ತಾಣದ ಮೂಲಕ ಯಶಸ್ವಿಯಾಗಿ ಮಾಡಲಾಗಿದೆ.

3. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಔಷಧ ನಿಯಂತ್ರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಯೋಜನಾ ಇಲಾಖೆ ಸೇರಿದಂತೆ 18 ಸೇವೆಗಳನ್ನು ಸೇವಾ ಸಿಂಧು ಅಂತರ್ಜಾಲ ತಾಣಕ್ಕೆ ಸಂಯೋಜಿಸಲಾಗಿದೆ.

4. ನಾಗರಿಕರು ಕಚೇರಿಯ ಸಮಯದ ಹೊರತಾಗಿಯೂ ತಮಗೆ ಅನುಕೂಲವಾದ ಸಮಯದಲ್ಲಿ ಸರ್ಕಾರಿ ಸೇವೆಗಳನ್ನು ಪಡೆಯಲು ಸೇವಾ ಸಿಂಧು ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ.1 ರಿಂದ 4ರತನಕ ಎಲ್ಲವೂ ಸರಿಯಾಗಿದೆ

ಬಿ. ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಸಿ. ಹೇಳಿಕೆ 1ರಿಂದ 3ರ ತನಕ ಎಲ್ಲವೂ ಸರಿಯಾಗಿದೆ ಆದರೆ 4ನೇ ಹೇಳಿಕೆ ಮಾತ್ರ ತಪ್ಪಾಗಿದೆ

ಡಿ. ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ: ಎ

9. ಸರ್ಕಾರದ ಸೇವೆಗಳನ್ನು ತಮ್ಮ ಅನುಕೂಲವಾದ ಸಮಯಕ್ಕೆ ನಾಗರಿಕರು ಪಡೆಯಲು ನೆರವಾಗುವ ‘ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ಗಳು ಯಾವ ಹಂತದಲ್ಲಿ ಕಾರ್ಯನಿರ್ವಹಿಸುತ್ತವೆ?

ಎ. ಜಿಲ್ಲಾ ಮಟ್ಟದ ಹಂತದಲ್ಲಿ
ಬಿ. ತಾಲ್ಲೂಕು ಮಟ್ಟದ ಹಂತದಲ್ಲಿ

ಸಿ. ಗ್ರಾಮ ಮಟ್ಟದ ಹಂತದಲ್ಲಿ
ಡಿ. ರಾಜ್ಯ ಮಟ್ಟದ ಹಂತದಲ್ಲಿ

ಉತ್ತರ: ಸಿ

10. ನಮ್ಮ ರಾಜ್ಯದಲ್ಲಿ ಸಲ್ಲಿಕೆಯಾಗುವ ‘ಸಕಾಲ’ ಅರ್ಜಿಗಳ ಪೈಕಿ ಶೇ ಎಷ್ಟು ಅರ್ಜಿ ಆನ್‌ಲೈನ್ ಮೂಲಕ ಸಲ್ಲಿಕೆಯಾಗುತ್ತಿವೆ?

ಎ. ಶೇ 54ಬಿ. ಶೇ 81 ಸಿ. ಶೇ 64ಡಿ. ಶೇ 24

ಉತ್ತರ: ಬಿ

11. ತಂತ್ರಜ್ಞಾನದ ಸಹಾಯ ಹಾಗೂ ಅಧಿಕಾರಿ ವರ್ಗದ ಸಹಕಾರದಿಂದ ಜಾರಿಗೆ ಬರಲಿರುವ ‘ಜನಸೇವಕ’ ಯೋಜನೆಯ ಕುರಿತಾದ ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಕರ್ನಾಟಕ ಸರ್ಕಾರದ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ಒಯ್ಯುವ ಜನ ಸೇವಕ ಕಾರ್ಯಕ್ರಮ ಜಾರಿಗೆ ತರಲು ನಮ್ಮ ರಾಜ್ಯ ಸರ್ಕಾರ ಮುಂದಾಗಿದೆ.

2. 2021ರ ನವೆಂಬರ್ 1ರಿಂದ ಬೆಂಗಳೂರಿನ 28 ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನಸೇವಕ ಯೋಜನೆ ಸಿಗಲಿದೆ. 2022ರ ಜನವರಿ 26ರಿಂದ ನಮ್ಮ ರಾಜ್ಯದಲ್ಲಿರುವ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಲಭ್ಯವಾಗಲಿದೆ.

3. ಗ್ರಾಹಕರಿಗೆ ತಲುಪಬೇಕಾದ ರೇಷನ್, ಸಾಮಾಜಿಕ ಭದ್ರತೆ ಯೋಜನೆಗಳು, ಗ್ರಾಮದ ನಾಗರಿಕರ ಮನೆ ಬಾಗಿಲಿಗೆ ತಲುಪಿಸುವ, ಆರೋಗ್ಯ ತಪಾಸಣೆ ಮನೆ ಬಾಗಿಲಿನಲ್ಲೇ ಆಗುವಂತೆ ನೋಡಿಕೊಳ್ಳುವ ಯೋಜನೆಯೇ ಜನಸೇವಕ ಯೋಜನೆಯಾಗಿದೆ.

4. ಆದಾಯ ಪ್ರಮಾಣ ಪತ್ರದಿಂದ ಹಿಡಿದು ಎಲ್ಲಾ ತರಹದ ಪ್ರಮಾಣಪತ್ರಗಳು ಗ್ರಾಮ ಪಂಚಾಯ್ತಿಯಲ್ಲೇ ಸಿಗುವಂತೆ ಮಾಡುವ ಮಹತ್ವದ ಗುರಿ ಜನಸೇವಕ ಯೋಜನೆಯಲ್ಲಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. 1ರಿಂದ 4ರ ತನಕ ಎಲ್ಲವೂ ತಪ್ಪಾಗಿದೆ
ಬಿ. ಹೇಳಿಕೆ 1, 2 ಮತ್ತು 4 ಮಾತ್ರ ಸರಿಯಾಗಿದೆ

ಸಿ. ಹೇಳಿಕೆ 1, 2, 3ರ ಮಾತ್ರ ಸರಿಯಾಗಿದೆ
ಡಿ. 1 ರಿಂದ 4ರ ತನಕ ಎಲ್ಲಾ ಹೇಳಿಕೆಗಳು ಸರಿಯಾಗಿವೆ

ಉತ್ತರ: ಡಿ

12. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಕರ್ನಾಟಕ ಸರ್ಕಾರ ಪ್ರಕಟಿಸಿದ ‘ಇನೊವೇಷನ್ ವಿಷನ್-2030’ ಪ್ರಕಾರ ಸ್ಟಾರ್ಟ್ ಅಪ್ ಇಕೋಸಿಸ್ಟಮ್ ಬೆಳೆಸುವಲ್ಲಿ ಜಗತ್ತಿನಲ್ಲಿ ನಮ್ಮ ಬೆಂಗಳೂರು 2021ರಲ್ಲಿ 23ನೇ ಸ್ಥಾನದಲ್ಲಿದೆ.

2. ಗ್ಲೋಬಲ್ ಇನೋವೇಷನ್‌ ಇಂಡೆಕ್ಸ್ 2021ರ ಪ್ರಕಾರ ನಮ್ಮ ಬೆಂಗಳೂರು ವಿಶ್ವ ಟಾಪ್ 100 ಸೈನ್ಸ್ ಎಂಡ್ ಟೆಕ್ನಾಲಜಿ ಕ್ಲಸ್ಟರ್‌ಗಳಲ್ಲಿ 62ನೇ ಸ್ಥಾನವನ್ನು ಪಡೆದಿದೆ

3. ಕರ್ನಾಟಕವು ಭಾರತದ ಅತಿದೊಡ್ಡ ಬಯೋಟೆಕ್ ಹಬ್ ಆಗಿದ್ದು ನಮ್ಮ ರಾಜ್ಯದಲ್ಲಿ 100ಕ್ಕೂ ಹೆಚ್ಚು ಮೆಡಿಕಲ್ ಸ್ಟಾರ್ಟ್‌ ಅಪ್‌ಗಳಿವೆ. ಎಂಬುದು ಖುಷಿಯ ಸಂಗತಿಯಾಗಿದೆ.

4. ಕರ್ನಾಟಕವು ಇಸ್ರೇಲ್ ದೇಶದೊಡನೆ ಒಪ್ಪಂದ ಮಾಡಿಕೊಂಡಿದ್ದು ಇದರ ಮೂಲಕ ಇಸ್ರೇಲ್ ದೇಶದ ಪ್ರಮುಖ ಕಂಪನಿಗಳೊಡನೆ ಸೇರಿಕೊಂಡು ಕೈಗಾರಿಕಾ ಕ್ಷೇತ್ರದಲ್ಲಿ ರೀಸರ್ಚ್ ಎಂಡ್ ಡೆವಲಪ್‌ಮೆಂಟ್ ಮಾಡಲು ಹೊಸ ಅವಕಾಶವನ್ನು ಕಲ್ಪಿಸಲಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. 1 ರಿಂದ 4ರತನಕ ಎಲ್ಲವೂ ಸರಿಯಾಗಿದೆ
ಬಿ. ಹೇಳಿಕೆ 1, 2 ಮತ್ತು 3 ಮಾತ್ರ ಸರಿಯಾಗಿದೆ

ಸಿ. ಹೇಳಿಕೆ 1, 2, 4 ಮಾತ್ರ ಸರಿಯಾಗಿದೆ
ಡಿ. 1 ರಿಂದ 4ರ ತನಕ ಎಲ್ಲವೂ ತಪ್ಪಾಗಿವೆ

ಉತ್ತರ: ಎ

ಮಾಹಿತಿ : Spardha Bharati UPSC
ಯೂಟ್ಯೂಬ್‌ ಚಾನೆಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT