ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ.ಐ ನಡೆ ಉದ್ಯೋಗದ ಕಡೆ

Published 26 ಮೇ 2024, 22:08 IST
Last Updated 26 ಮೇ 2024, 22:08 IST
ಅಕ್ಷರ ಗಾತ್ರ

ಕರ್ನಾಟಕ ಪರೀಕ್ಷಾ ಮಂಡಳಿ 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದು, ಮಕ್ಕಳ ಮುಂದಿನ ವಿದ್ಯಾಭ್ಯಾಸವನ್ನು ಕೌಶಲಧಾರಿತ ಶಿಕ್ಷಣದತ್ತ ಹರಿಸಿ ಉದ್ಯೋಗದ ಬೆಳಕನ್ನು ಚೆಲ್ಲಲು ಈ ಲೇಖನ ಕೇಂದ್ರೀಕರಿಸುತ್ತದೆ.

ಮಕ್ಕಳು ಯಾವುದೇ ವಿದ್ಯಾಭ್ಯಾಸ ಮಾಡಿದರು ಜೀವನಕ್ಕೆ ಹಾಗೂ ಕುಟುಂಬ ನಿರ್ವಹಣೆಗೆ ಉದ್ಯೋಗ ಅತೀ ಮುಖ್ಯವಾಗಿರುತ್ತದೆ. ಅಲ್ಪಾವಧಿಯಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಇತರೆ ಶಿಕ್ಷಣಕ್ಕಿಂತ ಕೈಗಾರಿಕಾತರಬೇತಿ ಸಂಸ್ಥೆಗಳಲ್ಲಿನ (ಐ.ಟಿ.ಐ) ಕೌಶಲಧಾರಿತ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. ಐ.ಟಿ.ಐ ತರಬೇತಿಯಲ್ಲಿ ಪ್ರಾಯೋಗಿಕಾ ಪಾಠಕ್ಕೆ ಪ್ರಾಮುಖ್ಯತೆ ಇದ್ದು, ಕೌಶಲದಲ್ಲಿ ನಿಪುಣತೆ ಹೊಂದಲು ಸಾಧ್ಯವಾಗುತ್ತದೆ.

ನಿಪುಣತೆ ಹೊಂದಿದ ಯುವಜನತೆಗೆ ಸಾರ್ವಜನಿಕ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ತುಂಬಾ ಬೇಡಿಕೆಯುಂಟು. ಕೈಗಾರಿಕಾ
ಉತ್ಪಾದನೆಗೆ ಸಂಪನ್ಮೂಲಗಳಾದ, ಮಾನವ ಸಂಪನ್ಮೂಲ, ಯಂತ್ರೋಪಕರಣ ಹಾಗೂ ಸಾಮಾಗ್ರಿ ಅದರಲ್ಲೂ ಮಾನವ
ಸಂಪನ್ಮೂಲ ಅತಿ ಮುಖ್ಯವಾದುದು. ಭಾರತವು ಅತೀಹೆಚ್ಚು ಮಾನವ ಸಂಪನ್ಮೂಲ ರಾಷ್ಟವಾಗಿದ್ದು, ಇಲ್ಲಿನ
ಯುವಕೌಶಲ್ಯ, ತಂತ್ರಜ್ಞಾನ ಜಗತ್ತಿನಾದ್ಯಂತ ಪ್ರಖ್ಯಾತಿಯನ್ನು ಹೊಂದಿದೆ. ಸಂಪನ್ಮೂಲ ಹಾಗೂ ಸಾಮರ್ಥ್ಯ ಕ್ರೋಡಿಕರಿಸಲು ಹಾಗೂ ಮಹಿಳೆಯರನ್ನು ಸ್ವಾವಲಂಭಿಗೊಳಿಸಲು ಐ.ಟಿ.ಐ ಶಿಕ್ಷಣವು ದೇಶದ ಪ್ರಗತಿಗೆ ಮುಖ್ಯಪಾತ್ರವನ್ನು ವಹಿಸುತ್ತದೆ.

ಐ.ಟಿ.ಐ ತರಬೇತಿ, ಕುಶಲ ತರಬೇತಿ ಯೋಜನೆಯಡಿ ಇಂಜಿನಿಯರಿಂಗ್ ಮತ್ತು ನಾನ್‌-ಇಂಜಿನಿಯರಿಂಗ್
ವಿಭಾಗಗಳಲ್ಲಿ 06 ತಿಂಗಳ, 01 ಮತ್ತು 02 ವರ್ಷದ ತರಬೇತಿ ಜೊತೆಗೆ ಅಲ್ಪಾವಧಿ ತರಬೇತಿಗಳನ್ನು
ಉದ್ಯೋಗಾವಕಾಶಕ್ಕಾಗಿ ಕಲ್ಪಿಸಲಾಗಿದೆ. ಮಹಿಳೆಯರಿಗೆ ಪ್ರತೇಕವಾದ ತರಬೇತಿ ಇದ್ದು(ಉದಾ: ಇ.ಎಂ, ಎ.ಎ, ಡಿ.ಎಂಸಿ.
ಇತರೆ) ತರಬೇತಿ ಪಡೆದ ಮಹಿಳೆಯರು ಪ್ರತಿಷ್ಠಿತ ಕಂಪನಿಗಳಲ್ಲಿ ಉತ್ತಮ ವೇತನದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪುರುಷರು ಸಹ (ಉದಾ: ಫಿಟ್ಟರ್, ಎಲೆಕ್ಟ್ರೀ಼ಷಿಯನ್, ವೆಲ್ಡರ್, ಎಂ.ಎಂ.ವಿ, ಇತರೆ ) ಕೇಂದ್ರ ಸರ್ಕಾರದ ರೇಲ್ವೇ,ಮೆಟ್ರೋ, ಪೆಟ್ರೋಲಿಯಂ, ಆರ್ಡಿನನ್ಸ್ ಕಂಪನಿ ಹಾಗೂ ಸೇನೆಯಲ್ಲಿಯೂ ಕಾರ್ಯನಿರ್ಹಿಸುತ್ತಿದ್ದಾರೆ. ವಿವಿಧ ಕೈಗಾರಿಕೋದ್ಯಮಗಳಲ್ಲಿ ಅಂಪ್ರೆಂಟಿಸ್ ತರಬೇತಿ, ಡಿಪ್ಲೋಮಾ ,ಜಿ.ಟಿ.ಟಿ.ಸಿ ಹಾಗೂ ಪದವಿ ಶಿಕ್ಷಣ ಪಡೆದು ಕಂಪನಿಗಳಲ್ಲಿ ಜನರಲ್ ಮ್ಯಾನೇಜರ್ ಹುದ್ದೆಗಳನ್ನು ಸಹ ಅಂಲಂಕರಿಸಿರುವ ಉದಾಹರಣೆಗಳಿವೆ. ಸಿ.ಐ.ಟಿ.ಎಸ್ ತರಬೇತಿ
ಪಡೆದು ತಾಂತ್ರಿಕ ಸಂಸ್ಥೆಗಳಲ್ಲಿ ಭೋಧಕರಾಗಲು ಅವಕಾಶವಿದೆ.

ಐಟಿಐ ಶಿಕ್ಷಣವು ಇತರೆ ತರಬೇತಿಗಳಿಗೆ ಹೋಲಿಸಿದಾಗ ಕಡಿಮೆ ಶುಲ್ಕವಿದ್ದು, ನಿತ್ಯ ಬಳಕೆ ವಸ್ತುಗಳ ದುರಸ್ತಿ
ಹಾಗೂ ಸ್ವಯಂ ಉದ್ಯೋಗವನ್ನು ಸಹ ಕೈಗೊಳ್ಳಬಹುದಾಗಿದೆ.

ರಾಜ್ಯದಲ್ಲಿ ಸರ್ಕಾರಿ/ಖಾಸಗಿ ಸಂಸ್ಥೆಗಳಿದ್ದು, 270 ಸರ್ಕಾರಿ ಅದರಲ್ಲಿ 150 ಸಂಸ್ಥೆಗಳನ್ನು ಟಾಟಾ-
ಟೆಕ್ನಾಲಾಜೀಸ್ ಲಿಮಿಟೆಡ್ ಜೊತೆ ಒಡಂಬಡಿಕೆ ಮಾಡಿಕೊಂಡು ಉನ್ನತಿಕರಿಸಲಾಗಿದೆ. “ಉದ್ಯೋಗ”ಯೋಜನೆಯಡಿ “ಇಂಡಸ್ಟ್ರೀ-4.0” ತರಬೇತಿ ಈ ಸಂಸ್ಥಗಳಲ್ಲಿ ನೀಡಲಾಗುತ್ತಿದ್ದು, ಪಠ್ಯಕ್ರಮ ಕೈಗಾರಿಕೆಗಳಿಗೆ ಪೂರಕವಾಗಿದ್ದು ವಿಫುಲ

ಉದ್ಯೋಗಾವಕಾಶಗಳಿಗೆ ದಾರಿಮಾಡಿ ಕೊಟ್ಟಿವೆ. ತರಬೇತಿಯು ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯತರಬೇತಿ ಮಹಾನಿರ್ದೇಶನಾಲಯದ ಕುಶಲ ತರಬೇತಿ ಯೋಜನೆಯಡಿ ಮಾನ್ಯತೆ ಹೊಂದಿ ಎನ್.ಎಸ್.ಕ್ಯೂ.ಎಫ್ ಜೋಡಿತವಾಗಿದ್ದು, ಪ್ರಮಾಣಪತ್ರವು ಜಗತ್ತಿನಾದ್ಯಂತ ಮಾನ್ಯತೆಯನ್ನು ಹೊಂದಿದೆ.

ಪ್ರತಿವರ್ಷ ಆಗಸ್ಟ್‌ ತಿಂಗಳಲ್ಲಿ ತರಬೇತಿ ಪ್ರಾರಂಭಿಸಿ ಜುಲೈ ಮಾಹೆಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ಪರೀಕ್ಷೆಗಳು ತುಂಬಾ ಸರಳವಾಗಿದ್ದು, ಆನ್-ಲೈನ್ ಹಾಗೂ ಆಫ್-ಲೈನ್ ಪದ್ದತಿಯಲ್ಲಿದ್ದು ಪ್ರವೇಶ ಬಯಸುವ ಮಕ್ಕಳು ಮೇ ಹಾಗೂ ಜೂನ್ ತಿಂಗಳಿನಲ್ಲಿ ಸಮೀಪದ ಐ.ಟಿ.ಐ ಸಂಸ್ಥೆಗಳನ್ನು ಸಂಪರ್ಕಿಸಿ ಪ್ರವೇಶ ಪಡೆದುಕೊಳ್ಳಬಹುದಾಗಿದೆ.

ಐ.ಟಿ.ಐ ಶಿಕ್ಷಣದಲ್ಲಿನ ಸೌಲಭ್ಯಗಳು:
1. ವಿದ್ಯಾರ್ಥಿಗಳಿಗೆ ಪುಸ್ತಕ, ಟೂಲ್‌-ಕಿಟ್, ಲ್ಯಾಪ್-ಟಾಪ್, ಶೂ ಇತರೆ ಸಾಮಗ್ರಿಗಳ ವಿತರಣೆ ಹಾಗೂ
ಕಂಪ್ಯೂಟರ್ ಶಿಕ್ಷಣ.

2. ವಿವಿಧ ಕೈಗಾರಿಕೋದ್ಯಮಗಳಿಗೆ ಬೇಟಿ/ಉದ್ಯೋಗ ಮೇಳ/ಕ್ಯಾಂಪಸ್ ಸಂದರ್ಶನ.
3. ಕೈಗಾರಿಕಾ ಸುರಕ್ಷಿತ ಕಾರ್ಯಕ್ರಮಗಳು ಏರ್ಪಡಿಸಲಾಗುವುದು.
4. ಅಂಪ್ರೆಂಟಿಸ್/ಸಿಐಟಿಎಸ್ (ಡಿ.ಎಡ್‌ ಅಥವಾ ಬಿ.ಎಡ್‌ ಮಾದರಿಯ) ತರಬೇತಿ.
5. ನೇರವಾಗಿ 02 ನೇ ವರ್ಷಕ್ಕೆ ಡಿಪ್ಲೋಮಾ ಪ್ರವೇಶ.

ಸಹಾಯಕ ನಿರ್ದೇಶಕರು (ತರಬೇತಿ)ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT