ಮಗಳು ಚೆನ್ನಾಗಿ ಓದುತ್ತಾಳೆ. ಮಗ ಸರಿಯಾಗಿ ಓದುವುದಿಲ್ಲ. ಆದರೆ ಮಗಳಿಗೆ ನಾವು ತಾರತಮ್ಯ ಮಾಡುತ್ತಿದ್ದೇವೆ ಎಂಬ ಭಾವನೆ ಇದೆ. ಅಣ್ಣನಿಗೊಂದು ನ್ಯಾಯ, ನನಗೊಂದು ರೀತಿಯ ನ್ಯಾಯ ಎಂದು ಸದಾ ವಾದಿಸುತ್ತಾಳೆ. ಯಾಕೆ ಹೀಗೆ ಹೋಲಿಕೆ ಮಾಡಿಕೊಂಡು ಮನಸ್ಸು ಹಾಳು ಮಾಡಿಕೊಳ್ಳುತ್ತಾಳೆ ಎಂಬುದೇ ತಿಳಿಯುವುದಿಲ್ಲ. ಅವಳನ್ನು ಇಂತಹ ಭಾವನೆಯಿಂದ ಹೊರತರುವುದು ಹೇಗೆ?– ರಾಜೇಶ್ ಗಟ್ಟಿ, ಮಂಗಳೂರು