ಬೆಂಗಳೂರಿನಲ್ಲಿ 400 ಮಂದಿ ನೇಮಕ: ಮೆಷ್ರೇಕ್‌ ಬ್ಯಾಂಕ್‌

7

ಬೆಂಗಳೂರಿನಲ್ಲಿ 400 ಮಂದಿ ನೇಮಕ: ಮೆಷ್ರೇಕ್‌ ಬ್ಯಾಂಕ್‌

Published:
Updated:

ಬೆಂಗಳೂರು: ಭಾರತದಲ್ಲಿ ವಹಿವಾಟು ವೃದ್ಧಿಯ ಭಾಗವಾಗಿ ಬೆಂಗಳೂರಿನಲ್ಲಿ ತನ್ನ ಸಿಬ್ಬಂದಿ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ದುಬೈನ ಖಾಸಗಿ ವಲಯದ ಮಷ್ರೇಕ್‌ ಬ್ಯಾಂಕ್‌ ನಿರ್ಧರಿಸಿದೆ.

‘18 ರಿಂದ 24 ತಿಂಗಳ ಒಳಗಾಗಿ ಬೆಂಗಳೂರಿನಲ್ಲಿ ಸಿಬ್ಬಂದಿ ಸಂಖ್ಯೆಯನ್ನು 400 ರಿಂದ 800ಕ್ಕೆ ಹೆಚ್ಚಿಸಲಾಗುವುದು’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸಂತೋಷ್‌ ಮಹಾಲಿಂಗಮ್‌ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿ 40 ವರ್ಷಗಳು ಕಳೆದಿವೆ. 15 ವರ್ಷಗಳಿಂದ ಬೆಂಗಳೂರಿನಲ್ಲಿ ಮಷ್ರೇಕ್‌ ಗ್ಲೋಬಲ್ ಸರ್ವೀಸಸ್‌ ಕಾರ್ಯನಿರ್ವಹಿಸುತ್ತಿದೆವಿಶ್ವದರ್ಜೆಯ ಕೌಶಲಗಳನ್ನು ಕರಗತ ಮಾಡಿಕೊಂಡಿರುವವರು ಈ ನಗರದಲ್ಲಿದ್ದಾರೆ. ಹೀಗಾಗಿ ನಮ್ಮ ವಹಿವಾಟು ವಿಸ್ತರಣೆ ಯೋಜನೆಗಾಗಿ ಈ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ವಿಶ್ಲೇಷಣೆ, ತಂತ್ರಜ್ಞಾನ ವಹಿವಾಟು, ಬ್ಯಾಂಕಿಂಗ್‌ ಕಾರ್ಯಾಚರಣೆ ಮತ್ತು ತಂತ್ರಜ್ಞಾನ ಬೆಂಬಲ ಕ್ಷೇತ್ರಗಳಲ್ಲಿ ನಮ್ಮ ಅಸ್ತಿತ್ವ ಕಂಡುಕೊಳ್ಳಲಾಗುವುದು. ಸದ್ಯ ಏಳು ಸ್ಟಾರ್ಟ್‌ಅಪ್‌ಗಳಿಗೆ ನೆರವು ನೀಡಲಾಗುತ್ತಿದ್ದು, ಅದರಲ್ಲಿ ಐದು
ಸ್ಟಾರ್ಟ್‌ಅಪ್‌ಗಳು ಬೆಂಗಳೂರಿನಲ್ಲಿ  ಇವೆ’ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !