ತತ್ವಶಾಸ್ತ್ರ ಎನ್ನುವುದು ಎಲ್ಲ ವಿಷಯಗಳನ್ನು ಅರ್ಥಮಾಡಿಕೊಳ್ಳಲೂ ಬೇಕಾದಂಥ ಅರಿವಿನ ಸಲಕರಣೆ. ಒಂದು ವಿಷಯದ ಆಳಕ್ಕೆ ಹೋದಂತೆಲ್ಲ ತತ್ವಶಾಸ್ತ್ರದ ಅನಿವಾರ್ಯತೆ ಹೆಚ್ಚುತ್ತಹೋಗುತ್ತದೆ.

ಪಾಶ್ಚಾತ್ಯ ತತ್ವಶಾಸ್ತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಲ್ಲಿಯ ತತ್ವಶಾಸ್ತ್ರಕ್ಕೂ ವಿಜ್ಞಾನದ ಬೆಳವಣಿಗೆಗೂ ನೇರವಾದ ಸಂಬಂಧವಿದೆ. ಹೀಗಾಗಿ ವಿಜ್ಞಾನದ ಇತಿಹಾಸವನ್ನು ತಿಳಿಯಬೇಕಾದರೆ ಪಾಶ್ಚಾತ್ಯ ತತ್ವಶಾಸ್ತ್ರವನ್ನು ತಿಳಿದುಕೊಳ್ಳಬೇಕಾಗುತ್ತದೆ. ಆದರೆಪಾಶ್ಚಾತ್ಯ ತತ್ವಶಾಸ್ತ್ರವನ್ನು ತಿಳಿದುಕೊಳ್ಳುವುದು ಸುಲಭವೇನಲ್ಲ.

ಏಕೆಂದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಆ ಪರಂಪರೆಯಲ್ಲಿ ನೂರಾರು ತತ್ವಜ್ಞಾನಿಗಳು ಆಗಿಹೋಗಿದ್ದಾರೆ; ಅವರ ಹತ್ತಾರು ಸಿದ್ಧಾಂತಗಳು ಅಲ್ಲಿಯ ಜನರ ಮೇಲೆ ಪ್ರಭಾವವನ್ನು ಬೀರಿವೆ. ಗ್ರೀಕ್ ತತ್ವಜ್ಞಾನದಿಂದ ಮೊದಲುಗೊಂಡು ಇಂದಿನವರೆಗೂ ಅವು ಬೇರೆ ಬೇರೆ ರೂಪಗಳಲ್ಲಿ, ನೆಲೆಗಳಲ್ಲಿ ಪ್ರಕಟವಾಗಿವೆ.

ಹೀಗಿರುವಾಗ ಒಟ್ಟುಪಾಶ್ಚಾತ್ಯ ತತ್ವಶಾಸ್ತ್ರವನ್ನು ಸುಲಭವಾಗಿ ತಿಳಿದುಕೊಳ್ಳುವುದು ಹೇಗೆ – ಎನ್ನುವ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಉತ್ತರವಾಗಿ ಮಾರ್ಕಸ್ ವೀಕ್ಸ್ ಅವರ ‘ಗೆಟ್ ಸ್ಮಾರ್ಟ್: ಫಿಲಾಸಫಿ’ ನಮ್ಮ ನೆರವಿಗೆ ಬರುತ್ತದೆ.ಪಾಶ್ಚಾತ್ಯ ತತ್ವಶಾಸ್ತ್ರವನ್ನು ಸುಲಭವಾಗಿ ತಿಳಿದುಕೊಳ್ಳಲು ಈ ಕೃತಿ ನೆರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.