ಬುಧವಾರ, ಜುಲೈ 15, 2020
23 °C

6 ಸರ್ಕಾರಿ ನೌಕರಿ ಪಡೆದ ತೆಲಸಂಗ ಯುವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ: ಇಲ್ಲಿನ ಯುವಕ ನಾಗೇಶ ಈಶ್ವರ ಮಾಳಿ ಕಷ್ಟಪಟ್ಟು ಓದಿ 6 ಸರ್ಕಾರಿ ನೌಕರಿಗೆ ಆಯ್ಕೆಯಾಗುವ ಮೂಲಕ ಗಮನಸೆಳೆದಿದ್ದಾರೆ.

ಬಡತನದ ನಡುವೆ ಓದಿದವರು ಇವರು. ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ವ್ಯಾಸಂಗವನ್ನು ಕನ್ನಡ ಮಾಧ್ಯಮದಲ್ಲಿ ಮಾಡಿದ್ದಾರೆ. ಬಿಎ, ಬಿ.ಇಡಿ. ಎಂ.ಎ., ಎಂ.ಇಡಿ.ಯನ್ನು ಉನ್ನತ ಶ್ರೇಣಿಯಲ್ಲಿ ಪಾಸ್ ಮಾಡಿದ್ದಾರೆ. 2019ರಲ್ಲಿ ರೈಲ್ವೆ ಇಲಾಖೆಯ ಮೆಕ್ಯಾನಿಕಲ್‌  ವಿಭಾಗದಲ್ಲಿನ ಕೆಲಸಕ್ಕೆ ಸೇರಿದ್ದರು. ಅದೇ ಇಲಾಖೆಯಲ್ಲಿ ಸಿ ಅಂಡ್ ಡಬ್ಲ್ಯು ವಿಭಾಗದ ಕೆಲಸಕ್ಕೆ ಆಯ್ಕೆಯಾಗಿದ್ದರು. ಅರಣ್ಯ ರಕ್ಷಕ, ಪ್ರೌಢಶಾಲಾ ಶಿಕ್ಷಕ, ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕ ಮತ್ತು ಕಂಪ್ಯೂಟರ್‌ ಆಪರೇಟರ್‌ ಆಗಿದ್ದರು. ನೌಕರಿ ಮಾಡುತ್ತಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದರು. ಯುಜಿಸಿ ನಡೆಸುವ ರಾಷ್ಟ್ರೀಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ನೆಟ್) ಪಾಸ್ ಮಾಡಿ ಅರ್ಹತೆ ಪಡೆದಿದ್ದಾರೆ. ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕನ್ನಡ ವಿಷಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ, ಇತ್ತೀಚೆಗೆ ಆಯ್ಕೆಯಾಗಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿಲಯಪಾಲಕ ಹುದ್ದೆಗೆ ಸೇರುವುದಾಗಿ ತಿಳಿಸಿದ್ದಾರೆ.

‘ಕೆಪಿಎಸ್‌ಸಿ ಪಾಸ್ ಮಾಡಿ, ಕೆಎಎಸ್‌ ಅಧಿಕಾರಿ ಆಗಬೇಕು ಎನ್ನುವುದು ನನ್ನ ಆಸೆಯಾಗಿದೆ’ ಎನ್ನುತ್ತಾರೆ ಅವರು.

‘ಸೋಲಿಗೆ ನಾವೆ ಕಾರಣರಾಗಿರುತ್ತೇವೆ. ಆದರೆ ವ್ಯವಸ್ಥೆ ಮತ್ತು ಇತರ ನೆಪಗಳನ್ನು ಹೇಳಿ ದೂರುತ್ತಲೇ ಸಮಯ ವ್ಯರ್ಥ ಮಾಡುತ್ತೇವೆ. ಓದಿ ಸಾಧಿಸಲು ಸಮಯ ಮಾಡಿಕೊಳ್ಳಬೇಕಷ್ಟೆ. ಯಾವುದೋ ಸ್ಪರ್ಧಾತ್ಮಕ ಪರೀಕ್ಷೆ ಬರೆದಾಕ್ಷಣ ಓದು ನಿಲ್ಲಿಸಬಾರದು. ಸೋಲುಗಳು ಎದುರಾಗಬಹುದು. ಆದರೆ, ಗುರಿ ಸ್ಪಷ್ಟವಾಗಿದ್ದರೆ ಸೋಲೆ ಗೆಲುವಿಗೆ ದಾರಿಯಾಗುತ್ತದೆ’ ಎನ್ನುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.