ಬುಧವಾರ, ಜೂನ್ 16, 2021
27 °C

ವಿದ್ಯಾರ್ಥಿ ವೇತನ: ಆರ್‌.ಡಿ. ಬಿರ್ಲಾ ವಿದ್ಯಾರ್ಥಿವೇತನ ಪರೀಕ್ಷೆ 2021‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್‌.ಡಿ. ಬಿರ್ಲಾ ವಿದ್ಯಾರ್ಥಿವೇತನ ಪರೀಕ್ಷೆ 2021‌

ವಿವರ: ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರ ಕನಸುಗಳನ್ನು ನನಸು ಮಾಡಿಕೊಳ್ಳಲು ಸಹಾಯ ಮಾಡುವುದು.

ಅರ್ಹತೆ: ಈ ಪರೀಕ್ಷೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

ಆರ್ಥಿಕ ಸಹಾಯ: ಗರಿಷ್ಠ ₹ 1 ಲಕ್ಷ

ಹೆಚ್ಚಿನ ಮಾಹಿತಿಗೆ: scholarship(at)birlaopenminds.com, 73787 95942

ಲೀಡ್‌ ವಿದ್ಯಾರ್ಥಿವೇತನ

ವಿವರ: ವಿದೇಶಗಳಲ್ಲಿನ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಲೀಡ್‌ ವಿದ್ಯಾರ್ಥಿವೇತನ ಯೋಜನೆ ಸಹಾಯ ಮಾಡಲಿದೆ.

ಅರ್ಹತೆ: ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳೊಂದಿಗೆ ಉತ್ತೀರ್ಣ ಆಗಿರಬೇಕು. ವಿದೇಶಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ 2021ರಲ್ಲಿ ದಾಖಲಾಗುವವರು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಿಂದ ಈಗಾಗಲೇ ಯಾವುದೇ ಧನಸಹಾಯ ಪಡೆದುಕೊಂಡಿರುವವರು ಇದಕ್ಕೆ ಅರ್ಜಿ ಸಲ್ಲಿಸಲು ಬರುವುದಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಜೂನ್‌, 2021

 ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿ

 ಹೆಚ್ಚಿನ ಮಾಹಿತಿಗಾಗಿ: ಲೀಡ್‌ ಸ್ಕಾಲರ್‌ಶಿಪ್‌ ವೆಬ್‌ಸೈಟ್‌

ಆಕ್ಸ್‌ಫರ್ಡ್‌ ಆ್ಯಂಡ್‌ ಕೇಂಬ್ರಿಡ್ಜ್‌ ಸೊಸೈಟಿ ಆಫ್‌ ಇಂಡಿಯಾ ಸ್ಕಾಲರ್‌ಶಿಪ್‌ 2021–22

ವಿವರ: ಕೇಂಬ್ರಿಡ್ಜ್‌ ಮತ್ತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಪದವಿ ಶಿಕ್ಷಣ ಮತ್ತು ಸಂಶೋಧನೆಗಾಗಿ ಭಾಗಶಃ ಧನ ಸಹಾಯವನ್ನು ಮಾಡಲಾಗುವುದು.

ಅರ್ಹತೆ: ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಇದರ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗೆ: www.oxbridgeindia.com/scholarship

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು