ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್ | ಉತ್ಸರ್ಪಿಣಿ-ಅವಸರ್ಪಿಣಿ ಪರಿಕಲ್ಪನೆ ಯಾವ ಧರ್ಮದ್ದು?

Last Updated 7 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

1. ಉತ್ಸರ್ಪಿಣಿ-ಅವಸರ್ಪಿಣಿ ಎಂಬ ಪರಿಕಲ್ಪನೆ ಯಾವ ಧರ್ಮಕ್ಕೆ ಸಂಬಂಧಿಸಿದ್ದು?

ಅ) ವೈದಿಕ ಆ) ಬೌದ್ಧ ಇ) ಸಿಖ್ ಈ) ಜೈನ

2. ಇವರಲ್ಲಿ ಯಾರು ಮೈಸೂರು ಸಂಸ್ಥಾನದ ದಿವಾನರಾಗಿರಲಿಲ್ಲ?

ಅ) ಪಿ.ಎನ್. ಕೃಷ್ಣಮೂರ್ತಿ
ಆ) ಎಂ.ಎ. ಶ್ರೀನಿವಾಸನ್
ಇ) ಟಿ. ಆನಂದ ರಾವ್
ಈ) ಎನ್. ಮಾಧವ ರಾವ್

3. ‘ಕರೋಕೆ’ಯು ಹಾಡುಗಾರಿಕೆಗೆ ಏನನ್ನು ಒದಗಿಸುತ್ತದೆ?

ಅ) ಸಾಹಿತ್ಯ ಆ) ತಾಳ
ಇ) ಶ್ರುತಿ ಈ) ಹಿನ್ನೆಲೆ ವಾದ್ಯ ಸಂಗೀತ

4. ಕಾರ್ಲ್ ಲಿನ್ನೇಯಸ್ ಸಸ್ಯಶಾಸ್ತ್ರದ ಯಾವ ವಿಭಾಗಕ್ಕೆ ವಿಶೇಷ ಕೊಡುಗೆಯನ್ನು ನೀಡಿದ್ದಾನೆ?

ಅ) ಅಂಗಾಂಶ ಕೃಷಿ ಆ) ವರ್ಗೀಕರಣ
ಇ) ತಳಿ ಅಭಿವೃದ್ಧಿ ಈ) ಅನುವಂಶೀಯತೆ

5. ಇವುಗಳಲ್ಲಿ ಯಾವುದು ಎಚ್.ಎಲ್. ನಾಗೇಗೌಡರ ಕೃತಿ ಅಲ್ಲ?

ಅ) ಭೂಮಿಗೆ ಬಂದ ಗಂಧರ್ವ
ಆ) ಬೆಟ್ಟದಿಂದ ಬಟ್ಟಲಿಗೆ
ಇ) ಅದಮ್ಯ
ಈ) ಗಿರಿಜನ ಪ್ರಪಂಚ

6. ವಿದೇಶಿ ಕ್ರೀಡಾ ಕ್ಲಬ್‌ನೊಂದಿಗೆ ವೃತ್ತಿಪರ ಒಪ್ಪಂದ ಪಡೆದ ಭಾರತದ ಮೊತ್ತಮೊದಲ ಮಹಿಳಾ ಫುಟ್ಬಾಲ್ ಆಟಗಾರ್ತಿ ಯಾರು?

ಅ) ಬಾಲಾದೇವಿ ಆ) ಅದಿತಿ ಚೌಹ್ಹಾಣ್
ಇ) ತನ್ವಿ ಹನ್ಸ್ ಈ) ದಲಿಮಾ ಚಿಬ್ಬೇರ್

7. ಬೆಂಗಳೂರಿನಲ್ಲಿರುವ ಲಾಲ್‌ಬಾಗ್‌ನ ನಿರ್ಮಾಣ ಕಾರ್ಯ ಯಾರಿಂದ ಆರಂಭವಾಯಿತು?

ಅ) ಚಿಕ್ಕದೇವರಾಜ ಒಡೆಯರ್‌ ಆ) ಹೈದರಾಲಿ
ಇ) ಟಿಪ್ಪು ಸುಲ್ತಾನ್ ಈ) ಮಾರ್ಕ್‌ ಕಬ್ಬನ್

8. 1984ರಲ್ಲಿ ‘ಆಪರೇಷನ್ ಬ್ಲೂ ಸ್ಟಾರ್’ ಯಾವ ಸ್ಥಳದಲ್ಲಿ ನಡೆಯಿತು?

ಅ) ದೆಹಲಿ ಆ) ಅಮೃತಸರ
ಇ)ಗುವಾಹಟಿ ಈ) ಇಂದೋರ್

9. ‘ಬಿಗ್‌ ಬಾಸ್’ ಟಿವಿ ಕಾರ್ಯಕ್ರಮವು ಯಾವ ಕಾರ್ಯಕ್ರಮದ ಪರಿಕಲ್ಪನೆಯನ್ನು ಆಧರಿಸಿದೆ?

ಅ) ಬಿಗ್ ಬ್ರದರ್ ಆ) ಬಿಗ್ ಟೈಮ್
ಇ) ಬಿಗ್ ಹೌಸ್ ಈ) ಬಿಗ್ ಲೈಫ್

10. ‘ರೈತ’ ಎನ್ನುವುದು ಮೂಲತಃ ಯಾವ ಭಾಷೆಯ ಶಬ್ದ?

ಅ) ಕನ್ನಡ ಆ) ತೆಲುಗು ಇ) ಸಂಸ್ಕೃತ ಈ) ಅರೆಬಿಕ್

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಮೈಸೂರು, 2. ನಂದಲಾಲ ಬೋಸ್, 3. ಅಮೆಜಾನ್‌, 4. ವಿ.ಎಸ್. ನೈಪಾಲ್, 5. ಅರವತ್ತು, 6. ಅಸಂಗತ, 7. ಜನವರಿ 25, 8. ಕೃಷ್ಣಾ, 9. ಫುಟ್ಬಾಲ್, 10. ಜರ್ಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT