ಶನಿವಾರ, ಜನವರಿ 25, 2020
22 °C

PUC, ITI, DIPLOMA ಆದವರಿಂದ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಉದ್ಯೋಗಕ್ಕೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಲಬುರ್ಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಹಾಲು ಉತ್ಪಾದಕರ ಒಕ್ಕೂಟ (ಗುಮುಲ್‌) 37 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿಗಳನ್ನು ಸಲ್ಲಿಸಬಹುದು.

ಹುದ್ದೆಗಳ ಸಂಖ್ಯೆ: 37

ಹುದ್ದೆಗಳು: ಮಾರುಕಟ್ಟೆ ಅಧೀಕ್ಷಕರು, ವಿಸ್ತರಣಾಧಿಕಾರಿ ದರ್ಜೆ–3, ಕಿರಿಯ ತಾಂತ್ರಿಕರು, ಮಾರುಕಟ್ಟೆ ಅಧಿಕಾರಿ,  ಮಾರುಕಟ್ಟೆ ಅಧೀಕ್ಷಕರು ಮತ್ತು ಖರೀದಿ/ಉಗ್ರಾಣಾಧಿಕಾರಿ.

ವಿದ್ಯಾರ್ಹತೆ: ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ (ಹುದ್ದೆಗೆ ಅನುಗುಣವಾಗಿ ನಿಗದಪಡಿಸಲಾಗಿದೆ).

ವಯೋಮಿತಿ: ಕನಿಷ್ಠ18, ಗರಿಷ್ಠ 35. (ಮೀಸಲಾತಿ ಅನ್ವಯ ಸಡಿಲಿಕೆ ಇದೆ).

ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ–1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ₹400. ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹800.

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.

ಉದ್ಯೋಗ ಸ್ಥಳ: ಕಲಬುರ್ಗಿ.

ಅರ್ಜಿ ಸಲ್ಲಿಸಲು ಕೊನೆಯ ದಿನ: 6 ಜನವರಿ 2020.

ಹೆಚ್ಚಿನ ಮಾಹಿತಿಗೆ: http://recruit-app.com/gumul2019/

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು