ಶುಕ್ರವಾರ, ಜನವರಿ 24, 2020
18 °C

SBI BANK | ಪದವೀಧರರಿಂದ 8134 ಕ್ಲರ್ಕ್‌ ಹುದ್ದೆಗಳಿಗೆ ಅರ್ಜಿ: ₹ 31,450 ವೇತನ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಜೂನಿಯರ್‌ ಅಸೋಸಿಯೇಟ್ಸ್‌ (ಕಸ್ಟಮರ್‌ ಸಪೋರ್ಟ್‌ ಮತ್ತು ಸೇಲ್ಸ್‌) ಕ್ಲರಿಕಲ್‌ ಕೇಡರ್‌ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 

 ಕರ್ನಾಟಕ ರಾಜ್ಯದಲ್ಲಿ 475 ಹುದ್ದೆಗಳು ಸೇರಿದಂತೆ ದೇಶದಾದ್ಯಂತ ಒಟ್ಟು 8134 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಅರ್ಜಿಸಲ್ಲಿಸಲು 26–01–2020 ಕೊನೆಯ ದಿನವಾಗಿದೆ. 

ಹುದ್ದೆಗಳ ವಿವರ

ಹುದ್ದೆಯ ಹೆಸರು: ಜೂನಿಯರ್‌ ಅಸೋಸಿಯೇಟ್ಸ್‌ 

ಹುದ್ದೆಗಳ ಒಟ್ಟು ಸಂಖ್ಯೆ: 8243

ಮೀಸಲಾತಿ: ಸಾಮಾನ್ಯ–3447, ಎಸ್‌ಸಿ–1214, ಎಸ್‌ಟಿ–746, ಒಬಿಸಿ–1803, ಇಎಸ್‌ಎಂ–790 ಅಂಗವಿಕಲರು–243

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.  

ವೇತನ ಶ್ರೇಣಿ: ₹ 11765 (ಮೂಲ ವೇತನ) ಸೇರಿದಂತೆ ಇತರೆ ಭತ್ಯೆಗಳು ಸೇರಿ ಮಾಸಿಕ ₹ 31,450 ವೇತನ ಪಡೆಯಬಹುದು.

ವಯಸ್ಸು: 01–01–2020ಕ್ಕೆ ಕನಿಷ್ಠ 20 ವರ್ಷಗಳು, ಗರಿಷ್ಠ 28 ವರ್ಷಗಳ ವಯೋಮಿತಿಯಲ್ಲಿ ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಆದಾಗ್ಯೂ ಸರ್ಕಾರಿ ನಿಯಮಾವಳಿಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ವಯೋಮಿತಿ ಸಡಿಲಿಕೆ: ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳು.

ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೆ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಇತರೆ ಅಭ್ಯರ್ಥಿಗಳಿಗೆ ₹ 750 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. 

ನೇಮಕಾತಿ ಪ್ರಕ್ರಿಯೆ: ಎರಡು ಹಂತಗಳಲ್ಲಿ ನೇಮಕಾತಿ ಪರೀಕ್ಷೆ ನಡೆಸಲಾಗುವುದು. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ಇರುತ್ತದೆ. ಪೂರ್ವಭಾವಿ ಪರೀಕ್ಷೆಯನ್ನು 100 ಅಂಕಗಳಿಗೆ, ಮುಖ್ಯ ಪರೀಕ್ಷೆಯನ್ನು 200 ಅಂಕಗಳಿಗೆ ನಡೆಸಲಾಗುವುದು. ಅಂತಿಮವಾಗಿ ಸ್ಥಳೀಯ ಭಾಷಾ ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುವುದು.

ಅರ್ಜಿಸಲ್ಲಿಸುವ ವಿಧಾನ:  ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌ bank.sbi/careers ಅಥವಾ www.sbi.co.in ಗೆ ಲಾಗಿನ್‌ ಆಗಿ ಅರ್ಜಿಗಳನ್ನು ಸಲ್ಲಿಸಬಹುದು. 

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 2020ರ ಜನವರಿ 26 ಕೊನೆ ದಿನವಾಗಿದೆ. 

ಹೆಚ್ಚಿನ ಮಾಹಿತಿಗಾಗಿ ಎಸ್‌ಬಿಐ ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ನೋಡಬಹುದು. ಈ ಕೆಳಗೆ ಅಧಿಸೂಚನೆ ಲಿಂಕ್‌ ನೀಡಲಾಗಿದೆ. 

ಅಧಿಸೂಚನೆ ಲಿಂಕ್‌: https://bit.ly/39y9pb3

ವೆಬ್‌ಸೈಟ್‌: www.sbi.co.in

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು