ಒತ್ತಡ ನಿವಾರಣೆಯ ಸುಲಭ ಸಾಧನ

7

ಒತ್ತಡ ನಿವಾರಣೆಯ ಸುಲಭ ಸಾಧನ

Published:
Updated:

ಈ ಸಾಧನಗಳು ದೇಹದ ವ್ಯಾಯಾಮದ ಜೊತೆಗೆ ಒತ್ತಡ ನಿವಾರಿಸಿಕೊಳ್ಳಲು ಕೂಡ ಸಹಕಾರಿ. ಇವು ಮಾರುಕಟ್ಟೆಯಲ್ಲಿ ಕೈಗೆಟು
ಕುವ ದರದಲ್ಲಿದೆ. ಅಷ್ಟೇ ಅಲ್ಲ ಇದನ್ನು ಬಳಸಲು ಹೆಚ್ಚು ಶ್ರಮ ಪಡಬೇಕಾಗಿಲ್ಲ, ಹೆಚ್ಚು ಜಾಗದ ಅವಶ್ಯಕತೆಯೂ ಇರುವುದಿಲ್ಲ. ಮೊದಮೊದಲು ವ್ಯಾಯಾಮ ಮಾಡುವವರಿಗೆ, ಬಿಡುವಿನ ಸಮಯದಲ್ಲಿ ವ್ಯಾ‍ಯಾಮ ಮಾಡುವವರಿಗೆ ಇವು ಸಹಾಯಕ. 

1. ವಿನ್‌ಮ್ಯಾಕ್ಸ್‌ ಬ್ರಾಂಡ್‌ ಗ್ರಿಪ್‌: ಈ ಸಾಧನ ಕಟಿಂಗ್ ಪ್ಲೆಯರ್‌ನ ರೀತಿಯಲ್ಲಿರುತ್ತದೆ. ಕೈಬೆರಳುಗಳನ್ನು ಈ ಸಾಧನದ ಹಿಡಿಕೆಗೆ ಅನುಗುಣವಾಗಿ ಹಿಡಿದುಕೊಳ್ಳಬಹುದು. ಸ್ಪಂಜ್‌ ಹಿಂಡಿದ ಹಾಗೆ ಇದರ ಹಿಡಿಕೆಯನ್ನು ಹಿಡಿದು, ಬಿಡುವುದನ್ನು ಮಾಡಬಹುದು. ಇದನ್ನು ಬಳಸುವುದರಿಂದ ಕೈಬೆರಳಗಳು ಸದೃಢವಾಗುತ್ತವೆ. ಪ್ಲಾಸ್ಟಿಕ್‌ನಿಂದ ಮಾಡಿದ ಸಾಧನಗಳೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬ್ರಾಂಡ್‌ ಗ್ರಿಪ್‌ನಲ್ಲಿ ಸ್ವಲ್ಪ ದೊಡ್ಡ ಮಟ್ಟದ ಸಾಧನಗಳೂ ಲಭ್ಯವಿದ್ದು ತೋಳು, ಭುಜದ ವ್ಯಾಯಾಮ ಮಾಡಲು ಸಹ ಬಳಸಬಹುದಾಗಿದೆ. ಇದರಲ್ಲಿಯೂ ಕೈ ಹಿಡಿಕೆ ಅನುಗುಣವಾಗಿ ಹೊಂದಿಸಿಕೊಳ್ಳಲು ಸಾಧ್ಯವಿದೆ. 

ಒತ್ತಡ ನಿವಾರಣೆಗೆ ಸಹಾಯಕ: ಒತ್ತಡದ ಸಮಯದಲ್ಲಿ ಇದನ್ನು ಬಳಸಬಹುದು. 1 ರಿಂದ 10 ಸಂಖ್ಯೆಗಳನ್ನು ಎಣಿಸುತ್ತ, ಇದನ್ನು ಬಳಸುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳುವುದಕ್ಕೂ ಇದು ಸಹಾಯಕವಾಗಿದೆ.  

2. ರೋಲರ್‌ ವಿಲ್ಸ್‌: ಸುಲಭವಾಗಿ ಬಳಸಬಹುದಾದ ಸಾಧನಗಳಲ್ಲಿ ಇದು ಒಂದು. ಹಿಡಿಕೆಯೊಂದಿರುವ ಚಿಕ್ಕ ಚಕ್ರದಂತೆ ಈ ಸಾಧನವಿರುತ್ತದೆ. ಈ ಸಾಧನವನ್ನು ಬಳಸಿಸುವಾಗ ವ್ಯಾಯಾಮಕ್ಕೆ ಬಳಸುವ ಮ್ಯಾಟ್‌ ಅಥವಾ ನೆಲದ ಮೇಲೆ ಬಟ್ಟೆಯನ್ನು ಬಳಸುವುದು ಉತ್ತಮ. ಈ ಸಾಧನದಲ್ಲಿರುವ ಹಿಡಿಕೆಯನ್ನು ಎರಡೂ ಕೈಗ‍ಳಲ್ಲಿ ಹಿಡಿದು ಕೊಂಡು, ಕೈಗಳನ್ನು ಎಷ್ಟು ದೂರಕ್ಕೆ ಮುಂದಕ್ಕೆ (ನೆಲದ ಮೇಲೆ ಚಕ್ರವಿರಲಿ) ಚಾಚಲು ಸಾಧ್ಯವೊ ಅಷ್ಟು ಮುಂದಕ್ಕೆ ಚಾಚಬೇಕು. ಪುಷ್‌ಅಪ್‌ನಲ್ಲಿ ಬಳಸುವ ನಿಯಮಗಳನ್ನು ಈ ಸಾಧನ ಬಳಸುವಾಗಲೂ ಪಾಲಿಸಬೇಕಾಗುತ್ತದೆ. ಮೊದಲ ಹಂತದಲ್ಲಿ ಕಾಲಿನ ಬೆರಳುಗಳನ್ನು ನೆಲಮುಖಕ್ಕಿರುವಂತೆ, ಕೈ ಬೆರಳುಗಳು ಭುಜದ ನೇರಕ್ಕಿರುವಂತೆ ನೋಡಿಕೊಳ್ಳಿ. ಎರಡನೆ ಹಂತದಲ್ಲಿ ಮಂಡಿಯೂರಿ. ಮೊದಲ ಮತ್ತು ಎರಡನೇ ಹಂತದಲ್ಲಿ ಬೆನ್ನಿನ ಭಾಗ ನೇರವಾಗಿರಲಿ. ಈ ಸಾಧನವನ್ನು ಮಂಡಿಯೂರಿ ಮತ್ತು ಮಂಡಿಯೂರದೆ ಎರಡೂ ರೀತಿಯಲ್ಲಿ ನಿಮಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಬಳಸಬಹುದು.

ಈ ಸಾಧನವನ್ನು ಬಳಸುವುದು ತುಂಬಾ ಸುಲಭದಂತೆ ಕಂಡರೂ, ಎಚ್ಚರವಹಿಸಿ ನಿಧಾನವಾಗಿ ಮಾಡುವುದು ಉತ್ತಮ. ಇಲ್ಲವಾದರೆ ಕೈ ಮತ್ತು ಕಾಲಿನ ಸ್ನಾಯುಗಳಿಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !