ಹಾಂಗ್‌ಝೌ: ಏಷ್ಯನ್ ಕ್ರೀಡಾಕೂಟದ 3X3 ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಭಾರತಕ್ಕೆ ಸೋಮವಾರ ಮಿಶ್ರ ಫಲ ದೊರೆಯಿತು.
ಪುರುಷರ ತಂಡದವರು ಮಲೇಷ್ಯಾ ವಿರುದ್ಧ ಗೆದ್ದರೆ, ಮಹಿಳೆಯರು ಉಜ್ಬೆಕಿಸ್ತಾನ ಕೈಯಲ್ಲಿ ಪರಾಭವಗೊಂಡರು.
ಪುರುಷರ ವಿಭಾಗದ ‘ಸಿ’ ಗುಂಪಿನ ಪಂದ್ಯದಲ್ಲಿ ಸಹಜ್ ಪ್ರತಾಪ್ ಸಿಂಗ್ (10 ಪಾಯಿಂಟ್ಸ್) ಅವರ ಉತ್ತಮ ಆಟದ ನೆರವಿನಿಂದ ಭಾರತ, 20–16 ರಿಂದ ಜಯ ಸಾಧಿಸಿತು. ಮುಂದಿನ ಪಂದ್ಯದಲ್ಲಿ ಬುಧವಾರ ಮಕಾವ್ ವಿರುದ್ಧ ಪೈಪೋಟಿ ನಡೆಸಲಿದೆ.
ಮಹಿಳೆಯರ ವಿಭಾಗದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ, 14–19 ರಿಂದ ಉಜ್ಬೆಕಿಸ್ತಾನಕ್ಕೆ ತಲೆಬಾಗಿತು. ಫರಾನಿಜ್ ಜಲಿಯೊವಾ ಮತ್ತು ಅನಸ್ತೇಸಿಯಾ ಸೊಯ್ ಅವರು ಎದುರಾಳಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತ ತಂಡದ ವೈಷ್ಣವಿ 9 ಪಾಯಿಂಟ್ಸ್ ಕಲೆಹಾಕಿ ಗಮನ ಸೆಳೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.