ದೇಶ ಹಾಗೂ ವಿದೇಶಗಳಲ್ಲಿ ವಿದೇಶಗಳಲ್ಲಿ ಉನ್ನತ ಅಧ್ಯಯನ ಕೈಗೊಳ್ಳಲು ನೆರವಾಗುವ ಸ್ಕಾಲರ್ಷಿಪ್ಗಳ ಪಟ್ಟಿ ಇಲ್ಲಿದೆ.

ನರೋತ್ತಮ್ ಸೇಖ್ಸರಿಯಾ ಸ್ಕಾಲರ್ಷಿಪ್

ನರೋತ್ತಮ್ ಸೇಖ್ಸರಿಯಾ ಫೌಂಡೇಷನ್ ನೀಡುವ ನೆರವು ಇದಾಗಿದ್ದು, ದೇಶ ಮತ್ತು ವಿದೇಶಿ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲಿದೆ.

ಅರ್ಹತೆ: ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವೀಧರರಾಗಿರಬೇಕು. 2025ರ ಜನವರಿ 31ಕ್ಕೆ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. 2025ರ ಶರತ್ಕಾಲದಲ್ಲಿ ಆರಂಭವಾಗುವ ಸ್ನಾತಕೋತ್ತರ ಪದವಿಯನ್ನು ಭಾರತದಲ್ಲಿ ಅಥವಾ ವಿದೇಶದಲ್ಲಿ ಉನ್ನತ ಶ್ರೇಣಿಯ ಸಂಸ್ಥೆಗಳಲ್ಲಿ ಪಡೆಯಲು ಯೋಜಿಸಿರಬೇಕು.

ಆರ್ಥಿಕ ಸಹಾಯ: ಮಾರ್ಗದರ್ಶನ ಬೆಂಬಲವನ್ನು ಒಳಗೊಂಡಂತೆ ಹಣಕಾಸಿನ ಸಹಾಯಕ್ಕಾಗಿ ಬಡ್ಡಿರಹಿತ ಸಾಲವನ್ನು ಈ ವಿದ್ಯಾರ್ಥಿವೇತನವು ನೀಡುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನ: 17-03-2025

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನಲ್ಲಿ ಅರ್ಜಿ ಹಾಕಿ.

ಮಾಹಿತಿಗೆ: Short Url: www.b4s.in/pjvi/NSSP1

ಜೆಎನ್ ಟಾಟಾ ಎಂಡೋಮೆಂಟ್ ಲೋನ್ ಸ್ಕಾಲರ್ಷಿಪ್

ವಿದೇಶಗಳಲ್ಲಿ ಉನ್ನತ ಅಧ್ಯಯನ ಕೈಗೊಳ್ಳುವ ಆಸಕ್ತಿಯಿರುವ ಭಾರತೀಯ ವಿದ್ಯಾರ್ಥಿಗಳಿಂದ ಎಂಡೋಮೆಂಟ್ ಲೋನ್ ಸ್ಕಾಲರ್ಷಿಪ್ಗಾಗಿ(ಸಾಲಕ್ಕಾಗಿ) ಅರ್ಜಿ ಆಹ್ವಾನಿಸಿದೆ. ಲೋನ್ ಸ್ಕಾಲರ್ಶಿಪ್ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಭಾಗಶಃ ‘ಟ್ರಾವೆಲ್ ಗ್ರಾಂಟ್’ ಮತ್ತು ‘ಗಿಫ್ಟ್ ಅವಾರ್ಡ್’ಗೆ ಶಿಫಾರಸು ಮಾಡಬಹುದಾಗಿದ್ದು ಇದು ಅವರ ಸಾಗರೋತ್ತರ ಅಧ್ಯಯನದಲ್ಲಿನ ಅವರ ಶೈಕ್ಷಣಿಕ ಕಾರ್ಯಕ್ಷಮತೆಗೆ ಸಂಬಂಧಿಸಿದೆ.

ಅರ್ಹತೆ: ಕನಿಷ್ಠ ಯಾವುದಾದರೂ ಒಂದು ಪದವಿ ಪೂರ್ಣಗೊಳಿಸಿರಬೇಕು ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಕಾಲೇಜು/ಸಂಸ್ಥೆಯಲ್ಲಿ ಪದವಿಯ ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ವಿದೇಶದಲ್ಲಿ ಸ್ನಾತಕೋತ್ತರ/ಡಾಕ್ಟರೇಟ್/ಪೋಸ್ಟ್ ಡಾಕ್ಟರಲ್ ಅಧ್ಯಯನಗಳನ್ನು ಮುಂದುವರಿಸಲು ಸಿದ್ಧರಿರಬೇಕು.

ಕೋರ್ಸ್ನ ಕನಿಷ್ಠ ಅವಧಿಯು 2 ವರ್ಷಗಳಾಗಿದ್ದು, ಲೋನ್ ಸ್ಕಾಲರ್ಷಿಪ್ ನೀಡುವ ವೇಳೆ, ಕೋರ್ಸ್ ಪೂರ್ಣಗೊಳಿಸಲು ಕನಿಷ್ಠ ಒಂದು ಪೂರ್ಣ ಶೈಕ್ಷಣಿಕ ವರ್ಷ ಬಾಕಿ ಇರುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. ಇದು ಸಾಮಾನ್ಯವಾಗಿ ಜುಲೈ ವೇಳೆಯಲ್ಲಿ ಜಾರಿಯಲ್ಲಿರುತ್ತದೆ.

ವಿದ್ಯಾರ್ಥಿಗಳು ತಮ್ಮ ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಸರಾಸರಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಗಳಿಸಿರಬೇಕು. ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 45 ವರ್ಷ (2025ರ ಜೂನ್ 30)
ಆರ್ಥಿಕ ಸಹಾಯ: ₹ 10 ಲಕ್ಷದವರೆಗಿನ ಲೋನ್ ಸ್ಕಾಲರ್ಷಿಪ್.

ಅರ್ಜಿ ಸಲ್ಲಿಸಲು ಕೊನೆಯ ದಿನ: 07-03-2025

ಅರ್ಜಿ ಸಲ್ಲಿಕೆಯ ವಿಧಾನ: ಆನ್ಲೈನ್

ಮಾಹಿತಿಗೆ: Short Url:www.b4s.in/pjvi/JNT9

ಕ್ವಾಡ್ ಫೆಲೋಷಿಪ್

ಕ್ವಾಡ್ ಫೆಲೋಶಿಪ್ 2025ಅನ್ನು ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ನ ಸರ್ಕಾರಗಳು ಪ್ರಾರಂಭಿಸಿದ್ದು, ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಎಜುಕೇಶನ್ (ಐಐಇ) ಇದನ್ನು ನಿರ್ವಹಿಸುತ್ತದೆ. ಈ ಕ್ವಾಡ್ ದೇಶಗಳ ಮತ್ತು ಹತ್ತು ಅಸಿಯಾನ್ (ಎಎಸ್ಇಎಎನ್) ಸದಸ್ಯ ರಾಷ್ಟ್ರಗಳ ಭವಿಷ್ಯದ ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನು ಸಂಪರ್ಕಿಸುವ ಗುರಿಯನ್ನು ಇದು ಹೊಂದಿದ್ದು, 2025ರಿಂದ ಆರಂಭವಾಗುತ್ತದೆ.

ಅರ್ಹತೆ: ಭಾರತ ಸೇರಿದಂತೆ ನಿರ್ದಿಷ್ಟ ರಾಷ್ಟ್ರಕ್ಕೆ ಸಂಬಂಧಿಸಿದಂತೆ ಪೌರತ್ವ ಪಡೆದಿರಬೇಕು. ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. 2025ರ ಆಗಸ್ಟ್ನೊಳಗೆ ಸ್ಟೆಮ್ ಕ್ಷೇತ್ರದಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಪಡೆದಿರಬೇಕು. ವಿದ್ಯಾರ್ಥಿಗಳು ಪದವಿಪೂರ್ವ ಶೈಕ್ಷಣಿಕ ಸಾಧನೆಯಲ್ಲಿ ಅಸಾಧಾರಣ ದಾಖಲೆಯನ್ನು ಹೊಂದಿರುವವರಾಗಿರಬೇಕು.

ಆರ್ಥಿಕ ಸಹಾಯ:$40,000ದ ಒಂದು-ಬಾರಿಯ ಸ್ಟೈಪೆಂಡ್ ಮತ್ತು ಇತರ ಪ್ರಯೋಜನಗಳನ್ನು ಫೆಲೋಷಿಪ್ ಒದಗಿಸುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನ: 03-03-2025

ಮಾಹಿತಿಗೆ :Short Url:www.b4s.in/pjvi/QUFD1 ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.