ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 20 ಅಕ್ಟೋಬರ್ 2021, 22:30 IST
ಅಕ್ಷರ ಗಾತ್ರ

ಭಾಗ– 80

1096. ನೀವು ಕೆಲವು ಪಠ್ಯವನ್ನು ಒಂದು ಪುಟದಿಂದ ಬೇರೆ ಪುಟಕ್ಕೆ ಸರಿಸಲು ಬಯಸಿದಾಗ ಉತ್ತಮ ವಿಧಾನ----

ಎ) ಕಾಪಿ, ಪೇಸ್ಟ್‌ ಮತ್ತು ಡಿಲೀಟ್‌

ಬಿ) ಕಟ್‌ ಮತ್ತು ಪೇಸ್ಟ್‌

ಸಿ) ಫೈಂಡ್‌ ಮತ್ತು ರಿಪ್ಲೇಸ್‌

ಡಿ) ಡಿಲಿಟ್‌ ಮತ್ತು ರಿಟೈಪ್‌

1097. ‘ಹಂಗಾರಕಟ್ಟೆ ಬಂದರು’ ಈ ಕೆಳಗಿನವುಗಳಲ್ಲಿ ಯಾವುದು ಅದರ ಬಗ್ಗೆ ನಿಜವಾಗಿದೆ?

ಎ) ಇದು ಉಡುಪಿ ಜಿಲ್ಲೆಯಲ್ಲಿದೆ

ಬಿ)ಇದನ್ನು ಪ್ರಮುಖವಾಗಿ ಮೀನುಗಾರಿಕೆ ದೋಣಿಗಳು ಬಳಸುತ್ತವೆ.

ಸಿ)ಈ ಬಂದರು ಸ್ವರ್ಣ ಮತ್ತು ಸೀತಾ ನದಿಯ ದಡದಲ್ಲಿದೆ

ಡಿ) ಇವುಗಳಲ್ಲಿ ಎಲ್ಲವೂ

1098.ಈ ಕೆಳಗಿನ ಯಾವ ಅಭಯಾರಣ್ಯ ವಿರಳ ಗ್ಯಾಂಗ್‌ ಟೆಕ್‌ ಡಾಲ್ಫಿನ್‌ ಮತ್ತು ಮೊಸಳೆ ಮತ್ತು ಘರಿಯಾಲ್‌ಗೆ ಹೆಸರುವಾಸಿಯಾಗಿದೆ?

ಎ) ಗಲ್ಫ್‌ ಆಫ್‌ ಕಚ್‌ ಮರೈನ್‌ ರಾಷ್ಟ್ರೀಯ ಉದ್ಯಾನ

ಬಿ) ಮಹಾತ್ಮ ಗಾಂಧಿ ಮರೈನ್‌ ರಾಷ್ಟ್ರೀಯ ಉದ್ಯಾನ

ಸಿ) ಘೋಹಿರ್‌ ಮಾತಾ ಮರೈನ್‌ ರಾಷ್ಟ್ರೀಯ ಉದ್ಯಾನ

ಡಿ) ರಾಷ್ಟ್ರೀಯ ಚಂಬಲ್‌ ಅಭಯಾರಣ್ಯ

1099. ಆಗ್ರಾ ಯಾವ ನದಿಯ ದಡದಲ್ಲಿದೆ?

ಎ) ಯಮುನಾ ಬಿ) ಗಂಗೋತ್ರಿ

ಸಿ) ಗಂಡಕಿ ಡಿ) ಚಂಬಲ್‌

1100. ಸುವರ್ಣ ವಿಧಾನಸೌಧ ಯಾವ ಸ್ಥಳದಲ್ಲಿದೆ?

ಎ) ಧಾರವಾಡ ಬಿ) ಬೆಳಗಾವಿ

ಸಿ) ಬೆಂಗಳೂರು ಡಿ) ಮೈಸೂರು

1101. ಈ ಕೆಳಗಿನ ಯಾವ ದೇಶವು ಭಾರತದೊಂದಿಗೆ ಭೂಗಡಿಯನ್ನು ಹಂಚಿಕೊಂಡಿಲ್ಲ?

ಎ) ಬಾಂಗ್ಲಾದೇಶ ಬಿ) ಭೂತಾನ್‌

ಸಿ) ತಜಕಿಸ್ತಾನ್‌ ಡಿ) ನೇಪಾಳ

1102. ಸಹ್ಯಾದ್ರಿಯ ಇನ್ನೊಂದು ಹೆಸರು ಏನು?

ಎ) ಅರಾವಳಿ ಬಿ) ಪಶ್ಚಿಮಘಟ್ಟ

ಸಿ) ಶಿವಾಲಿಕ ಡಿ) ಹಿಮಾದ್ರಿ

1103. ಕೆಳಗಿನ ಯಾವ ವನ್ಯಜೀವಿ ಅಭಯಾರಣ್ಯಗಳು ಕರ್ನಾಟಕದಲ್ಲಿ ಇಲ್ಲ?

ಎ) ಕಾವೇರಿ ವನ್ಯಜೀವಿ ಅಭಯಾರಣ್ಯ

ಬಿ) ದಾಂಡೇಲಿ ವನ್ಯಜೀವಿ ಅಭಯಾರಣ್ಯ

ಸಿ) ಭದ್ರಾ ವನ್ಯಜೀವಿ ಅಭಯಾರಣ್ಯ

ಡಿ) ಮದುಮಲೈ ವನ್ಯಜೀವಿ ಅಭಯಾರಣ್ಯ

1104. ಬೆಳಕಿನ ವರ್ಷ ಎಂದರೇನು?

ಎ) ಸಮಯದ ಘಟಕ ಬಿ) ಅಂತರದ ಘಟಕ

ಸಿ) ವೇಗದ ಘಟಕ
ಡಿ) ಇವುಗಳಲ್ಲಿ ಯಾವುದೂ ಅಲ್ಲ

1105. ಈ ಕೆಳಗಿನ ಯಾವ ಪಟ್ಟಣವು ನದಿಯ ದಂಡೆಯಲ್ಲಿಲ್ಲ?

ಎ) ಅಹಮದಾಬಾದ್‌ ಬಿ) ಮುಂಬೈ

ಸಿ) ಕೋಲ್ಕತ್ತಾ ಡಿ) ಪಟ್ನಾ

1106. ಶ್ರವಣಬೆಳಗೊಳ ಪಟ್ಟಣವು ಕೆಳಗಿನ ಯಾರ ಒಂದು ಪ್ರಮುಖ ಯಾತ್ರಾ ಕೇಂದ್ರವಾಗಿದೆ?

ಎ) ಹಿಂದೂಗಳು ಬಿ) ಜೈನರು

ಸಿ) ಸಿಖ್ಖರು ಡಿ) ಮುಸ್ಲಿಮರು

1107. ಈ ಕೆಳಗಿನ ಯಾವ ನದಿಯು ಭಾರತದಲ್ಲಿ ಹುಟ್ಟುವುದಿಲ್ಲ?

ಎ) ಗಂಗಾ ಬಿ) ಯಮುನಾ
ಸಿ) ಕೋಸಿ ಡಿ) ಸಿಂಧು

1108. ದಾಲ್‌ ಸರೋವರ (ಲೇಕ್‌) ಎಲ್ಲಿದೆ?

ಎ) ಜೈಪುರ್‌ ಬಿ) ಶಿಮ್ಲಾ ಸಿ) ಶ್ರೀನಗರ
ಡಿ) ಕಾಶ್ಮೀರ

1109. ವಿಶ್ವದ ಅತಿ ದೊಡ್ಡ ಸಾಗರ ಯಾವುದು?

ಎ) ಪೆಸಿಫಿಕ್ ಬಿ) ಇಂಡಿಯನ್‌

ಸಿ) ಅಟ್ಲಾಂಟಿಕ್‌ ಡಿ) ನಾರ್ದನ್

1110. ಸರಣಿಯಲ್ಲಿ ಮುಂದಿನ ಸಂಖ್ಯೆಯನ್ನು ಹುಡುಕಿ 6, 11, 21, 36, 56 ---?

ಎ) 91 ಬಿ) 51 ಸಿ) 81 ಡಿ) 42

1111. ಫೋಟೊವನ್ನು ತೋರಿಸುತ್ತಾ ನಿಶಾಂತ ಹೇಳುವನು ‘ಅವರ ತಂದೆ ನನ್ನ ತಾಯಿಯ ಏಕೈಕ ಪುತ್ರ’ ಅದು ಯಾರ ಫೋಟೊ?

ಎ) ನಿಶಾಂತ ಬಿ) ನಿಶಾಂತನ ಸಹೋದರ

ಸಿ) ನಿಶಾಂತನ ತಂದೆ ಡಿ) ನಿಶಾಂತನ ಮಗ

1112. ಮೂರು ಸಂಖ್ಯೆಗಳ ಮೊತ್ತ 138 ಆಗಿದೆ. ಸಂಖ್ಯೆಗಳು 1:2:3 ರ ಅನುಪಾತದಲ್ಲಿದೆ. ಹಾಗಾದರೆ ಸಂಖ್ಯೆಗಳು ಯಾವುವು?

ಎ) 23, 46, 69 ಬಿ) 21, 42, 63

ಸಿ) 20, 40, 60 ಡಿ) 33, 66, 99

1113. ಒಬ್ಬ ಕಾರ್ಮಿಕನ ಸಂಬಳ
₹ 4,000. ಅದನ್ನು ಶೇ 10ಕ್ಕೆ ಹೆಚ್ಚಿಸಿದರೆ ಮತ್ತು ನಂತರದಲ್ಲಿ
ಶೇ 10 ಕ್ಕೆ ಹೆಚ್ಚಿಸಿದರೆ, ಸಂಬಳದಲ್ಲಿನ ಬದಲಾವಣೆ ಎಷ್ಟು?

ಎ) 440 ಬಿ) 40 ಸಿ) 400 ಡಿ) 140

1114. ಈ ಕೆಳಗಿನ ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ನೈಸರ್ಗಿಕ ರಬ್ಬರ್‌ ಉತ್ಪತ್ತಿಯಾಗುತ್ತದೆ?

ಎ) ತಮಿಳುನಾಡು ಬಿ) ಕರ್ನಾಟಕ

ಸಿ) ಅಸ್ಸಾಂ ಡಿ) ಕೇರಳ

1115. ‘ಇಂದಿರಾ ಪಾಯಿಂಟ್’ ಎಲ್ಲಿದೆ?

ಎ) ಕೇರಳ ಬಿ) ನಿಕೋಬಾರ್

ಸಿ) ತಮಿಳುನಾಡು ಡಿ) ಲಡಾಖ್‌

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ಬಾಕ್ಸ್

ಭಾಗ 79ರ ಉತ್ತರ: 1081. ಎ, 1082. ಸಿ, 1083. ಬಿ, 1084. ಎ, 1085. ಡಿ, 1086. ಸಿ, 1087. ಡಿ, 1088. ಬಿ, 1089. ಬಿ, 1090. ಬಿ, 1091. ಡಿ, 1092. ಸಿ, 1093. ಸಿ, 1094. ಸಿ, 1095. ಡಿ

ಬಾಕ್ಸ್

ಭಾಗ 80ರ ಉತ್ತರ: 1096. ಬಿ, 1097. ಡಿ, 1098. ಡಿ, 1099. ಎ, 1100. ಬಿ, 1101. ಸಿ, 1102. ಬಿ, 1103. ಸಿ, 1104. ಬಿ, 1105. ಬಿ, 1106. ಬಿ, 1107. ಡಿ, 1108. ಸಿ, 1109. ಎ, 1110. ಸಿ, 1111. ಡಿ, 1112. ಎ, 1113. ಎ, 1114. ಡಿ, 1115. ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT