ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೇಂದ್ರ ರೈಲ್ವೆ: ಕ್ಲರ್ಕ್‌, ಲೋಕೊ ಪೈಲಟ್, ಗೂಡ್ಸ್‌ ಗಾರ್ಡ್‌ಗಳಿಗೆ ಅರ್ಜಿ

Last Updated 7 ನವೆಂಬರ್ 2019, 6:38 IST
ಅಕ್ಷರ ಗಾತ್ರ

ಬೆಂಗಳೂರು:ಉತ್ತರ ಕೇಂದ್ರ ರೈಲ್ವೆಯಲ್ಲಿ ಖಾಲಿ ಇರುವ ಸ್ಟೆಷನ್‌ ಮಾಸ್ಟರ್‌, ಟಿಕೆಟ್‌ ಕ್ಲರ್ಕ್‌, ಸಹಾಯಕ ಲೋಕೊ ಪೈಲಟ್‌, ಗೂಡ್ಸ್‌ ಗಾರ್ಡ್‌, ಜೂನಿಯರ್‌ ಕ್ಲರ್ಕ್‌, ಟ್ರ್ಯಾಕ್‌ ಸಹಾಯಕ ಹುದ್ದೆಗಳ ನೇಮಕಾತಿಗೆ ಜನರಲ್‌ ಡಿಪಾರ್ಟ್‌ಮೆಂಟಲ್‌ ( ಉತ್ತರ ಕೇಂದ್ರ ರೈಲ್ವೆಯಲ್ಲಿಸೇವೆಯಲ್ಲಿ ಇರುವವರು)ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಉತ್ತರ ಕೇಂದ್ರ ರೈಲ್ವೆಯ ವಿವಿಧ ವಿಭಾಗಗಳು, ಘಟಕಗಳು, ಮುಖ್ಯ ಕಚೇರಿಗಳು, ಕಾರ್ಯಾಗಾರಗಳು ಮತ್ತು ಫ್ಯಾಕ್ಟರಿಯಲ್ಲಿ ಸೇವೆ ಸಲ್ಲಿಸುತ್ತಿರುವವರು (ಆರ್‌ಪಿಎಫ್‌/ಆರ್‌ಪಿಎಸ್‌ಎಫ್‌, ಕಾನೂನು ಸಹಾಯಕ, ಕೆಟರಿಂಗ್, ಪರ್ಸನಲ್‌, ಇನ್ಸ್‌ಪೆಕ್ಟರ್‌ ಮತ್ತು ಅಕೌಂಟ್‌ ಕೇಡರ್‌ನಲ್ಲಿ ಕೆಲಸ ಮಾಡುವವರನ್ನು ಹೊರುತುಪಡಿಸಿ) ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಖಾಲಿ ಇರುವ ಹುದ್ದೆಗಳ ವಿವರ...

1) ಹಿರಿಯಕಮರ್ಷಿಯಲ್‌ ಕಂ ಟಿಕೆಟ್‌ ಕ್ಲರ್ಕ್‌: 59 ಹುದ್ದೆಗಳು

2)ಕಮರ್ಷಿಯಲ್‌ ಕಂ ಟಿಕೆಟ್‌ ಕ್ಲರ್ಕ್‌: 104 ಹುದ್ದೆಗಳು

3) ಸ್ಟೇಷನ್‌ ಮಾಸ್ಟರ್‌: 5 ಹುದ್ದೆಗಳು

4) ಸಹಾಯಕ ಲೋಕೊ ಪೈಲೆಟ್‌: 50 ಹುದ್ದೆಗಳು

5) ಹಿರಿಯ ಕ್ಲರ್ಕ್‌ ಕಂ ಟೈಪಿಸ್ಟ್‌: 51 ಹುದ್ದೆಗಳು

6) ಕ್ಲರ್ಕ್‌ ಕಂ ಟೈಪಿಸ್ಟ್‌: 66 ಹುದ್ದೆಗಳು

7) ಗೂಡ್ಸ್‌ ಹಾರ್ಡ್‌: 53 ಹುದ್ದೆಗಳು

8) ಟ್ರ್ಯಾಕ್‌ ಸಹಾಯಕ; 105 ಹುದ್ದೆಗಳು

ವಿದ್ಯಾರ್ಹತೆ...

ಸಂಬಂಧಿತ ಹುದ್ದೆಗಳ ವಿದ್ಯಾರ್ಹತೆಯ ಮಾಹಿತಿಯನ್ನು ಉತ್ತರ ಕೇಂದ್ರ ರೈಲ್ವೆ ಪ್ರಕಟಿಸಿರುವ ಅಧಿಸೂಚನೆಯನ್ನು ನೋಡುವುದು.

ಗರಿಷ್ಠ ವಯೋಮಿತಿ

ಸಾಮಾನ್ಯ ಅಭ್ಯರ್ಥಿಗಳು:42 ವರ್ಷಗಳು

ಇತರೆ ಹಿಂದುಳಿದ ವರ್ಗ (ಒಬಿಸಿ):45 ವರ್ಷಗಳು

ಎಸ್‌ಸಿ/ಎಸ್‌ಟಿ:47 ವರ್ಷಗಳು

ಅರ್ಜಿ ಶುಲ್ಕ:ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ

ನೇಮಕಾತಿ ವಿಧಾನ:ಕಂಪ್ಯೂಟರ್‌ ಬೇಸ್ಡ್‌ ಟೆಸ್ಟ್‌ ಮೂಲಕ ನೇಮಕಾತಿ ಪರೀಕ್ಷೆ ನಡೆಯಲಿದೆ. ಹಿಂದಿ, ಇಂಗ್ಲಿಷ್‌ ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ವೇತನ:ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಅನ್ವಯದಂತೆ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.

ಅರ್ಜಿಸಲ್ಲಿಸುವ ವಿಧಾನ

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌ https://iswarsaran.empfrm.com ಗೆ ಲಾಗಿನ್‌ ಆಗಿ ಅರ್ಜಿಗಳನ್ನು ಸಲ್ಲಿಸಬಹುದು.

ಕೊನೆಯ ದಿನಾಂಕ

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು2019ರ ನವೆಂಬರ್‌ 26 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೈಲ್ವೆ ಇಲಾಖೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ನೋಡಬಹುದಾಗಿದೆ. ಈ ಕೆಳಗೆ ಅಧಿಸೂಚನೆ ಲಿಂಕ್‌ ನೀಡಲಾಗಿದೆ.

ಅಧಿಸೂಚನೆ ಲಿಂಕ್‌:https://bit.ly/2qyhaeU

ವೆಬ್‌ಸೈಟ್‌:https://ncr.indianrailways.gov.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT