ಶುಕ್ರವಾರ, ಏಪ್ರಿಲ್ 23, 2021
27 °C

ವಿದ್ಯಾರ್ಥಿ ವೇತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಐಟಿ ರೂರ್ಕಿ ಡಿಪಾರ್ಟ್‌ಮೆಂಟ್‌ ಆಫ್‌ ಕೆಮಿಸ್ಟ್ರಿ ಪೋಸ್ಟ್‌–ಡಾಕ್ಟರಲ್‌ ಫೆಲೋಶಿಪ್‌ 2021

ವಿವರ: ರೂರ್ಕಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಸಾಯನಶಾಸ್ತ್ರ ವಿಭಾಗವು ಪಿಎಚ್‌ಡಿ ಪದವಿ ಪಡೆದವರಿಂದ ಪೋಸ್ಟ್ ಡಾಕ್ಟರಲ್ ಫೆಲೋಶಿಪ್‌ಗೆ ಅರ್ಜಿ ಆಹ್ವಾನಿಸಿದೆ. 

ಅರ್ಹತೆ: ಫಿಸಿಕಲ್ ಕೆಮಿಸ್ಟ್ರಿ/ಫಿಸಿಕ್ಸ್‌ನಲ್ಲಿ ಪಿಎಚ್‌ಡಿ ಪಡೆದ ಲೇಸರ್ ಸ್ಪೆಕ್ಟ್ರೋಸ್ಕೋಪಿ, ಮ್ಯಾಟ್‌ಲ್ಯಾಬ್ ಮತ್ತು ಲ್ಯಾಬ್ ವೀವ್ ಅನುಭವವಿರುವ ಅಭ್ಯರ್ಥಿಗಳು ಈ ಫೆಲೋಶಿಪ್‌ಗೆ ಅರ್ಹರು. ಇತ್ತೀಚೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕೂಡ ಅರ್ಹರು. ಇತ್ತೀಚೆಗೆ ಥೀಸಿಸ್‌ ಸಲ್ಲಿಸಿದವರೂ ಸಹ ಅರ್ಜಿ ಸಲ್ಲಿಸಬಹುದು.

ಆರ್ಥಿಕ ಸಹಾಯ: ₹ 60,000 ಪ್ರತಿ ತಿಂಗಳಿಗೆ ಜೊತೆಗೆ ಅನಿರೀಕ್ಷಿತ ವೆಚ್ಚಗಳಿಗಾಗಿ ವಾರ್ಷಿಕ ₹ 50,000.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಮಾರ್ಚ್‌, 2021

ಅರ್ಜಿ ಸಲ್ಲಿಸುವ ವಿಧಾನ: ಇ–ಮೇಲ್‌ ಅಥವಾ ಅಂಚೆ ಮೂಲಕ ಕಳುಹಿಸಬಹುದು. ಪ್ರೊಫೆಸರ್ ಮತ್ತು ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರು, ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ರೂರ್ಕಿ, ಉತ್ತರಾಖಂಡ್ - 247667 

ಹೆಚ್ಚಿನ ಮಾಹಿತಿಗೆ: www.b4s.in/praja/RDC6

***

ಎಂಜಿನಿಯರಿಂಗ್‌ ವಿದ್ಯಾರ್ಥಿನಿಯರಿಗೆ ರೋಲ್ಸ್‌ ರಾಯ್ಸ್ ಉನ್ನತಿ ಸ್ಕಾಲರ್‌ಶಿಪ್‌ 2021

ವಿವರ: ರೋಲ್ಸ್ ರಾಯ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ಎಂಜಿನಿಯರಿಂಗ್ ಓದುತ್ತಿರುವ ಹೆಣ್ಣುಮಕ್ಕಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ.

ಅರ್ಹತೆ: ಅರ್ಜಿದಾರರು ಭಾರತದ ಎಐಸಿಟಿಇ ಮಾನ್ಯತೆ ಪಡೆದ ಸಂಸ್ಥೆಯಿಂದ ಏರೋಸ್ಪೇಸ್, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್, ಮರೈನ್ ಮುಂತಾದ ವಿಷಯಗಳಲ್ಲಿ ಎಂಜಿನಿಯರಿಂಗ್ ಓದುತ್ತಿರಬೇಕು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಬೋರ್ಡ್ ಪರೀಕ್ಷೆಗಳಲ್ಲಿ ಶೇ 60 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು.

ಆರ್ಥಿಕ ಸಹಾಯ: ₹ 35,000

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31, ಮಾರ್ಚ್‌ 2021

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ ಅರ್ಜಿ

ಹೆಚ್ಚಿನ ಮಾಹಿತಿಗೆ: www.b4s.in/praja/UNS2

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು