ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಭೀತಿ: ನೀಟ್ ಪರೀಕ್ಷೆ ಮುಂದೂಡಿಕೆ

Last Updated 27 ಮಾರ್ಚ್ 2020, 16:09 IST
ಅಕ್ಷರ ಗಾತ್ರ

ಕೊರೊನಾ ವೈರಸ್ ಸೋಂಕು ರಾಷ್ಟ್ರವ್ಯಾಪಿ ಹರಡುತ್ತಿರುವ ಹಿನ್ನೆಲೆಯಲ್ಲಿ ನೀಟ್ (NEET) ಮತ್ತು ಜೆಇಇ (JEE) ಪರೀಕ್ಷೆಗಳನ್ನು ಮೇ ಕೊನೆಯವಾರಕ್ಕೆ ಮುಂದೂಡಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಅನುಭವಿಸುತ್ತಿರುವ ಸಂಕಷ್ಟವನ್ನು ನಾವು ಗಮನಿಸಿದ್ದೇವೆ. ಇದೇ ಕಾರಣಕ್ಕೆ ನೀಟ್ ಪರೀಕ್ಷೆಯನ್ನು ಮುಂದೂಡಿದ್ದೇವೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನಿರ್ದೇಶಕ ಡಾ.ವಿನೀತ್ ಜೋಶಿ ಹೇಳಿದ್ದಾರೆ.

ಆದಷ್ಟೂ ಬೇಗ ದೇಶದಲ್ಲಿ ಸಾಮಾನ್ಯ ಸ್ಥಿತಿ ನೆಲೆಗೊಳ್ಳುವ ನಿರೀಕ್ಷೆಯಿದೆ. ವಿವಿಧ ಸಚಿವಾಲಯಗಳು ಮತ್ತು ಪರೀಕ್ಷಾ ಮಂಡಳಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ. ಮುಂದಿನ ದಿನಗಳಲ್ಲಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುತ್ತೇವೆ. ಸದ್ಯದ ಮಟ್ಟಿಗೆ 2020ರ ಮೇ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಮಾರ್ಚ್ 27ರಂದು ವಿತರಿಸಬೇಕಿದ್ದ ಅಡ್ಮಿಟ್ ಕಾರ್ಡ್‌ಗಳನ್ನು, ಪೂರಕ ವಾತಾವರಣ ಇದ್ದರೆ 15ನೇ ಏಪ್ರಿಲ್ ನಂತರ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಶೈಕ್ಷಣಿಕ ವೇಳಾಪಟ್ಟಿ ಮುಖ್ಯ ಎನ್ನುವುದು ನಮಗೆ ಗೊತ್ತಿದೆ. ಅದರ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯವೂ ನಮಗೆ ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷೆಯ ಬಗ್ಗೆ ಆತಂಕಪಡಬೇಕಿಲ್ಲ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಕೊಡಬೇಕು. ಪೋಷಕರು ಅವರಿಗೆ ಸಹಕರಿಸಬೇಕು. ಪರೀಕ್ಷೆಯ ಬಗ್ಗೆ ಎನ್‌ಟಿಎ ನಿಯಮಿತವಾಗಿ ಮಾಹಿತಿ ಕಳಿಸುತ್ತಿರುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.ಅಭ್ಯರ್ಥಿಗಳು ಮತ್ತು ಪೋಷಕರು ntaneet.nic.in ಮತ್ತು www.nta.ac.in ಜಾಲತಾಣಗಳಿಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳಬಹುದು. ನೋಂದಾಯಿತ ಮೊಬೈಲ್‌ ನಂಬರ್‌/ಇಮೇಲ್‌ಗಳಿಗೂ ನಿಯಮಿತವಾಗಿ ಮಾಹಿತಿ ಕಳಿಸಲಾಗುವುದು. ಹೆಚ್ಚಿನ ಮಾಹಿತಿಗೆ 8700028512, 8178359845, 9650173668, 9599676953, 8882356803 ಸಂಪರ್ಕಿಸಬಹುದು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT