ಲೆದರ್ ಟೆಕ್ನಾಲಜಿಯಲ್ಲಿ ಇರುವ ಅವಕಾಶಗಳು

7
ನಿಮ್ಮ ಪ್ರಶ್ನೆ ನಮ್ಮ ಉತ್ತರ

ಲೆದರ್ ಟೆಕ್ನಾಲಜಿಯಲ್ಲಿ ಇರುವ ಅವಕಾಶಗಳು

Published:
Updated:

1. ನಾನು ಪ್ರಥಮ ಪಿ.ಯು.ಸಿ. (ಪಿ.ಸಿ.ಎಂ.ಬಿ.) ಓದುತ್ತಿದ್ದೇನೆ. ನನಗೆ ಮೆಡಿಕಲ್ ಅಥವಾ ಪ್ಯಾರಾ ಮೆಡಿಕಲ್ ಕೋರ್ಸ್ ಮೇಲೆ ಒಲವಿಲ್ಲ. ಲೆದರ್ ಟೆಕ್ನಾಲಜಿ ಬಗ್ಗೆ ಕೇಳಿದ್ದೇನೆ. ನನಗೆ ಆ ಕ್ಷೇತ್ರದ ಬಗ್ಗೆ ಮಾಹಿತಿ ನೀಡುತ್ತೀರಾ?
-ಭೃಗು, ದಾವಣಗೆರೆ

ಉತ್ತರ: ನೀವು ಹೆಚ್ಚಿನ ವಿದ್ಯಾರ್ಥಿಗಳಿಗೆ ಅರಿವಿಲ್ಲದ ಕೋರ್ಸ್ ಬಗ್ಗೆ ಕೇಳಿರುವುದು ಸಂತೋಷ. ಇಂಡಿಯನ್ ಲೆದರ್ ಇಂಡಸ್ಟ್ರಿ ಪ್ರಪಂಚದಲ್ಲಿ 4ನೇ ಎಕ್ಸ್‌ಪೋರ್ಟ್ ಇಂಡಸ್ಟ್ರಿಯ ಸ್ಥಾನ ಪಡೆದಿದೆ. ಹೊರದೇಶದಲ್ಲೇ ಅಲ್ಲದೆ ನಮ್ಮ ದೇಶದಲ್ಲೂ ‘ಲೆದರ್’ (ಚರ್ಮ) ಬೇಡಿಕೆ ದಿನದಿನಕ್ಕೆ ಹೆಚ್ಚುತ್ತಿದೆ. ಹ್ಯಾಂಡ್ ಬ್ಯಾಗ್‌ಗಳು, ವಾಲೆಟ್‌ಗಳು, ಬೆಲ್ಟ್‌ಗಳು, ಚಪ್ಪಲಿ–ಷೂಗಳು, ಸೋಫಾ ಇನ್ನೂ ಅನೇಕ ಲೆದರ್ ಉತ್ಪನ್ನಗಳು ಹೊಸದಾದ ರೀತಿಯಲ್ಲಿ ಹೊರಬರುತ್ತಿವೆ.

ಹೆಚ್ಚು ಲೆದರ್ ಇಂಡಸ್ಟ್ರಿಗಳನ್ನು ಆಗ್ರಾ, ಕಾನ್ಪುರ, ಕೊಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ಕಾಣಬಹುದು.  ಈ ಕಾರ್ಖಾನೆಗಳಲ್ಲಿ ಮೂರು ವಿಭಾಗಗಳಲ್ಲಿ ಕೆಲಸ ಮಾಡುತ್ತಾರೆ.

1. ಡಿಸೈನಿಂಗ್ 
2. ಮ್ಯಾನುಫ್ಯಾಕ್ಟರಿಂಗ್ 
3. ಮಾರ್ಕೆಟಿಂಗ್ 

ನಿಮ್ಮಲ್ಲಿ ಸೃಜನಶೀಲತೆ, ಹೊಸ ರೀತಿಯ ಯೋಚನೆ, ಮಾರುಕಟ್ಟೆಯ ಅಗತ್ಯಗಳನ್ನು ಗ್ರಹಿಸುವಿಕೆ, ತಲ್ಲೀನತೆ – ಈ ಗುಣಗಳು ಇದ್ದಲ್ಲಿ ನೀವು ಈ ಕೋರ್ಸ್‌ನ್ನು ಸೇರಬಹುದು. ಲೇದರ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ, ಬಿಎಸ್ಸಿ., ಬಿ.ಟೆಕ್‌. ಮತ್ತು ಸ್ನಾತಕೋತ್ತರ ಕೋರ್ಸ್‌ಗಳು ಲಭ್ಯ. ಪಿಎಚ್‌.ಡಿ.ಯನ್ನು ಕೂಡ ಮಾಡಬಹುದು.

ಬಿ.ಟೆಕ್. (ಲೆದರ್ ಟೆಕ್ನಾಲಜಿ): 10 + 2 ಪಿ.ಸಿ.ಎಂ. ನಲ್ಲಿ ಶೇ 60 ಅಂಕಗಳು ಬಂದಿರುವವರು ಅರ್ಜಿಯನ್ನು ಸಲ್ಲಿಸಬಹುದು.

4 ವರ್ಷ ಅವಧಿಯ ಕೋರ್ಸ್ ಇದು. ಪ್ರತಿಯೊಂದು ಕಾಲೇಜು ಬೇರೆ ಬೇರೆ ಪ್ರವೇಶ ಪರೀಕ್ಷೆಗಳನ್ನು ಕೇಳುತ್ತಾರೆ.

ಕೆಲವು ಪದವಿ–ಸ್ನಾತಕೋತ್ತರ ಕಾಲೇಜುಗಳು:

1. →Anna University, Chennai

→Course: B.tech and M. tech

www.annauniv.edu

2.→Aryabhatta Knowledge University, Patna

→Course: B.tech

www.akuexam.net

3.→Central Leather Research Institute (CLRI), Chennai

→Course: B. tech/ M.tech/ P.hd

www.clri.org

4. Government College of Engineering and Leather Technology (GCELT) Kolkata

→Course: B. tech / M. tech

www.gcelt.gov.in

5. Mumbai Institute of Information Technology (MIII), Mumbai

→Course: B.tech

→‎info@miitcollege.in

ಕೆಲವು ಡಿಪ್ಲೊಮಾ ಕಾಲೇಜುಗಳು:

1.→AP Government Institute of Leather Technology, Hyderabad

→polytechnicts.cgg.gov.in

2. Central Footwear Training Center, West Bengal

www.cftc.org.in

3. Government Leather Institute, Agra

www.gliagra.com

4. Karnataka Institute of Leather Technology, Bangalore 

www.kiltbangalore.ac.in

5. Dayalbagh Educational Institute, Agra

www.dei.ac.in

ಲೆದರ್ ಟಿಕ್ನಾಲಜಿಯನ್ನು ಓದಿ ಉದ್ಯೋಗವನ್ನೂ ಮಾಡಬಹುದು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !