ಅನೇಕರು ಪರೀಕ್ಷೆ ಇನ್ನೂ ದೂರ ಇದೆ ಎಂದು ಓದಿನತ್ತ ಲಕ್ಷ್ಯ ಕೊಡದೇ ಇರುವವರಾದರೆ, ಮತ್ತೆ ಕೆಲವರು ಪ್ರಾರಂಭದಿಂದಲೂ ಶಿಸ್ತಿನಿಂದ ಓದಿರುತ್ತಾರೆ. ಮತ್ತೆ ಕೆಲವರು ವರ್ಷವಿಡೀ ಓದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಪರೀಕ್ಷೆಯ ಹಿಂದಿನ ರಾತ್ರಿ ನಿದ್ದೆಗೆಟ್ಟು ಓದುವರು. ಇವರಿಗೆ ಅಂಕಗಳು ಬರಬಹುದು, ಪಾಸಾಗಲೂ ಸಾಧ್ಯವಾಗಬಹುದು. ಆದರೆ, ವಿಷಯಜ್ಞಾನ ಲಭಿಸುವುದಿಲ್ಲ. ಮುಂದಿನ ಓದಿಗೆ ತಳಹದಿಯೇ ಇಲ್ಲದೆ ಪರದಾಡುವಂತಾಗುತ್ತದೆ. ಜತೆಗೆ ಆರೋಗ್ಯದಲ್ಲಿಯೂ ಏರುಪೇರಾಗಬಹುದು.

ಪರೀಕ್ಷೆ, ಅಂಕಗಳು ಇವುಗಳಿಗೆ ಒತ್ತು ಕೊಟ್ಟು ಓದುವವರಿಗೆ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಹಾಗೂ ಪರೀಕ್ಷಾ ದಿನಗಳಲ್ಲಿ ಆತಂಕ ಹೆಚ್ಚಾಗಿ ಕಾಡತೊಡಗುತ್ತದೆ. ಪರೀಕ್ಷೆಗೆ ಎರಡು ಮೂರು ತಿಂಗಳಿವೆ ಎನ್ನುವಾಗಲೇ ಕೆಲವರಿಗೆ ಆತಂಕದ ಲಕ್ಷಣಗಳು ಹೆಚ್ಚಾಗಿ, ಅದು ಅವರ ವರ್ತನೆಯಲ್ಲಿ ಕಾಣುತ್ತದೆ.

ಹೀಗಾಗಿ ಪರೀಕ್ಷೆಗೂ ಮುಂಚೆ ಮೂರು ತಿಂಗಳು ಕ್ರಮಬದ್ಧವಾಗಿ ಓದುವುದರತ್ತ ಗಮನ ಕೊಡಬೇಕು.

ಆದ್ಯತೆ ನೀಡಿ:

ಪರೀಕ್ಷೆ ಮತ್ತು ಅಂಕಗಳಿಗೆ ಆದ್ಯತೆ ಕೊಟ್ಟು ಓದುವ ಬದಲಿಗೆ ಕಲಿಕೆಗೆ ಒತ್ತು ಕೊಟ್ಟು ಓದಿ ನೋಡಿ.ಇಷ್ಟಪಟ್ಟು ಏನನ್ನೂ ಓದಿದರೂ ಅದು ನಿಮ್ಮ ತಲೆಯಲ್ಲಿ ಸರಳವಾಗಿ ನೆನಪಿನಲ್ಲಿ ಉಳಿಯುತ್ತದೆ. ಸದಾ ಇಷ್ಟಪಟ್ಟು ಕಲಿಯುವೆ ಎಂದು ಆಗಾಗ್ಗೆ ಮನಸ್ಸಿಗೆ ಹೇಳಿಕೊಳ್ಳುತ್ತ ಓದಲು ಶುರು ಮಾಡಿ. ಇದರಿಂದ ಓದಿನ ಕಡೆ ಗಮನವನ್ನು ಕೇಂದ್ರೀಕರಿಸುವುದು ಸುಲಭವಾಗುತ್ತದೆ.

ಉದಾಹರಣೆಗೆ ಗಣಿತ ನಿಮಗೆ ಕಷ್ಟವಾಗುತ್ತಿದ್ದರೆ, ಅದನ್ನು ಕಷ್ಟವೆಂದು ಭಾವಿಸಬೇಡಿ. ಬದಲಿಗೆ ಈ ಗಣಿತವು ಬದುಕಿನ ಬರುವ ಹಲವು ಸಮಸ್ಯೆಗಳು. ಬದುಕಿನಲ್ಲಿರುವ ಸಮಸ್ಯೆಗಳನ್ನು ಹೇಗೆ ಉಳಿಯಲು ಬಿಡುವುದಿಲ್ಲವೋ, ಅದನ್ನು ಜಾಣತನದಿಂದ ಬಿಡಿಸಲು ಪ್ರಯತ್ನಿಸುತ್ತಿರೋ ಹಾಗೆಯೇ ಗಣಿತ ಎನ್ನುವ ವಿಷಯಕ್ಕೆ ಆದ್ಯತೆ ಕೊಟ್ಟು, ಬಿಡಿಸಲು ಪ್ರಯತ್ನಿಸಿ. ತಂತ್ರಗಾರಿಕೆ, ಕಲಿಯುವ ವಿಧಾನದಿಂದ ಗಣಿತ ಬಹಳ ಸರಳ ಸಂಗತಿಯಾಗಬಲ್ಲದು ಎಂಬುದನ್ನು ನೆನಪಿಡಿ.

ಪಠ್ಯವನ್ನು ವಿಭಜಿಸಿ:

ಒಂದೇ ಸಲಕ್ಕೆ ಎಲ್ಲ ಪಠ್ಯವನ್ನು ಹಾಕಿಕೊಂಡು ಓದಲು ಕೂರಬೇಡಿ. ವಾರದಲ್ಲಿ ಎಲ್ಲ ವಿಷಯಗಳ ಎರೆಡೆರಡು ಪಾಠಗಳನ್ನು ಕಲಿಯಿರಿ. ವಾರದಲ್ಲಿ ಎರಡು ದಿನ ಕಲಿತಿದ್ದನ್ನು ಪುನರ್ ಮನನ ಮಾಡಿಕೊಳ್ಳಲು ಸಮಯ ಮೀಸಲಿಡಿ. ಯಾವ ವಿಷಯ ಕಷ್ಟವೋ ಅದಕ್ಕೆ ಸ್ವಲ್ಪ ಪರಿಶ್ರಮ ಬೇಕು. ಯೋಜನಾಬದ್ಧವಾಗಿ ಪರಿಶ್ರಮ ಹಾಕಿ. ಎಷ್ಟೇ ಚುರುಕುಬುದ್ಧಿಯವರಿಗೆ ಒಂದು ತಾಸಿನ ನಂತರ ಓದಿನ ಕಡೆಗೆ ಗಮನ ಕೊಡುವುದು ಕಷ್ಟವಾಗುತ್ತದೆ. ಒಂದು ತಾಸು ಓದು, ಹದಿನೈದು ನಿಮಿಷ ವಿರಾಮ. ಮತ್ತೆ ಒಂದು ತಾಸು ಓದುವುದು ಉಪಯುಕ್ತ.

ಬರೆದು ಕಲಿಯಿರಿ:

ಯಾವುದು ಕಷ್ಟವೋ ಅದನ್ನು ಬರೆದು ಕಲಿಯಿರಿ. ಯಾವುದೇ ವಿಷಯವಿರಲಿ, ಅದನ್ನು ಸಾಧ್ಯವಾದಷ್ಟು ಕಲ್ಪಿಸಿಕೊಳ್ಳಲು ಪ್ರಯತ್ನಿಸಿ. ಕಲ್ಪಿಸಿಕೊಂಡಷ್ಟು ನೆನಪಿನಲ್ಲಿ ಉಳಿಯುತ್ತದೆ. ಲೆಕ್ಕ ಮಾಡುವುದು ಒಂದು ತಾಸಾದರೆ, ಓದಿಗೆ ಒಂದು ತಾಸು ಮೀಸಲಿಡಿ.

ಶಿಸ್ತು ಇರಲಿ: ಓದುವ ಸಮಯ ಶಿಸ್ತುಬದ್ಧವಾಗಿರಲಿ. ಗಮನವನ್ನು ವಿಮುಖಗೊಳಿಸುವ ಯಾವುದೇ ವಸ್ತುಗಳು ಕೈಗೆ ಎಟುಕದಂತೆ ಇರಲಿ. ವಿರಾಮಕ್ಕೆ ಹದಿನೈದು ನಿಮಿಷಗಳಿದ್ದರೆ, ಅಷ್ಟೆ ಅವಧಿ ತೆಗೆದುಕೊಂಡು ಮತ್ತೆ ಓದಲು ಕುಳಿತುಕೊಳ್ಳಿ.

ಉಪಯುಕ್ತ ವಿಧಾನ ಅನುಸರಿಸಿ:

ಕೆಲವರು ಲೆಕ್ಕವನ್ನು ಓದುತ್ತಾರೆ. ಅವರಿಗೆ ಹಾಗೆ ಓದಿದಾಗ ಎಲ್ಲ ಹಂತಗಳೂ ಚೆನ್ನಾಗಿ ಅರ್ಥವಾಗುತ್ತವೆ. ಆದರೆ ನೆನಪುಳಿಯುವುದಿಲ್ಲ. ಲೆಕ್ಕಗಳನ್ನು ಬಿಡಿಸುತ್ತಾ ಹೋದರೆ ಮಾತ್ರ ನೆನಪಿರುವುದು. ಒಂದು ಸಲ ಮಾದರಿ ಲೆಕ್ಕಗಳನ್ನೂ ಬಿಡಿಸುತ್ತಾ ಹೋದಂತೆ ಪ್ರತಿ ಹೆಜ್ಜೆಗೂ ಗಮನ ಕೊಡಬೇಕು. ಪೂರ್ಣವಾಗಿ ಬಿಡಿಸಿದ ನಂತರ ಪ್ರಶ್ನೆಯಿಂದ ಉತ್ತರೆದ ವರೆಗೆ ಹೆಜ್ಜೆಗಳನ್ನು ಗಮನಿಸಿಕೊಂಡು ಹೋಗುವುದರ ಜೊತೆಗೆ ಉತ್ತರದಿಂದ ಹಿಮ್ಮುಖವಾಗಿ ಪ್ರಶ್ನೆಯ ತನಕ ಹೆಜ್ಜೆಗಳನ್ನು ಗಮನಿಸತ್ತಾ ಹೋದರೆ ಲೆಕ್ಕ ಬಿಡಿಸುವ ಕ್ರಮ ಚೆನ್ನಾಗಿ ಮನದಟ್ಟಾಗುತ್ತದೆ. ಅನಂತರ ಅದೇ ರೀತಿಯ ಹಲವು ಲೆಕ್ಕಗಳನ್ನು ಬಿಡಿಸಿದಾಗ ಅದರಲ್ಲಿ ಪರಿಣತಿ ಬರುವುದು.

ವಿಜ್ಞಾನಕ್ಕೆ ಸಂಬಂಧಿಸಿದ ವಿಷಯವನ್ನೂ ಚಿತ್ರಗಳ ಸಮೇತ ಓದುವುದು, ಹಾಗೆ ಓದುವಾಗ ಸಣ್ಣ ಸಣ್ಣ ಚಾರ್ಟ್ಗಳನ್ನು ಮಾಡುವುದು ಉಪಯುಕ್ತ ವಿಧಾನವೇ.

ಚರಿತ್ರೆ ಓದುವಾಗ ಘಟನೆಗಳ ಜೊತೆಗೆ ಇಸವಿಯನ್ನೂ ಸೇರಿಸಿಕೊಂಡು ಹೇಳುವುದು, ಭೂಪಟದಲ್ಲಿ ಸಂಬಂಧಿತ ಜಾಗಗಳನ್ನು ಹುಡುಕಿ ಗುರುತು ಮಾಡಿಕೊಳ್ಳುವುದು ಓದುವುದರಲ್ಲಿ ಆಸಕ್ತಿಯನ್ನು ಬೆಳೆಸುತ್ತದೆ. ಭೂಗೋಳಕ್ಕೂ ಈ ವಿಧಾನ ನೆರವಾಗುತ್ತದೆ.

ಅಯ್ಯೊ ಇಷ್ಟೊಂದು ಪಠ್ಯವಿದೆ. ಹೇಗೆ ಮುಗಿಸುವುದು ಎಂಬ ಆತಂಕಕ್ಕೆ ಒಳಗಾಗಬೇಡಿ. ಮನುಷ್ಯನ ಮಿದುಳಿಗೆ ಅಪಾರವಾದ ಶಕ್ತಿಯಿದೆ. ಪ್ರತಿಯೊಬ್ಬರು ಪ್ರತಿಭಾವಂತರೆ ಎಂಬ ಆತ್ಮವಿಶ್ವಾಸವಿರಲಿ. ಕೆಲವರಿಗೆ ಕೆಲವು ವಿಷಯಗಳು ಕಷ್ಟವಾಗಬಹುದು. ಅದಕ್ಕೆ ಪರಿಶ್ರಮವನ್ನು ನಿಯಮಿತವಾಗಿ ಹಾಕುವುದು ಅನಿವಾರ್ಯ.

ಮನುಷ್ಯನ ಮಿದುಳಿಗೆ ಅಪಾರವಾದ ಶಕ್ತಿಯಿದೆ. ಪ್ರತಿಯೊಬ್ಬರೂ ಪ್ರತಿಭಾವಂತರೆ ಎಂಬ ಆತ್ಮವಿಶ್ವಾಸವಿರಲಿ. ಕೆಲವರಿಗೆ ಕೆಲವು ವಿಷಯಗಳು ಕಷ್ಟವಾಗಬಹುದು. ಅದಕ್ಕೆ ಪರಿಶ್ರಮವನ್ನು ನಿಯಮಿತವಾಗಿ ಹಾಕುವುದು ಅನಿವಾರ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.